ಮತದಾರ ಅಧಿಕಾರ ಯಾತ್ರೆ ವೇಳೆ ಬೈಕ್ ಕಳವು; ಹೋಟೆಲ್​ ಮಾಲೀಕನಿಗೆ ಹೊಸ ಪಲ್ಸರ್ ಬೈಕ್ ಕೊಡಿಸಿದ ರಾಹುಲ್ ಗಾಂಧಿ| Rahul Gandhi

Rahul-bike gift
Published on

Rahul Gandhi: ಬಿಹಾರದಲ್ಲಿ ಮತದಾರ ಅಧಿಕಾರ ಯಾತ್ರೆ ನಡೆಸಿದ್ದ ರಾಹುಲ್ ಗಾಂಧಿ ಈ ವೇಳೆ ರಸ್ತೆ ಬದಿಯ ಹೋಟೆಲ್​ ಮಾಲೀಕರ ಬೈಕ್​ವೊಂದ ಕಳ್ಳತನವಾಗಿತ್ತು. ಸದ್ಯ ಈ ವಿಷಯ ರಾಹುಲ್ ಗಾಂಧಿಗೆ ಮುಟ್ಟಿದ್ದು ಹೋಟೆಲ್​ ಮಾಲೀಕನಿಗೆ ಹೊಸ ಪಲ್ಸರ್-220 ಬೈಕ್​ ಅನ್ನು ಉಡುಗೊರೆಯಾಗಿ ನೀಡಿದ್ದಾರೆ.

ಆಗಸ್ಟ್ 27 ರಂದು ರಾಹುಲ್ ಗಾಂಧಿ ತಮ್ಮ ಮತದಾರರ ಅಧಿಕಾರ ಯಾತ್ರೆಯ ಭಾಗವಾಗಿ ದರ್ಭಂಗಾದಲ್ಲಿ ರೋಡ್ ಶೋ ಮತ್ತು ಬೈಕ್​ ರ್ಯಾಲಿ ನಡೆಸಿದ್ದರು. ಈ ವೇಳೆ ಭದ್ರತಾ ಸಿಬ್ಬಂದಿ ಹೋಟೆಲ್​ ಬಳಿ ನಿಲ್ಲಿಸಿದ್ದ ಹಲವಾರು ಬೈಕ್​ಗಳನ್ನು ಓಡಿಸಲು ತೆಗೆದುಕೊಂಡಿದ್ದರು. ಅವುಗಳಲ್ಲಿ ಹೋಟೆಲ್​ ಮಾಲೀಕ ಶುಭಂ ಗೆ ಸೇರಿದ ಪಲ್ಸರ್ 220 ಕೂಡ ಸೇರಿತ್ತು. ಇದನ್ನೇ ಬಂಡವಾಳ ಮಾಡಿಕೊಂಡು ಕೆಲವರು ಬೈಕ್ ಕಳ್ಳತನ ಮಾಡಿದ್ದಾರೆ ಎನ್ನಲಾಗಿದೆ.

ಈ ಕುರಿತು ಮಾತನಾಡಿರುವ ಹೋಟೆಲ್ ಮಾಲೀಕ ಶುಭಂ, ಭದ್ರತಾ ಸಿಬ್ಬಂದಿ ಮೊದಲು ಹೋಟೆಲ್​ ಬಳಿ ಚಹಾ ಕೇಳುತ್ತಾ ನಿಂತರು. ಆದರೆ ಸ್ವಲ್ಪ ಸಮಯದ ನಂತರ ರೋಡ್ ಶೋಗೆ ಬೈಕ್‌ಗಳನ್ನು ಕೇಳಿದರು. ರೋಡ್ ಶೋ ಕೇವಲ 1.5 ಕಿಲೋಮೀಟರ್ ಇದೆ. ಮತ್ತೆ ಬೈಕ್‌ಗಳನ್ನು ವಾಪಸ್ ಕೊಡುತ್ತೇವೆ ಎಂದು ವಿನಂತಿಸಿದರು. ಈ ಹಿನ್ನೆಲೆ ಬೈಕ್ ಕೊಟ್ಟೆ ಅವರ ಜೊತೆಯೇ ನಾನು ಹೋದೆ. ಆದರೆ ನನ್ನನ್ನು  ಸ್ಕಾರ್ಪಿಯೋದಲ್ಲಿ ಕೂರಿಸಿದರು. ರೋಡ್ ಶೋ ಮುಗಿದ ನಂತರ ಭದ್ರತಾ ತಂಡ ಮತ್ತು ಬೈಕ್ ಎರಡೂ ಪತ್ತೆಯಾಗಲಿಲ್ಲ. ಈಗ ರಾಹುಲ್ ಗಾಂಧಿಯವರು ಹೊಸ ಬೈಕ್ ಕೊಡಿಸಿದ್ದರೆ ಬಹಳ ಖುಷಿಯಾಗಿದೆ ಎಂದು ಹೇಳಿದ್ದಾರೆ.

ಕೆಲ ದಿನಗಳ ಬಳಿಕ ರ್ಯಾಲಿಯಲ್ಲಿ ಭಾಗವಹಿಸಿದ್ದ 6 ಬೈಕ್​ಗಳನ್ನು ವಶಪಡಿಸಿಕೊಳ್ಳಲಾಗಿತ್ತು. ಅವುಗಳನ್ನು ಪರಿಶೀಲಿಸಲು ಶುಭಂ ಅವರನ್ನು ಮೋತಿಹರಿ ಮತ್ತು ಗೋಪಾಲ್​ ಗಂಜ್​ಗೆ ಕರೆಸಲಾಗಿತ್ತು. ಅಲ್ಲೂ ಕೂಡ ಅವರ ಬೈಕ್​ ಸಿಕ್ಕಿರಲಿಲ್ಲ ಎನ್ನಲಾಗಿದೆ.

ಬೈಕ್​ ಕಳ್ಳತನದ ಬಗ್ಗೆ ಮಾಲೀಕ ಶುಭಂ ಮಾಧ್ಯಮಗಳೊಂದಿಗೆ ಮಾತನಾಡಿದ್ದನ್ನು ನೋಡಿದ ಬಿಹಾರ ಕಾಂಗ್ರೆಸ್ ನಾಯಕ ದೇವೇಂದರ್ ಯಾದವ್, ಸೆ. 1ರಂದು ಬೆಳಗ್ಗೆ 7 ಗಂಟೆಗೆ ಪಾಟ್ನಾಗೆ ಬರುವಂತೆ ಕರೆ ಮಾಡಿದ್ದಾರೆ. ಈ ಹಿನ್ನೆಲೆ ನಿನ್ನೆ ಪಾಟ್ನಾಗೆ ತೆರೆಳಿದ್ದ ಶುಭಂಗೆ ಆಶ್ಚರ್ಯವಾಗಿದ್ದು, ಮತದಾರ ಅಧಿಕಾತ ಯಾತ್ರೆ ಸಮಾರೋಪ ಸಮಾರಂಭದಲ್ಲಿ ರಾಹುಲ್ ಗಾಂಧಿ ಹೊಸ ಬೈಕ್ ಮತ್ತು ಕೀಲಿಯನ್ನು ಹಸ್ತಾಂತರಿಸಿದ್ದಾರೆ. (ಏಜೆನ್ಸೀಸ್)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net