ದೇವಸ್ಥಾನದಲ್ಲಿ ಪ್ರವಚನ ನೀಡುತ್ತಿರುವಾಗಲೇ ಹೃದಯಾಘಾತ, ಕುಸಿದು ಬಿದ್ದು ಸಾವು!

Maruthi
Published on

ಬಿಹಾರ: ದೇವಸ್ಥಾನವೊಂದರ ಆಡಳಿತಾಧಿಕಾರಿಯೊಬ್ಬರು ಭಕ್ತರಿಗೆ ಪ್ರವಚನ ನೀಡುತ್ತಿರುವಾಗಲೇ ಹೃದಯಾಘಾತಕ್ಕೀಡಾಗಿ ಸಾವಿಗೀಡಾಗಿದ್ದಾರೆ. ಆ ಕ್ಷಣಗಳ ದೃಶ್ಯಾವಳಿ ಇರುವ ವಿಡಿಯೋ ಸೋಷಿಯಲ್ ಮೀಡಿಯಾದಲ್ಲಿ ಹರಿದಾಡಿದೆ.

ಬಿಹಾರದ ಸರಣ್ ಜಿಲ್ಲೆಯ ಮಾರುತಿ ಮಾನಸ್ ಮಂದಿರದ ಆಡಳಿತಾಧಿಕಾರಿ ರಂಜಯ್ ಸಿಂಗ್ ಸಾವಿಗೀಡಾದವರು. ನಿವೃತ್ತ ಪ್ರೊಫೆಸರ್ ಆಗಿರುವ ಇವರು ಭಾನುವಾರ ಸಂಜೆ ದೇವಸ್ಥಾನಕ್ಕೆ ಬಂದ ಭಕ್ತರಿಗೆ ಪ್ರವಚನ ನೀಡುತ್ತಿರುವಾಗ ಹೃದಯಾಘಾತಕ್ಕೀಡಾಗಿ ಕುಸಿದು ಬಿದ್ದು ಮೃತಪಟ್ಟಿದ್ದಾರೆ.

ಕುಸಿದು ಬಿದ್ದ ಇವರನ್ನು ದೇವಳದಲ್ಲಿ ಇದ್ದ ಇತರರು ಕೂಡಲೇ ಆಸ್ಪತ್ರೆಗೆ ಕರೆದೊಯ್ದರೂ ಅವರು ಅದಾಗಲೇ ಮೃತಪಟ್ಟಿದ್ದಾಗಿ ವೈದ್ಯರು ಸ್ಪಷ್ಟಪಡಿಸಿದ್ದಾರೆ. ಕಾಲೇಜೊಂದರಲ್ಲಿ ಪ್ರೊಫೆಸರ್ ಆಗಿದ್ದ ಇವರು, ಈ ದೇವಸ್ಥಾನದ ಪೂರ್ತಿ ಜವಾಬ್ದಾರಿ ವಹಿಸಿಕೊಂಡಿದ್ದು, ದೇವಸ್ಥಾನ ಆಡಳಿತಕ್ಕೆ ಸಂಬಂಧಿಸಿದಂತೆ ಮುಖ್ಯ ಕಾರ್ಯದರ್ಶಿ ಆಗಿದ್ದು, ಪ್ರತಿ ಸಂಜೆ ಪ್ರವಚನ ನೀಡುತ್ತಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net