ತಂದೆಯ ಶ್ರಾದ್ಧದ ದಿನವೇ ಅಣ್ಣನನ್ನು ಹತ್ಯೆಗೈದ ತಮ್ಮ..

bihara brother
Published on

ಗೋಪಾಲ್‌ಗಂಜ್‌: ತಂದೆಯ ಶ್ರಾದ್ಧದ ದಿನವೇ ತಮ್ಮನೊಬ್ಬ ಅಣ್ಣನ ಹತ್ಯೆಗೈದಿರುವ ಘಟನೆ ಬಿಹಾರದ ಗೋಪಾಲ್​ಗಂಜ್​ನಲ್ಲಿ ನಡೆದಿದೆ.

ಇದನ್ನೂ ಓದಿ: ಪ್ರತಿದಿನ ಈ ಹಾಲನ್ನು ಕುಡಿದರೆ ತೂಕ ಕಡಿಮೆಯಾಗುವುದರ ಜತೆಗೆ ನಿಮ್ಮ ಮೂಳೆಗಳು ಗಟ್ಟಿಯಾಗುತ್ತವೆ..!

ಮೃತನನ್ನು ಅಶ್ವಿನಿಪಾಂಡೆ ಎಂದು ಗುರುತಿಸಲಾಗಿದ್ದು, ಆದಿತ್ಯ ಪಾಂಡೆ ಎಂಬಾತನೇ ಕೃತ್ಯ ಎಸಗಿರುವ ಆರೋಪಿಯಾಗಿದ್ದಾನೆ. ಈ ಘಟನೆಯ ಬಂಜಾರಿಯಾ ಗ್ರಾಮದಲ್ಲಿ ನಡೆದಿದ್ದು, ಏಳು ದಿನಗಳ ಹಿಂದೆ ಅಶ್ವಿನಿ ಪಾಂಡೆಯ ತಂದೆ ನಿಧನರಾದ ನಂತರ ಮನೆಯಲ್ಲಿ ಶ್ರದ್ಧಾ ಕಾರ್ಯಕ್ರಮ ನಡೆಯುತ್ತಿತ್ತು. ಈ ವೇಳೆ ಇಬ್ಬರು ಸಹೋದರರ ನಡುವೆ ಖರ್ಚಿನ ವಿಚಾರವಾಗಿ ಜಗಳ ನಡೆದಿದೆ.

ಇಬ್ಬರ ನಡುವಿನ ವಾಗ್ವಾದದ ವೇಳೆ ಕಿರಿಯ ಸಹೋದರ ಆದಿತ್ಯ, ತನ್ನ ಅಣ್ಣ ಅಶ್ವಿನಿ ಪಾಂಡೆ ಮೇಲೆ ಗುದ್ದಲಿಯಿಂದ ಹಲ್ಲೆ ನಡೆಸಿದ್ದಾನೆ. ತಮ್ಮನ ದಾಳಿಯ ನಂತರ ಅಣ್ಣನ ಸ್ಥಿತಿ ಗಂಭೀರವಾಗಿದ್ದು ಕೂಡಲೇ ಆತನನ್ನು ಸ್ಥಳೀಯ ಆಸ್ಪತ್ರೆಗೆ ದಾಖಲಿಸಲಾಗಿದೆ. ಈ ವೇಳೆ ಆತ ಚಿಕಿತ್ಸೆ ಫಲಕಾರಿಯಾಗದೇ ಮೃತಪಟ್ಟಿದ್ದು, ಪ್ರಕರಣ ದಾಖಲಿಸಿಕೊಂಡು ಆರೋಪಿ ಸಹೋದರನನ್ನು ಬಂಧಿಸಿದ್ದಾರೆ. (ಏಜೆನ್ಸೀಸ್)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net