ವ್ಹೀಲಿಂಗ್​ ಮಾಡುವಾಗ ಬೈಕ್​ಗಳು ಮುಖಾಮುಖಿ ಡಿಕ್ಕಿಯಾಗಿ ಮೂವರ ಸಾವು

Wheeling
Published on

ಬೆಂಗಳೂರು: ವ್ಹೀಲಿಂಗ್​ ಮಾಡುವಾಗ ಬೈಕ್​ಗಳ ಮಧ್ಯೆ ಮುಖಾಮುಖಿ ಡಿಕ್ಕಿಯಾಗಿ ಮೂವರು ದಾರುಣವಾಗಿ ಸಾವಿಗೀಡಾಗಿರುವ ಘಟನೆ ಜಕ್ಕೂರು ಫ್ಲೈಓವರ್ ಕೆಳಗಿನ ಏರ್ಪೋರ್ಟ್ ರಸ್ತೆಯಲ್ಲಿ ಭಾನುವಾರ ನಡೆದಿದೆ.

ಸೈಯ್ಯದ್ ರಿಯಾಜ್, ಆದಿಲ್ ಸ್ಥಳದಲ್ಲೇ ಸಾವಿಗೀಡಾದರೆ, ಮತ್ತೋರ್ವ ಕೊಲಂಬಿಯಾ ಏಷ್ಯಾ ಆಸ್ಪತ್ರೆಯಲ್ಲಿ ಕೊನೆಯುಸಿರೆಳೆದಿದ್ದಾನೆ. ಇಂದು ಬೆಳಗ್ಗೆ 6.30ರ ಸುಮಾರಿಗೆ ಘಟನೆ ನಡೆದಿದೆ. ಇದನ್ನೂ ಓದಿ: ಯುವತಿಯರೇ ಹುಷಾರ್​ ಇಂಥವರು ಇರ್ತಾರೆ: ಈತನ ಖತರ್ನಾಕ್​ ಬುದ್ಧಿ ಗೊತ್ತಾದ್ರೆ ಬೆರಗಾಗ್ತೀರಾ…!

ಭಾನುವಾರ ರಜೆ ದಿನವಾದ್ದರಿಂದ ಹಾಗೂ ಗ್ರಹಣ ಹಿನ್ನೆಲೆಯಲ್ಲಿ ಸಂಚಾರ ವಿರಳವಾಗಿರುವುದರಿಂದ ಖಾಲಯಿದ್ದ ರಸ್ತೆಯಲ್ಲಿ ವ್ಹೀಲಿಂಗ್​ ಸಾಹಸ ಮೆರೆಯಲು, ಮಸಣ ಸೇರಿದ್ದಾರೆ. ಘಟನಾ ಸ್ಥಳಕ್ಕೆ ಯಲಹಂಕ ಸಂಚಾರಿ ಠಾಣೆಯ ಪೊಲೀಸರು ಭೇಟಿ ನೀಡಿ ಪರಿಶೀಲಿಸಿ ಪ್ರಕರಣ ದಾಖಲಿಸಿಕೊಂಡಿದ್ದಾರೆ. (ದಿಗ್ವಿಜಯ ನ್ಯೂಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net