1000 ರೂ. ಇಟ್ಟುಕೊಂಡು ಮನೆಬಿಟ್ಟ ಪ್ರೇಮಿಗಳಿಗೆ ಕಾದಿದ್ದು ಅಚ್ಚರಿ!

bihar
Published on

ಬಿಹಾರ: ಹೊಸ ಜೀವನ ನಡೆಸಬೇಕು ಎಂಬ ನಿಟ್ಟಿನಲ್ಲಿ 1000 ರೂಪಾಯಿಯೊಂದಿಗೆ ಮನೆಬಿಟ್ಟು ಪರಾರಿಯಾಗಿದ್ದ ಪ್ರೇಮಿಗಳು ಇದೀಗ ಗಸ್ತು ತಿರುಗುವ ಪೊಲೀಸರ ಅತಿಥಿಗಳಾಗಿದ್ದಾರೆ!

ಬಿಹಾರದ (Bihar) ದಿಘ್ರಾ ಜಿಲ್ಲೆಯ ಪ್ರೇಮಿಗಳು ತಾವು ಹೊಸ ಜೀವನವನ್ನು ಪ್ರಾರಂಭಿಸಬೇಕು ಎಂದು ಯೋಚಿಸಿ, ಮನೆಯಿಂದ ಒಂದು ಸಾವಿರ ರೂಪಾಯಿ ಕದ್ದು ಪರಾರಿಯಾಗಿದ್ದರು. ಸಾಮಾಜಿಕ ಜಾಲತಾಣದಲ್ಲಿ (Social Media) ಪರಸ್ಪರ ಭೇಟಿಯಾಗಿ ಪ್ರೀತಿಸಿದ ಜೋಡಿ, ಮನೆಯಲ್ಲಿ ಒಪ್ಪುವುದಿಲ್ಲ ಎಂದು ತಿಳಿದು ಮನೆಬಿಟ್ಟು ಬೈಕ್​​ನಲ್ಲಿ ಓಡಿ ಹೋಗಿದ್ದರು. ಸದ್ಯ ಈ ಪ್ರಕರಣ ಇದೀಗ ತಡವಾಗಿ ಬೆಳಕಿಗೆ ಬಂದಿದೆ.

ಬೈಕ್​ನಲ್ಲಿ ಓಡಿ ಹೋದ ಜೋಡಿ ದಾರಿ ಮಧ್ಯೆ ಪೆಟ್ರೋಲ್ ಖಾಲಿಯಾದಾಗ ಮುಂದೆ ಏನು ಮಾಡುವುದು? ಎಲ್ಲಿ ಹೋಗುವುದು ಎಂದು ತಿಳಿಯದೆ, ಹತ್ತಿರದಲ್ಲಿದ್ದ ದೇವಸ್ಥಾನದಲ್ಲಿ ತಂಗಲು ನಿರ್ಧರಿಸಿದ್ದಾರೆ. ಇದೇ ವೇಳೆ ರಾತ್ರಿ ಗಸ್ತು ತಿರುಗುತ್ತಿದ್ದ ಪೊಲೀಸರು ದಂಪತಿಯನ್ನು ದೇವಸ್ಥಾನದಲ್ಲಿ ಗುರುತಿಸಿದ್ದು, ಇಬ್ಬರನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದ್ದಾರೆ. ಕೂಲಂಕುಷವಾಗಿ ವಿಚಾರಣೆ ನಡೆಸಿದ ಬಳಿಕ ಇಬ್ಬರ ಗುರುತು ಪತ್ತೆ ಹಚ್ಚಿದ ಪೊಲೀಸರು, ಅವರ ಕುಟುಂಬ ಸದಸ್ಯರಿಗೆ ಈ ವಿಷಯ ಮುಟ್ಟಿಸಿದ್ದಾರೆ.

ಪೊಲೀಸರು ಪ್ರೇಮಿಗಳನ್ನು ಅವರ ಸಂಬಂಧಿಕರಿಗೆ ಒಪ್ಪಿಸಿದ್ದು, ಇನ್ನು ಮುಂದೆ ಈ ರೀತಿಯ ತಪ್ಪುಗಳನ್ನು ಮಾಡದಂತೆ ಬದುಕಬೇಕು ಎಂದು ಎಚ್ಚರಿಕೆ ನೀಡಿ ಕಳುಹಿಸಿದ್ದಾರೆ,(ಏಜೆನ್ಸೀಸ್).

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net