ಜಿಂಕೆಗೆ ಡಿಕ್ಕಿಯಾಗಿ ಬೈಕ್​ ಸವಾರ ಸಾವು: ಸಹೋದರಿಯನ್ನು ಕೆಲಸಕ್ಕೆ ಬಿಟ್ಟು ಬರುವಾಗ ದುರ್ಘಟನೆ

Youth Accident 14 jan 20
Published on

ಬೆಂಗಳೂರು: ಜಿಂಕೆಗೆ ಬೈಕ್​ ಡಿಕ್ಕಿಯಾಗಿ ಸವಾರ ಮತ್ತು ಜಿಂಕೆ ಎರಡು ಕೂಡ ಸಾವಿಗೀಡಾಗಿರುವ ಘಟನೆ ನೆಲಮಂಗಲ ತಾಲೂಕಿನ ಅಪ್ಪಗೊಂಡನಹಳ್ಳಿ ಬಳಿ ಮಂಗಳವಾರ ನಸುಕಿನ ಜಾವ ನಡೆದಿದೆ.

ಹರೀಶ್ (21ವರ್ಷ) ಮೃತ ಬೈಕ್ ಸವಾರ. ಹರೀಶ್​ ಸಹೋದರಿ ಇಂದಿರಾ ದಾಬಸ್ ಪೇಟೆ ಕೈಗಾರಿಕಾ ಪ್ರದೇಶದಲ್ಲಿರುವ ಖಾಸಗಿ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದಾರೆ. ಎಂದಿನಂತೆ ಬೆಳಗ್ಗೆ 5:30ರ ಸುಮಾರಿಗೆ ಅಕ್ಕನನ್ನು ಬಸ್​ಗೆ ಡ್ರಾಪ್ ಮಾಡಿ ಮನೆಗೆ ಹಿಂದಿರುಗುವಾಗ ಅಪಘಾತ ಸಂಭವಿಸಿದೆ.

ಅಡ್ಡಬಂದ ಜಿಂಕೆಗೆ ಡಿಕ್ಕಿಯಾದ ಪರಿಣಾಮ ಹರೀಶ್​ ಮೃತಪಟ್ಟಿದ್ದು, ಗಾಯಗೊಂಡ ಜಿಂಕೆಯೂ ಸಾವಿಗೀಡಾಗಿದೆ. ಹರೀಶ್​ ಅಕಾಲಿಕ ಮರಣದಿಂದ ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿದ್ದು, ತ್ಯಾಮಗೊಂಡ್ಲು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. (ದಿಗ್ವಿಜಯ ನ್ಯೂಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net