ಪತ್ನಿ ಹಾಗೂ ಮೂರು ಮಕ್ಕಳನ್ನು ಹತ್ಯೆಗೈದು ಸಾವಿಗೆ ಶರಣಾದ ಪತಿ: ಕೃತ್ಯವನ್ನು ಕಣ್ಣಾರೆ ಕಂಡ ಪುತ್ರರು

police investigation
Published on

ಪಾಟ್ನಾ: ವ್ಯಕ್ತಿಯೊಬ್ಬ ತನ್ನ ಪತ್ನಿ ಮತ್ತು ಮೂವರು ಪುತ್ರಿಯರನ್ನು ಕೊಂದು, ಆತ್ಮಹತ್ಯೆ ಮಾಡಿಕೊಂಡಿರುವ ಆಘಾತಕಾರಿ ಘಟನೆ ಬಿಹಾರದ ಖಗರಿಯಾ ಜಿಲ್ಲೆಯಲ್ಲಿ ನಡೆದಿದೆ.

ಮುನ್ನಾ ಯಾದವ್ ಎಂಬಾತ ತನ್ನ ಪತ್ನಿ ಪೂಜಾದೇವಿ ಹಾಗೂ ಮಕ್ಕಳಾದ ಸುಮನ್ ಕುಮಾರಿ, ಅಂಚಲ್ ಕುಮಾರ ಮತ್ತು ರೋಶನಿ ಕುಮಾರಿಯನ್ನು ಕೊಲೆಗೈದು ಆತ್ಮಹತ್ಯೆ ಮಾಡಿಕೊಂಡ ಆರೋಪಿ.

ಇದನ್ನೂ ಓದಿ: ಕಾಂಗ್ರೆಸ್-ಬಿಜೆಪಿ ನಾಯಕರ ಹೊಂದಾಣಿಕೆ! ಪ್ರತಾಪ್ ಸಿಂಹ ಆರೋಪಕ್ಕೆ ತಿರುಗೇಟು ಕೊಟ್ಟ ಸಿಎಂ

ಈ ಕುರಿತು ಮಾತನಾಡಿರುವ ಪೊಲೀಸ್​ ವರಿಷ್ಠಾಧಿಕಾರಿ, ಮುನ್ನಾ ಯಾದವ್ ಕ್ರಿಮಿನಲ್ ಪ್ರಕರಣವೊಂದರಲ್ಲಿ ಪರಾರಿಯಾಗಿದ್ದ. ಕಳೆದ ಮಧ್ಯರಾತ್ರಿ ಆತ ಮನೆಗೆ ಬಂದು ತನ್ನ ಪತ್ನಿ ಜತೆ ಜಗಳವಾಡಿದ ಸ್ವಲ್ಪ ಸಮಯದ ಬಳಿಕ ಚಾಕುವಿನಿಂದ ಮೊದಲು ಮೂರು ಮಕ್ಕಳ ಕೊಲೆಗೈದಿದ್ದಾನೆ. ನಂತರ ಪತ್ನಿಯನ್ನು ಕೊಲೆ ಮಾಡಲು ಯತ್ನಿಸಿದ್ದಾನೆ. ಈ ವೇಳೆ ಮೇಲ್ಛಾವಣಿಯ ಮೇಲೆ ಮಲಗಿದ್ದ ಆತನ ಇಬ್ಬರು ಪುತ್ರರು ಈ ಕೃತ್ಯವನ್ನು ನೋಡಿ ಗಾಬರಿಯಾಗಿ ಅಲ್ಲಿಂದ ಓಡಿ ಹೋಗಿದ್ದಾರೆ. ಈ ಘಟನೆಯು ರಾತ್ರಿ 1ರಿಂದ 2ರ ನಡುವೆ ಸಂಭವಿಸಿರಬಹುದು ಎಂದು ತಿಳಿಸಿದ್ದಾರೆ.

ಘಟನೆಯ ಬಗ್ಗೆ ತಿಳಿದ ತಕ್ಷಣ ಸ್ಥಳಕ್ಕಾಗಮಿಸಿದ ಪೊಲೀಸ್​ ಪರಿಶೀಲನೆಯನ್ನು ನಡೆಸಿದ್ದು, ಕೊಲೆಯ ಉದ್ದೇಶ ಇನ್ನೂ ತಿಳಿದು ಬಂದಿಲ್ಲ. ಭಾಗಲ್ಪುರದ ವಿಧಿವಿಜ್ಞಾನ ತಂಡ ಸಾಕ್ಷ್ಯಾಧರಗಳನ್ನು ಕಲೆ ಹಾಕುತ್ತಿದ್ದು, ಪ್ರಾಥಮಿಕ ತನಿಖೆಯಲ್ಲಿ ಮುನ್ನಾನ ಪತ್ನಿ ಮತ್ತು ಪುತ್ರಿಯರ ಕತ್ತು ಕತ್ತರಿಸಿದ ಗುರುತುಗಳು ಪತ್ತೆಯಾಗಿವೆ. ಆರೋಪಿಯ ಮೃತದೇಹ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿದೆ ಎಂದು ಪೊಲೀಸರು ಹೇಳಿದ್ದಾರೆ.(ಏಜೆನ್ಸೀಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net