ಬೈಕ್ ಸವಾರರ ಮೇಲೆ ಬೇಸ್‌ಬಾಲ್ ಬ್ಯಾಟ್‌ನಿಂದ ಹಲ್ಲೆ; ವಿಡಿಯೋ ವೈರಲ್​​ | Viral Video

viral video
Published on

Viral Video: ಬಾಡಿ ಬಿಲ್ಡರ್‌ಗಳ ಗುಂಪೊಂದು ಬೈಕ್ ಸವಾರರ ಮೇಲೆ ಬೇಸ್‌ಬಾಲ್ ಬ್ಯಾಟ್‌ನಿಂದ ಹಲ್ಲೆಗೈದ ಘಟನೆ ಗುರುಗ್ರಾಮದಲ್ಲಿ ಸಂಭವಿಸಿದೆ. ಕಪ್ಪು ಬಣ್ಣದ ಸ್ಕಾರ್ಪಿಯೋ ಕಾರಿನಲ್ಲಿ ಬಂದ ಬಾಡಿಬಿಲ್ಡರ್‌ಗಳು, ಬೈಕ್ ಸವಾರರ ಮೇಲೆ ಭೀಕರವಾಗಿ ಹಲ್ಲೆ ನಡೆಸಿದ್ದು, ಓರ್ವ ಗಂಭೀರವಾಗಿ ಗಾಯಗೊಂಡಿದ್ದಾನೆ.

ಘಟನೆಯ ವೀಡಿಯೊದಲ್ಲಿ ಬೈಕ್ ಸವಾರರಲ್ಲಿ ಒಬ್ಬರು ದಾಳಿಕೋರರ ಬಳಿ ಅಂಗಲಾಚಿ ಬೇಡಿಕೊಳ್ಳುತ್ತಿರುವುದನ್ನು ಕಾಣಬಹುದು. ಎಷ್ಟೇ ಬೇಡಿದರೂ ಗೂಂಡಾಗಳು ಮಾತ್ರ ಆತನಿಗೆ ಬೆದರಿಸಿ, ಮನಬಂದತೆ ಥಳಿಸಿದ್ದಾರೆ. ಗುರುಗ್ರಾಮ್​ ಪೊಲೀಸ್ ಠಾಣೆಯಲ್ಲಿ ಈ ಪ್ರಕರಣ ದಾಖಲಾಗಿದ್ದು, ಶಂಕಿತರಿಗಾಗಿ ಪೊಲೀಸರು ಹುಡುಕಾಟ ನಡೆಸಿದ್ದಾರೆ.

ಅಸಲಿಗೆ ನಡೆದಿದ್ದೇನು?

ಏ.20ರಂದು ಬೈಕ್ ಸವಾರರ ಗುಂಪೊಂದು ಆಂಬಿಯನ್ಸ್ ಮಾಲ್​ನಿಂದ ಪಟೌಡಿಗೆ ತಿಂಡಿ ತಿನ್ನಲು ತೆರಳುತ್ತಿದ್ದಾಗ ಈ ಘಟನೆ ನಡೆದಿದೆ. ಕಪ್ಪು ಬಣ್ಣದ ಸ್ಕಾರ್ಪಿಯೋದಲ್ಲಿ ಬಂದ ವ್ಯಕ್ತಿಗಳು ಬೈಕ್ ಸವಾರರನ್ನು ಹಿಂಬಾಲಿಸುತ್ತಿದ್ದರು, ನಂತರ ಬಸಾಯಿ ವಿಲೇಜ್ ಫ್ಲೈಓವರ್‌ನಲ್ಲಿ ಅವರನ್ನು ತಡೆದು, ಬೈಕ್​ನಲ್ಲಿದ್ದ ಇಬ್ಬರಿಗೂ ಬೇಸ್‌ಬಾಲ್ ಬ್ಯಾಟ್‌ನಿಂದ ದಾಳಿ ನಡೆಸಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.

ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸ್ ಠಾಣೆಯಲ್ಲಿ ಎಫ್‌ಐಆರ್ ದಾಖಲಿಸಲಾಗಿದೆ. ಆರೋಪಿಗಳನ್ನು ಈಗಾಗಲೇ ಗುರುತಿಸಲಾಗಿದ್ದು, ಶೀಘ್ರದಲ್ಲೇ ಬಂಧಿಸಲಾಗುವುದು ಎಂದು ಪೊಲೀಸರು ತಿಳಿಸಿದ್ದಾರೆ. (ಏಜೆನ್ಸೀಸ್)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net