VIDEO| ಜೀವನದ ಅತಿದೊಡ್ಡ ಸವಾಲು ಎದುರಿಸಿದ ಕ್ಷಣಗಳನ್ನು ನೆನೆದು ಕಣ್ಣೀರಿಟ್ಟ ನಟಿ ಸಂಯುಕ್ತಾ ಹೆಗ್ಡೆ!

Samyukta-Hegde
Published on

ಚೆನ್ನೈ: ಕಿರಿಕ್​ ಪಾರ್ಟಿ ಚಿತ್ರದ ಮೂಲಕ ಕನ್ನಡಿಗರಿಗೆ ಪರಿಚಯವಾದ ನಟಿ ಸಂಯುಕ್ತಾ ಹೆಗ್ಡೆ ಪಡ್ಡೆ ಹುಡುಗರ ಫೇವರಿಟ್​ ಎಂಬುದರಲ್ಲಿ ಸಂಶಯವೇ ಇಲ್ಲ. ಕನ್ನಡ ಚಿತ್ರರಂಗದಲ್ಲಿ ಅವಕಾಶಗಳು ಕಡಿಮೆಯಾದ ಬೆನ್ನಲ್ಲೇ ತಮಿಳು ಚಿತ್ರರಂಗದಲ್ಲಿ ಬೀಡು ಬಿಟ್ಟಿರುವ ಸಂಯುಕ್ತಾ, ತಮ್ಮ ಬೋಲ್ಡ್​ ಪಾತ್ರಗಳ ಮೂಲಕವೇ ಹೆಚ್ಚು ಸದ್ದು ಮಾಡುತ್ತಿದ್ದಾರೆ. ಇದೀಗ ತಮ್ಮ ಜೀವನದಲ್ಲಿ ಅನುಭವಿಸಿದ ಅತಿದೊಡ್ಡ ಗಾಯದ ಸಮಸ್ಯೆಯನ್ನು ಸಂಯುಕ್ತಾ ಜಾಲತಾಣದಲ್ಲಿ ಹಂಚಿಕೊಂಡಿದ್ದು, ಕಣ್ಣೀರಿಟ್ಟಿದ್ದಾರೆ.

ಬಿಟ್ಟುಕೊಡಲು ನನ್ನನ್ನು ಪ್ರಚೋದಿಸಿತು

ಕಳೆದ ವರ್ಷದಲ್ಲಿ ನಾನು ಹೋರಾಟದ ಹಾದಿಯಲ್ಲಿದೆ. ಆ ಹೋರಾಟ ನನ್ನ ದೈಹಿಕ ಮತ್ತು ಭಾವನಾತ್ಮಕ ಸಹಿಷ್ಣುತೆಯನ್ನು ಮಿತಿಗಳಿಗೆ ದೂಡಿತು. ನಾನು ಜೀವನದ ಅತಿದೊಡ್ಡ ಗಾಯವನ್ನು ಎದುರಿಸಿದ್ದೇನೆ. ಶೂಟಿಂಗ್ ನಡುವೆ ನನ್ನ ಕಾಲಿಗೆ ಗಾಯವಾಯಿತು. ಇದು ನನ್ನು ಜೀವನದಲ್ಲಿ ಅತಿ ದೊಡ್ಡ ಹಿನ್ನಡೆಯಾಯಿತು. ಅದರಲ್ಲೂ ವಿಶೇಷವಾಗಿ ನನ್ನ ನೃತ್ಯದ ಬಗೆಗಿನ ಅನಿಶ್ಚಿತತೆಯನ್ನು ಅನುಭವಿಸಿದೆ. ಚೇತರಿಕೆ ಸುಲಭವಾಗಿರಲಿಲ್ಲ. ಚೇತರಿಕೆಗೆ ಅಚಲವಾದ ಬದ್ಧತೆ ಮತ್ತು ಮುನ್ನುಗ್ಗುವ ಇಚ್ಛೆಯನ್ನು ಕೋರಿತು. ನನ್ನ ಮನಸ್ಸಿನಲ್ಲಿ ಸಂದೇಹ ಹರಿದಾಡಿದ ಸಮಯವಾಗಿತ್ತು. ಈ ಸಮಯದಲ್ಲಿ ಸಾಕಷ್ಟು ರೋಗಿಗಳನ್ನು ಭೇಟಿಯಾದೆ. ಅಲ್ಲಿದ್ದ ರೋಗಿಗಳಲ್ಲಿ ಒಬ್ಬರೂ ಸಂಪೂರ್ಣವಾಗಿ ಚೇತರಿಸಿಕೊಳ್ಳದ ಕಾರಣ ಆಸೆಯನ್ನು ಬಿಟ್ಟುಕೊಡಲು ನನ್ನನ್ನು ಪ್ರಚೋದಿಸಿತು. ಆದರೆ, ನಾನು ಬಿಟ್ಟುಕೊಡಲಿಲ್ಲ.

ಹಂತ ಹಂತವಾಗಿ ಮೇಲೆದ್ದೆ

ಪುನರ್ವಸತಿ ಮತ್ತು ಲೆಕ್ಕವಿಲ್ಲದಷ್ಟು ಚಿಕಿತ್ಸೆಯ ಬಳಿಕವೂ ನಾನು ಆತ್ಮಬಲದ ನಿಜವಾದ ಸಾರವನ್ನು ಕಂಡುಕೊಂಡೆ. ನೋವನ್ನು ಒಪ್ಪಿಕೊಳ್ಳುವುದರಿಂದ ದುಬರ್ಲತೆ ಆವರಿಸುತ್ತದೆ ಎಂದು ನಾನು ಕಲಿತಿದ್ದೇನೆ. ಇದರಿಂದ ಸವಾಲನ್ನು ಮೆಟ್ಟಿನಿಂತು ಅದರಿಂದ ಹೊರಬರುವ ಆತ್ಮಬಲವನ್ನು ಅಳವಡಿಸಿಕೊಂಡೆ. ನಾನು ಪ್ರತಿ ಹಿನ್ನಡೆಯನ್ನು ಬೆಳವಣಿಗೆಯ ಅವಕಾಶವಾಗಿ ಸ್ವೀಕರಿಸಿದೆ. ದಾರಿಯುದ್ದಕ್ಕೂ ಸಣ್ಣ ವಿಜಯಗಳನ್ನು ಸಹ ಆಚರಿಸಿದೆ. ಹಂತ ಹಂತವಾಗಿ ನಾನು ಮತ್ತೆ ಮೇಲೆದ್ದೆ. ದಿನಗಳು ವಾರಗಳಾಗಿ ಮತ್ತು ವಾರಗಳು ತಿಂಗಳುಗಳಾಗಿ ಮಾರ್ಪಟ್ಟಂತೆ, ನನ್ನೊಳಗೆ ನಡೆಯುತ್ತಿರುವ ಬದಲಾವಣೆಯನ್ನು ನಾನು ನೋಡಲಾರಂಭಿಸಿದೆ.

ಸಂಪೂರ್ಣವಾಗಿ ಚೇತರಿಸಿಕೊಂಡಿಲ್ಲ

ಇಷ್ಟೆಲ್ಲ ಪ್ರಯತ್ನದಿಂದಾಗಿ ಹಿಂದೆಂದಿಗಿಂತಲೂ ವಿಜಯಶಾಲಿ ಮತ್ತು ಬಲಶಾಲಿಯಾಗಿ ನಾನಿಂದ ನಿಮ್ಮ ಮುಂದೆ ನಿಂತಿದ್ದೇನೆ ಗಯ್ಸ್​. ನನ್ನ ದೇಹ ಸಂಪೂರ್ಣವಾಗಿ ಚೇತರಿಸಿಕೊಂಡಿಲ್ಲ. ಆದರೆ, ನನ್ನ ಆತ್ಮಬಲದಿಂದ ಮಹತ್ವದ ಬದಲಾವಣೆ ಆಗಿದೆ. ಈಗ ನಾನು ಯಾವುದೇ ಸವಾಲುಗಳನ್ನು ಎದುರಿಸಲು ಸಿದ್ಧಳಾಗಿದ್ದೇನೆ. ಅಂತಹ ನಂಬಿಕೆ ನನ್ನಲ್ಲಿ ಬೆಳೆದಿದೆ. ಇನ್ನು ಕೆಲವೇ ದಿನಗಳಲ್ಲಿ ಸಂಪೂರ್ಣ ಗುಣವಾಗುತ್ತೇನೆ ಎಂಬ ನಂಬಿಕೆ ಇದೆ.

ನನ್ನ ಹೆಗ್ಗಳಿಕೆಗಾಗಿ ಹೇಳತ್ತಿಲ್ಲ

ನಾನು ನನ್ನ ಈ ಕಥೆಯನ್ನು ಹಂಚಿಕೊಳ್ಳುವುದು ನನ್ನ ಹೆಗ್ಗಳಿಕೆಗಾಗಿ ಅಲ್ಲ. ಇದರ ಬದಲಾಗಿ ತಮ್ಮದೇ ಆದ ಜೀವನದ ಹೋರಾಟಗಳನ್ನು ಎದುರಿಸುತ್ತಿರುವ ಯಾರನ್ನಾದರೂ ಪ್ರೇರೇಪಿಸಲು ನಾನಿದನ್ನು ಹೇಳುತ್ತಿದ್ದೇನೆ. ನನ್ನಂತೆ ಅವರು ಕೂಡ ಪ್ರತಿಕೂಲತೆಯನ್ನು ವಿಜಯವಾಗಿ ಪರಿವರ್ತಿಸುವ ಸಾಮರ್ಥ್ಯವನ್ನು ಹೊಂದಿದ್ದಾರೆಂದು ಈ ಮೂಲಕ ನಾನು ಅವರಿಗೆ ನೆನಪಿಸುತ್ತೇನೆ. ಸಂಕಷ್ಟದ ಸಮಯದಲ್ಲಿ ನನಗೆ ಸಹಾಯ ಮಾಡಿದ ಎಲ್ಲರಿಗೂ ಧನ್ಯವಾದಗಳು ಎಂದು ಸಂಯುಕ್ತಾ ಹೇಳಿದ್ದಾರೆ. (ಏಜೆನ್ಸೀಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net