ಮನೆ ಮುಂದೆ ನಿಲ್ಲಿಸಿದ್ದ ಬೈಕ್ ಕಳವು

Published on

ಕೊಳ್ಳೇಗಾಲ: ತಾಲೂಕಿನ ಶಿವನಸಮುದ್ರ ದರ್ಗಾದ ಬಳಿ ಬೈಕ್ ಕಳವಾಗಿರುವ ಕುರಿತು ಬುಧವಾರ ಕೊಳ್ಳೇಗಾಲ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ದರ್ಗಾದ ನಿವಾಸಿ ಸಿರಾಜ್ ಎಂಬುವರಿಗೆ ಸೇರಿದ ಬೈಕ್ ಕಳವಾಗಿದೆ. ಈತ ಕೆಎಸ್‌ಆರ್‌ಟಿಸಿ ಬಸ್ ಡ್ರೈವರ್ ಆಗಿದ್ದು, ಎಂದಿನಂತೆ ಬೈಕ್ ನಲ್ಲಿ ತೆರಳಿ ಕೆಲಸ ಮುಗಿಸಿ ಮನೆಗೆ ಹಿಂದಿರುಗಿ ಮಂಗಳವಾರ ರಾತ್ರಿ ತನ್ನ ಮನೆಯ ಮುಂದೆ ಬೈಕ್ ನಿಲ್ಲಿಸಿದ್ದಾರೆ. ಬೆಳಗ್ಗೆ ನೋಡುವಷ್ಟರಲ್ಲಿ ಬೈಕ್ ಕಳವಾಗಿರುವುದು ತಿಳಿದುಬಂದಿದೆ. ಎಲ್ಲ ಕಡೆ ಹುಡುಕಾಡಿದರು ಎಲ್ಲೂ ಸಿಗದ ಕಾರಣ ಪೊಲೀಸರಿಗೆ ದೂರು ನೀಡಿದ್ದಾರೆ. ಪ್ರಕರಣ ದಾಖಲಿಸಿಕೊಂಡ ಗ್ರಾಮಾಂತರ ಠಾಣಾ ಪೊಲೀಸರು ಬೈಕ್ ಪತ್ತೆಗೆ ಕ್ರಮವಹಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net