BiggBossKannada S10: ತಾರಕಕ್ಕೇರಿದ ಸಂಗೀತಾ-ವಿನಯ್ ಜಗಳ; ಸ್ನೇಹಿತರ ಮಧ್ಯೆ ಕಾರ್ತಿಕ್​ ಒದ್ದಾಟ

Untitled design - 2023-10-19T144726.361
Published on

ಬೆಂಗಳೂರು: ಬಿಗ್‌ ಬಾಸ್‌ ಕನ್ನಡ ಹತ್ತನೇ ಸೀಸನ್‌ನ ಮೊದಲ ವಾರಾಂತ್ಯ ಮುಗಿದು ಇದೀಗ ಎರಡನೇ ವಾರಕ್ಕೆ ಕಾಲಿಟ್ಟ ಸ್ಪರ್ಧಿಗಳು, ಟಾಸ್ಕ್​ನಲ್ಲಿ ತಮ್ಮನ್ನು ತಾವು ಸಂಪೂರ್ಣವಾಗಿ ತೊಡಗಿಸಿಕೊಂಡಿದ್ದಾರೆ. 'ರಣಶಕ್ತಿ' ಮತ್ತು 'ಮಾಣಿಕ್ಯ' ಎಂಬ ಎರಡು ತಂಡಗಳಾಗಿ ಸೆಣಸಾಡುತ್ತಿರುವ ಸ್ಪರ್ಧಿಗಳ ನಡುವೆ ಮಾತಿನ ಚಕಮಕಿಗಿಂತಲೂ ಮನಸ್ತಾಪಗಳ ಸಾಗರವೇ ಮೂಡಿದೆ. ಈ ಮಧ್ಯೆ ಮನೆ ಸದಸ್ಯರೆಲ್ಲರ ಗಮನ ಟಾಸ್ಕ್​ ಬದಲಿಗೆ ವಿನಯ್​ ಮತ್ತು ಸಂಗೀತಾ ಜಗಳದತ್ತ ವಾಲುತ್ತಿದೆ.

ನಿಮ್ಮ ಧ್ವನಿ ಥ್ರೆಟ್​ ಆಗುತ್ತಿದೆ ಎಂದು ವಿನಯ್​ ವಿರುದ್ಧ ಆರೋಪಿಸಿದ ಸಂಗೀತಾ ಶೃಂಗೇರಿಗೆ ಇದೀಗ ಮನೆಯಲ್ಲಿ ಉಳಿಯಲು ಮನಸ್ಸಿಲ್ಲ. ಇಬ್ಬರ ಜಗಳದಲ್ಲಿ ಸಿಲುಕಿರುವ ಕಾರ್ತಿಕ್​ ಇಬ್ಬರನ್ನು ಸಮಾಧಾನ ಪಡಿಸುವ ಕೆಲಸದಲ್ಲಿ ಸದ್ಯ ನಿರತರಾಗಿದ್ದಾರೆ. ಆದ್ರೂ ಕೂಡ ಈ ಜಟಾಪಟಿ ಅಂತ್ಯವಾಗುವ ಯಾವುದೇ ಮುನ್ಸೂಚನೆಗಳು ಲಭಿಸುತ್ತಿಲ್ಲ.

ಈ ಮಧ್ಯೆ ವಿನಯ್​ ತಾಳ್ಮೆಯನ್ನು ಕಳೆದುಕೊಂಡಿದ್ದು, ದುಃಖದಿಂದ 'ನಾನು ಯಾರಿಗ್ ಏನ್ ಮಾಡಿದೀನಿ ಗುರು'? ಎಂದು ಕೂಗಾಡಿದರು. ಇದಕ್ಕೆ ಸ್ಪಂದಿಸಿದ ಸಂಗೀತಾ ನೇರವಾಗಿ ವಿನಯ್ ಎದುರಿಗೇ ಬಂದು ಕೂತು, 'ನಿಮ್ಮಿಂದ ನನಗೆ ಡೇಂಜರ್ ಅಂತ ನಂಗೆ ಅನಿಸುತ್ತದೆ' ಎಂದು ಕೂಲ್​ ಆಗಿ ಹೇಳಿದರು. ಸಂಗೀತಾಗೆ ಮುಖ ಕೊಟ್ಟು ಮಾತನಾಡದ ವಿನಯ್​, ಕಾರ್ತಿಕ್ ಕಡೆ ತಿರುಗಿ, 'ನನ್ನ ವಾಯ್ಸ್​ ಕೇಳಿದ್ರೆ ಕಿವಿ ಮುಚ್ಕೊಳೋಕೆ ಹೇಳು' ಎಂದು ಹೇಳಿದ್ದಾರೆ.

ತದನಂತರ ಸಂಗೀತಾ ಕಡೆಗೆ ತಿರುಗಿ, 'ಪ್ಲೀಸ್ ಡಿಲೀಟ್‌ ಮೀ ಇನ್ ಯುವರ್ ಹೆಡ್' ಎಂದು ಹೇಳಿದರು. ಇನ್ನೂ ವಿನಯ್​ ಹೇಳಿಕೆಗೆ ತಿರುಗೇಟು ಕೊಟ್ಟ ಸಂಗೀತಾ, 'ಸ್ಟೋರ್ ಆಗಿದ್ರೆ ಡಿಲೀಟ್ ಮಾಡ್ಬೋದು' ಎಂದು ಮತ್ತೆ ಕೆಣಕಿದ್ದಾರೆ. ಈ ಹೇಳಿಕೆಗೆ ಕೆಂಡಾಮಂಡಲಗೊಂಡ ವಿನಯ್​, 'ಯಾರ್ ಹೆಂಗಾದ್ರೂ ಸತ್ರೆ, ವೈ ಶುಡ್ ಐ ಕೇರ್' ಎಂದು ಚಿರಾಡಿದ್ದಾರೆ.

ಸದ್ಯ ಇವರಿಬ್ಬರ ಜಗಳ ತೀವ್ರ ತಾರಕಕ್ಕೇರಿದ್ದು, ಮನೆಯವರ ಮನಸ್ಥಿತಿ ಏನಾಗಲಿದೆ? ಹತ್ತಿಕೊಂಡಿರುವ ಈ ಕಿಡಿಯನ್ನು ಶನಿವಾರ ಕಿಚ್ಚನ ಉಪಸ್ಥಿತಿಯಲ್ಲೇ ಆರಿಸಬೇಕಾ ಎಂಬುದನ್ನು ಕಾದು ನೋಡಬೇಕಿದೆ. ಇನ್ನೂ ಬಿಗ್​ ಬಾಸ್​ ಕನ್ನಡ ಸೀಸನ್​ 10 ಜಿಯೋ ಸಿನಿಮಾದಲ್ಲಿ 24 ಗಂಟೆಗಳ ಕಾಲ ಪ್ರಸಾರವಾಗುತ್ತಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net