More

    ಪ್ರತಿದಿನ ಈ ಹಾಲನ್ನು ಕುಡಿದರೆ ತೂಕ ಕಡಿಮೆಯಾಗುವುದರ ಜತೆಗೆ ನಿಮ್ಮ ಮೂಳೆಗಳು ಗಟ್ಟಿಯಾಗುತ್ತವೆ..!

    ಬೆಂಗಳೂರು: ಇತ್ತೀಚೆಗೆ, ಆರೋಗ್ಯ ಪ್ರಜ್ಞೆಯುಳ್ಳ ಹಸು ಮತ್ತು ಎಮ್ಮೆ ಹಾಲಿನ ಬದಲಿಗೆ ಸೋಯಾ ಹಾಲು, ಬಾದಾಮಿ ಹಾಲು ಮತ್ತು ತೆಂಗಿನ ಹಾಲು ಹೆಚ್ಚಾಗಿ ಸೇವಿಸುತ್ತಿದ್ದಾರೆ. ಹೆಚ್ಚಿನವರು ಬಾದಾಮಿ ಹಾಲನ್ನು ಇಷ್ಟಪಡುತ್ತಿದ್ದು, ಇದು ಪೋಷಕಾಂಶಗಳ ಉಗ್ರಾಣವಾಗಿದೆ. ಬಾದಾಮಿ ಹಾಲನ್ನು ಪ್ರತಿನಿತ್ಯ ಕುಡಿಯುವುದರಿಂದ ಆಗುವ ದೇಹಕ್ಕಾಗುವ ಪ್ರಯೋಜನಗಳ ಹೀಗಿವೆ.

    ಇದನ್ನೂ ಓದಿ: ಕತ್ತರಿಸಿದ ಎಡಗೈಯನ್ನು ಬಲಗೈನಲ್ಲೇ ಹಿಡಿದು ಮಾರುಕಟ್ಟೆಯಲ್ಲಿ ತಿರುಗಾಡಿದ ಯುವಕ..

    ಬಾದಾಮಿ ಹಾಲು ಕ್ಯಾಲ್ಸಿಯಂನಲ್ಲಿ ಸಮೃದ್ಧವಾಗಿದ್ದು, ಇದರಲ್ಲಿ ವಿಟಮಿನ್ ಡಿ ಕೂಡ ಸಮೃದ್ಧವಾಗಿದೆ. ಇವೆರಡು ಹಲ್ಲುಗಳನ್ನು ಬಲವಾಗಿ ಮತ್ತು ಆರೋಗ್ಯಕರವಾಗಿಡುತ್ತವೆ. ಬಾದಾಮಿ ಹಾಲಿನಲ್ಲಿ ಮೆಗ್ನೀಸಿಯಮ್ ಕೂಡ ಹೇರಳವಾಗಿದ್ದು, ಇದು ಸ್ನಾಯುವಿನ ಕಾರ್ಯ, ರಕ್ತದ ಸಕ್ಕರೆ ನಿಯಂತ್ರಣ, ಅಧಿಕ ರಕ್ತದೊತ್ತಡ ನಿಯಂತ್ರಣ, ಮೂಳೆ, ಪ್ರೋಟೀನ್ ಮತ್ತು ಡಿಎನ್ಎ ರಚನೆಗೆ ಸಹಾಯ ಮಾಡುತ್ತದೆ.

    ಬಾದಾಮಿ ಹಾಲು ಕಡಿಮೆ ಕ್ಯಾಲೋರಿ ಹೊಂದಿದೆ. ಇದು ಆರೋಗ್ಯಕರ, ಅಪರ್ಯಾಪ್ತ ಕೊಬ್ಬನ್ನು ಹೊಂದಿರುತ್ತದೆ. ಇದು ದೀರ್ಘಾವಧಿಯ ತೂಕ ನಷ್ಟಕ್ಕೆ ಸಹಾಯ ಮಾಡುತ್ತದೆ. ಬಾದಾಮಿ ಹಾಲು ಕಾಫಿ ಮತ್ತು ಚಹಾಕ್ಕೆ ಉತ್ತಮ ಪರ್ಯಾಯವಾಗಿದ್ದು, ತೂಕ ಇಳಿಸಿಕೊಳ್ಳಲು ಬಯಸುವವರು ಬಾದಾಮಿ ಹಾಲು ಕುಡಿಯಬೇಕು ಎನ್ನುತ್ತಾರೆ ತಜ್ಞರು.

    ಇದನ್ನೂ ಓದಿ: ಪತ್ನಿಗೆ ಅಮಾನುಷವಾಗಿ ಥಳಿಸಿ ನಡುರಸ್ತೆಯಲ್ಲೇ ತಲಾಖ್ ನೀಡಿದ ಪತಿ..

    ಬಾದಾಮಿ ಹಾಲು ರಕ್ತದಲ್ಲಿನ ಸಕ್ಕರೆ ಮಟ್ಟವನ್ನು ಹೆಚ್ಚು ಹೆಚ್ಚಿಸುವುದಿಲ್ಲ. ಈ ಹಾಲು ಕಾರ್ಬೋಹೈಡ್ರೇಟ್‌ಗಳನ್ನು ಹೊಂದಿರುವುದಿಲ್ಲ. ಬಾದಾಮಿ ಹಾಲಿನಲ್ಲಿ ವಿಟಮಿನ್ ಇ ಸಮೃದ್ಧವಾಗಿದ್ದು, ಇದು ಶಕ್ತಿಯುತವಾದ ಉತ್ಕರ್ಷಣ ನಿರೋಧಕವಾಗಿ ಕಾರ್ಯನಿರ್ವಹಿಸುವುದರೆ ಜತೆಗೆ ರೋಗನಿರೋಧಕ ಶಕ್ತಿಯನ್ನು ಸುಧಾರಿಸುತ್ತದೆ. ಪ್ರಸ್ತುತ ಲೇಖನವು ಸಾಮಾನ್ಯ ಮಾಹಿತಿ ಮತ್ತು ಸಲಹೆಯನ್ನು ಮಾತ್ರ ಒದಗಿಸುತ್ತದೆ. ಇದು ಅರ್ಹ ವೈದ್ಯಕೀಯ ಅಭಿಪ್ರಾಯವಲ್ಲ. ಹೆಚ್ಚಿನ ಮಾಹಿತಿಗಾಗಿ ಯಾವಾಗಲೂ ತಜ್ಞ ಅಥವಾ ನಿಮ್ಮ ಸ್ವಂತ ವೈದ್ಯರನ್ನು ಸಂಪರ್ಕಿಸುವುದು ಉತ್ತಮ.(ಏಜೆನ್ಸೀಸ್)

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts