

ಮೈಸೂರು: ಅರಣ್ಯ ಇಲಾಖೆಯ ಮೈಸೂರು ವೃತ್ತದ ಗುತ್ತಿಗೆ ನೌಕರರಲ್ಲಿ ಹಲವರನ್ನು ಮತ್ತೆ ಕೆಲಸಕ್ಕೆ ತೆಗೆದುಕೊಳ್ಳದಿರುವುದು ಹಾಗೂ ಕಾಯಂಗೊಳಿಸದಿರುವುದನ್ನು ಖಂಡಿಸಿ ಕರ್ನಾಟಕ ಪ್ರಜಾ ಪಾರ್ಟಿ ರೈತ ಪರ್ವದ ವತಿಯಿಂದ ಆ.1ರಂದು ಬೈಕ್ ರ‌್ಯಾಲಿ ಚಳವಳಿ ಹಮ್ಮಿಕೊಳ್ಳಲಾಗಿದೆ ಎಂದು ಅಧ್ಯಕ್ಷ ಡಾ.ಶಿವಣ್ಣ ತಿಳಿಸಿದರು.
ಅಂದು ಬೆಳಗ್ಗೆ 11ಕ್ಕೆ ಮೈಸೂರು ಜಿಲ್ಲಾ ಅರಣ್ಯ ವ್ಯಾಪ್ತಿಯ ಮೈಸೂರು ತಾಲೂಕು ಜಯಪುರ ಹೋಬಳಿ ಮಹದೇವಪುರ ಗ್ರಾಮದ ಗೇಟ್‌ನಿಂದ ಜಯಪುರ-ಮೈಸೂರು ಮಾರ್ಗವಾಗಿ ನಗರದ ಜಿಲ್ಲಾಧಿಕಾರಿ ಕಚೇರಿಗೆ ಈ ಬೈಕ್ ರ‌್ಯಾಲಿ ಆಗಮಿಸಲಿದೆ. ಇದರಲ್ಲಿ ಮೈಸೂರು ವಿಭಾಗದ ಎಲ್ಲ ಅರಣ್ಯ ಇಲಾಖೆಯ ಸಂತ್ರಸ್ತ ಗುತ್ತಿಗೆ ನೌಕರರು ಪಾಲ್ಗೊಳ್ಳಲಿದ್ದಾರೆ ಎಂದು ಬುಧವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.
ಪದಾಧಿಕಾರಿಗಳಾದ ಎಚ್.ಜಿ.ಹೇಮಲತಾ, ಆರ್.ಶ್ರೀನಿವಾಸ್, ಸ್ಟೀಫನ್ ಜೋಸೆಫ್, ಶಿವುಗೌಡ, ಪಿ.ಕುಮಾರಸ್ವಾಮಿ ಇದ್ದರು.