ಬಿಹಾರ ಚುನಾವಣೆ or ಟ್ರಂಪ್​​ ಸುಂಕ? ಈ ಸಮಯದಲ್ಲೇ GST ಸುಧಾರಣೆ ಏಕೆ? ಪಿ ಚಿದಂಬರಂ ಪ್ರಶ್ನೆ!

Chidambaram
Published on

GST : ಕೇಂದ್ರ ಸರ್ಕಾರ ನಿನ್ನೆ (ಸೆಪ್ಎಂಬರ್​ 03) ಘೋಷಿಸಿದ ಜಿಎಸ್​ಟಿ ಮೇಲಿನ ತರ್ಕಬದ್ಧಗೊಳಿಸುವಿಕೆ ಹಾಗೂ ದರ ಕಡಿತವನ್ನು ಹಿರಿಯ ಕಾಂಗ್ರೆಸ್​ ಅಧ್ಯಕ್ಷ ಪಿ. ಚಿದಂಬರಂ ಸ್ವಾಗತಿಸಿ, ಸರ್ಕಾರವು ಈ ಕ್ರಮವನ್ನು ತೆಗೆದುಕೊಳ್ಳಲು 8 ವರ್ಷ ಬೇಕಾಯಿತೇ? ಎಂದು ಅಚ್ಚರಿಗೊಂಡು ತಮ್ಮ ಎಕ್ಸ್​ ಖಾತೆಯಲ್ಲಿ ಪೋಸ್ಟ್​ ಮಾಡಿದ್ದಾರೆ.

ಈ ವೇಲೆ ಮೌನ ಮುರಿದ ಸಚಿವರು, ಈ ಮೊದಲು ರಾಜ್ಯಸಭಾ ಸಂಸದರು ಜಿಎಸ್​ಟಿ ಕುರಿತು ಹಿಂದಿನ ದರಗಳನ್ನು ಪರಿಚಯಿಸಬಾರದಿತ್ತು. 2017 ರಲ್ಲಿ ಪ್ರಾರಂಭವಾದ ಈ ನೀತಿಯನ್ನು ವಿರೋಧ ಪಕ್ಷ ಆಗಿನಿಂದಲೂ ಈ ಕುರಿತು ಎಚ್ಚರಿಸುತ್ತಲೇ ಬಂದಿದೆ ಎಂದು ಬರೆದುಕೊಂಡಿದ್ದಾರೆ.

ವಿವಿಧ ಸರಕು ಮತ್ತು ಸೇವೆಗಳ ಮೇಲಿನ ಜಿಎಸ್​ಟಿ ದರ ಕಡಿಮೆ ಮಾಡಲು 8 ವರ್ಷ ತೆಗೆದುಕೊಂಡಿರುವುದು ಬಹಳ ತಡವಾಗಿದೆ. ಈ ಬಗ್ಗೆ ಕಳೆದ 8 ವರ್ಷಗಳಿಂದ ನಾವು ಕೂಗಾಡುತ್ತಲೇ ಇದ್ದೇವೆ. ಜಿಎಸ್​ಟಿ ಕಡಿಮೆ ಮಾಡಲು ಮನವಿ ಮಾಡಿದ್ದರೂ ಸಹ ನಮ್ಮ ಮಾತುಗಳಿಗೆ ಕಿಮ್ಮತ್ತು ನೀಡಿರಲಿಲ್ಲ.

ಸರ್ಕಾರದ ಹಠಾತ್​ ನಿರ್ಧಾರವನ್ನು ಪ್ರಶ್ನಿಸಿದ ಚಿದಂಬರಂ ಇದು ಸರ್ಕಾರದ ನಿಧಾನಗತಿಯ ಬೆಳವಣಿಗೆ, ಹೆಚ್ಚುತ್ತಿರುವ ಮನೆಯ ಸಾಲ, ಕುಸಿಯುತ್ತಿರುವ ಉಳಿತಾಯ, ಮುಂಬರುವ ಬಿಹಾರ್​ ಚುನಾವಣೆಗಳು ಹಾಗೂ ಟ್ರಂಪ್​ನ ಸುಂಕಗಳು ಈ ಬದಲಾವಣೆ ತರಲು ಅವರನ್ನು ಪ್ರೇರೇಪಿಸಿರಬಹುದು ಎಂದು ತಿಳಿಸಿದ್ದಾರೆ.

ಹಣಕಾಸು ಸಚಿವೆ ನಿರ್ಮಲ ಸೀತರಾಮನ್​ ಅವರ ಅಧ್ಯಕ್ಷತೆಯಲ್ಲಿ 56ನೇ ಜಿಎಸ್​ಟಿ ಮಂಡಳಿಯು ನಾಲ್ಕು ಸ್ಲ್ಯಾಬ್​ ತೆರಿಗೆ ವ್ಯವಸ್ಥೆಯನ್ನು ಪ್ರತಿಶತ 5 ಮತ್ತು 18 ದರಗಳಿಗೆ ಇಳಿಸಿದೆ. ಇದು ಸೆಪ್ಟೆಂಬರ್​ 22 ರಿಂದ ಜಾರಿಗೆ ಬರುವಂತೆ ಈ ನಿರ್ಧಾರವನ್ನು ಕೈಗೊಳ್ಳಲಾಗಿದ್ದು, ಇದು ಗ್ರಾಹಕ ಸರಕುಗಳನ್ನು ಅಗ್ಗಗೊಳಿಸಿ ಸಾಮಾನ್ಯರಿಗೆ ಕೈಗೆಟುಕ ದರದಲ್ಲಿ ಪಡೆಯಲು ಸಹಾಯವಾಗಿದೆ.

ದಿನನಿತ್ಯ ಬಳಸುವ ವಸ್ತುಗಳಾದ ಸೋಪು, ಶಾಂಪು, ಟೂತ್​ಪೇಸ್ಟ್​, ಟಾಲ್ಕಮ್​ ಪೌಡರ್​ ಮತ್ತು ಎಣ್ಣೆಯಂತಹ ವಸ್ತುಗಳಿಗೆ ಜಿಎಸ್​ಟಿ ದರದಲ್ಲಿ ಶೇ. 18ರಿಂದ ಶೇ.5ರಷ್ಟಕ್ಕೆ ಇಳಿಸಲಾಗಿದೆ. ಇನ್ನು ಸೈಕಲ್​, ಪೀಠೋಪಕರಣಗಳು, ಫೀಡಿಂಗ್​ ಬಾಟಲ್​ಗಳ ಮೇಲಿನ ತೆರಿಗೆಯನ್ನು ಕೆಳ ಸ್ಲಾಬ್​ಗಳಿಗೆ ವರ್ಗಾಹಿಸಿದ್ದಾರೆ.

ಈ ಜಿಎಸ್​ಟಿ ಕಡಿತದ ಬಗ್ಗೆ ಪ್ರಧಾನಿ ನರೇಂದ್ರ ಮೋದಿ ಸ್ವಾಗತಿಸಿದ್ದು, ಈ ನಿರ್ಧಾರವು ಮಹಿಳೆಯರು, ರೈತರು, ಎಂಎಸ್​ಎಂಗಳು, ಮಧ್ಯಮವರ್ಗ ಮತ್ತು ಯುವಕರಿಗೆ ಪ್ರಯೋಜನ ನೀಡಲು ಸಹಾಯಕವಾಗುವ ಸುಧಾರಣೆಗಳಾಗಿವೆ. ಇನ್ನು ಸ್ವಾತಂತ್ರ್ಯೋತ್ಸವ ಭಾಷಣದ ಜಿಎಸ್​ಟಿ ಇಳಿಕೆಯು ಬಗ್ಗೆ ಮಾತನಾಡಿದ್ದೆ, ಇದು ಮುಂದಿನ ಪೀಳಿಗೆಗೆಗ ಸುಧಾರಣೆ ತರುವ ನಿಟ್ಟಿನಲ್ಲಿ ರೂಪಿಸಲಾಗಿದೆ. ಹಾಗೇ ಜನರಿಗೆ ಸುಲಭ ಜೀವನ ಆರ್ಥಿಕತೆಯನ್ನು ಬಲಪಡಿಸಲು ಸಹಾಯ ಮಾಡುತ್ತದೆ. ತಮ್ಮ ಪೋಸ್ಟ್​ನಲ್ಲಿ ಹಂಚಿಕೊಂಡಿದ್ದಾರೆ. (ಏಜೆನ್ಸೀಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net