

ಪಟನಾ: ಬಿಹಾರ್ದ ಗೋಪಾಲ್ಗಂಜ್ನಲ್ಲಿ ಗಂಡಕ್ ನದಿಗೆ ಹಾಕಲಾದ ಸತ್ತರ್ಘಾಟ್ ಸೇತುವೆ ಒಂದು ಭಾಗ ಕುಸಿದು ಬಿದ್ದಿದೆ. ಒಂದು ತಿಂಗಳ ಹಿಂದಷ್ಟೇ ಈ ಸೇತುವೆಯನ್ನು ಮುಖ್ಯಮಂತ್ರಿ ನಿತೀಶ್ ಕುಮಾರ್ ಅವರು ಉದ್ಘಾಟನೆ ಮಾಡಿದ್ದರು.
ಒಂದೇ ತಿಂಗಳಲ್ಲಿ ಕುಸಿದು ಬಿದ್ದ ಸೇತುವೆಯನ್ನು ಇದೀಗ ಅಲ್ಲಿನ ರಾಜಕೀಯ ಮುಖಂಡರು ಮುಖ್ಯವಸ್ತುವನ್ನಾಗಿಟ್ಟುಕೊಂಡು, ಸರ್ಕಾರವನ್ನು ದೂಷಿಸುತ್ತಿದ್ದಾರೆ.
ಬಿಹಾರದಲ್ಲಿ ವಿಪರೀತ ಮಳೆಯಾಗುತ್ತಿದ್ದು, ನದಿಯ ನೀರಿನ ಮಟ್ಟ ಏರುತ್ತಿದೆ. ಮಳೆ ನೀರಿನ ರಭಸಕ್ಕೆ ಈ ಸೇತುವೆಯೂ ಕೊಚ್ಚಿಕೊಂಡು ಹೋಗಿದೆ.
ಸೇತುವೆ ಕೊಚ್ಚಿಕೊಂಡು ಹೋಗುತ್ತಿದ್ದಂತೆ ಪ್ರತಿಪಕ್ಷ ನಾಯಕ ತೇಜಸ್ವಿ ಯಾದವ್ ಅವರು ಮುಖ್ಯಮಂತ್ರಿ ವಿರುದ್ಧ ಹರಿಹಾಯ್ದಿದ್ದಾರೆ.
ಮುಖ್ಯ ಸತ್ತರ್ಘಾಟ್ ಸೇತುವೆಯಿಂದ 2 ಕಿಮೀ ದೂರದಲ್ಲಿ ಒಂದು ಭಾಗ ಕುಸಿದಿದೆ. ಇದರಿಂದ ಬ್ರಿಜ್ಗೆ ದೊಡ್ಡ ಹಾನಿ ಏನೂ ಆಗಿಲ್ಲ ಎಂದು ರಸ್ತೆ ನಿರ್ಮಾಣ ಸಚಿವ ನಂದಕಿಶೋರ್ ಯಾದವ್ ತಿಳಿಸಿದ್ದಾರೆ. ಇದನ್ನೂ ಓದಿ: ಕರೊನಾ ನಿಗ್ರಹಕ್ಕೆ ‘ಎರಡಲಗಿನ ಕತ್ತಿ’; ವರ್ಷಾನುಗಟ್ಟಲೇ ಸಿಗಲಿದೆ ಕೋವಿಡ್ನಿಂದ ರಕ್ಷಣೆ
ಈ ಸೇತುವೆ ನಿರ್ಮಾಣ ಬರೋಬ್ಬರಿ 8 ವರ್ಷ ತೆಗೆದುಕೊಂಡಿದೆ. ಕಳೆದ ತಿಂಗಳಷ್ಟೇ ಮುಖ್ಯಮಂತ್ರಿ ಸೇತುವೆ ಪೂರ್ಣಗೊಂಡು ಉದ್ಘಾಟನೆ ಮಾಡಲ್ಪಟ್ಟಿತ್ತು.
ಈ ಸೇತುವೆಯನ್ನು 264 ಕೋಟಿ ರೂ.ವೆಚ್ಚದಲ್ಲಿ ನಿರ್ಮಿಸಲಾಗಿತ್ತು. ಎಂಟು ವರ್ಷ ತೆಗೆದುಕೊಂಡು ಕಟ್ಟಿದ ಸೇತುವೆ 29 ದಿನಗಳೂ ಬಾಳಿಕೆ ಬರಲಿಲ್ಲ. ಇದನ್ನು ನಿರ್ಮಿಸಿದ ಕಂಪನಿಯನ್ನು ಮುಖ್ಯಮಂತ್ರಿಯವರು ಬ್ಲ್ಯಾಕ್ಲಿಸ್ಟ್ಗೆ ಸೇರಿಸುವ ಕ್ರಮ ಕೈಗೊಳ್ಳುತ್ತಾರಾ ಎಂದು ಆರ್ಜೆಡಿ ನಾಯಕ ತೇಜಸ್ವಿ ಯಾದವ್ ಪ್ರಶ್ನಿಸಿದ್ದಾರೆ. (ಏಜೆನ್ಸೀಸ್)