ಗೌತಮಿ ಪತಿಯೊಟ್ಟಿಗಿರುವಾಗ ಕದ್ದು ನೋಡಿದ ಹನು-ಧನು; ನೀಡಿದ ಸ್ಪಷ್ಟನೆ ಕೇಳಿ ದಂಗಾದ BiggBoss ಸ್ಫರ್ಧಿಗಳು

BBKS 11
Published on

ಬೆಂಗಳೂರು: ಕನ್ನಡದ ಜನಪ್ರಿಯ ರಿಯಾಲಿಟಿ ಶೋ ಬಿಗ್​ಬಾಸ್ (BiggBoss) ಶುರುವಾಗಿ 14 ವಾರಗಳು ಕಳೆದಿದ್ದು, ದಿನ ಕಳೆದಂತೆ ತನ್ನ ಕ್ರೇಜ್​ ಹೆಚ್ಚಿಸಿಕೊಳ್ಳುತ್ತಿದೆ. ಇನ್ನೂ ಫಿನಾಲೆ ನಡೆಯುವುದಕ್ಕೆ ಮೂರು ವಾರಗಳು ಉಳಿದಿದ್ದು, ಕಾರ್ಯಕ್ರಮ ಮತ್ತಷ್ಟು ರೋಚಕತೆ ಹೆಚ್ಚಿಸಿಕೊಂಡಿದೆ. ಇನ್ನೂ ಶನಿವಾರದ ಸಂಚಿಕೆಯಲ್ಲಿ ಸ್ಪರ್ಧಿಗಳಿಗೆ ಸಖತ್ ಕ್ಲಾಸ್​ ತೆಗೆದುಕೊಂಡಿದ್ದ ನಿರೂಪಕ ಕಿಚ್ಚ ಸುದೀಪ್​ ಭಾನುವಾರದ ಸಂಚಿಕೆಯಲ್ಲೂ ಮನೆಯ ಬೆಳವಣಿಗೆಗಳ ಬಗ್ಗೆ ಮಾತನಾಡಲಿದ್ದಾರೆ ಎಂದು ಹೇಳಲಾಗಿದೆ. ಆದರೆ, ಇಂದಿನ ಪ್ರೋಮೋ ನೋಡಿದರೆ ಮನರಂಜನೆ ಫಿಕ್ಸ್​ ಎಂದು ಹೇಳಲಾಗಿದೆ.

ಬಾದ್​ಷಾ ಸುದೀಪ ಜೊತೆ ಸೂಪರ್ ಸಂಡೇ ಸ್ಪೆಷಲ್ ಟಾಕ್ ಎಂಬ ಅಡಿಬರಹದೊಂದಿಗೆ ಬಿಡುಗಡೆಯಾಗಿರುವ ಪ್ರೋಮೋ ನೋಡುವುದಾದರೆ ಸುದೀಪ್​ ಬಿಗ್​ಬಾಸ್​ (BiggBoss) ಮನೆಯಲ್ಲಿರುವ ಸ್ಫರ್ಧಿಗಳಿಗೆ ಹೊರಗೆ ತಮ್ಮನ್ನು ಟ್ರೋಲ್ ಮಾಡುತ್ತಿರುವ ವಿಚಾರವನ್ನು ಗಮನಕ್ಕೆ ತರುತ್ತಾರೆ. ಇದರಲ್ಲಿ ಪ್ರಮುಖವಾಗಿ ಚೈತ್ರಾ ಕುಂದಾಪುರ, ಹನುಮಂತು ಹಾಗು ಧನರಾಜ್​ ಅವರ ಟ್ರೋಲ್​ಗಳನ್ನು ತೋರಿಸಲಾಗುತ್ತದೆ. ಹನುಮಂತು ಹಾಗೂ ಧನರಾಜ್​ಗೆ ಸಂಬಂಧಿಸಿದ ಟ್ರೋಲ್​ಗಳು ಮನೆಯವರ ಗಮನ ಸೆಳೆದಿದೆ.

ಫ್ಯಾಮಿಲಿ ವೀಕ್​ನಲ್ಲಿ ಗೌತಮಿ ಅವರ ಪತಿ ಬಿಗ್​ಬಾಸ್ (BiggBoss) ಮನೆಗೆ ಬಂದಿದ್ದರು. ಈ ವೇಳೆ ದಂಪತಿಗಳು ತಮ್ಮ ಮದುವೆ ವಾರ್ಷಿಕೋತ್ಸವವನ್ನು ಆಚರಿಸಿಕೊಂಡಿದ್ದರು. ದಂಪತಿಗಳು ಒಟ್ಟಿಗೆ ಇರುವುದನ್ನು ಹನುಮಂತು ಹಾಗೂ ಧನರಾಜ್​ ಕದ್ದು ನೋಡಿ  ಮಾತನಾಡಿಕೊಂಡಿರುವುದನ್ನು ಟ್ರೋಲ್​ ಮಾಡಲಾಗಿದ್ದು, ಈ ಬಗ್ಗೆ ನಿರೂಪಕ ಕಿಚ್ಚ ಸುದೀಪ್​ಕೇಳಿದಾಗ ಧನರಾಜ್​ ನೀಡಿರುವ ಉತ್ತರ ಮನೆಮಂದಿಯನ್ನು ನಗೆಗಡಲಲ್ಲಿ ತೇಲಿಸಿದೆ. ಈ ಪ್ರೋಮೋ ಸದ್ಯ ವೈರಲ್​ ಆಗಿದ್ದು, ನೆಟ್ಟಿಗರು ತಮ್ಮಿಷ್ಟದ ಕಮೆಂಟ್​ಗಳನ್ನು ಹಾಕುತ್ತಿದ್ದಾರೆ.

ಭರಪೂರ ಮನರಂಜನೆಯ ಜೊತೆಗೆ ವಿವಾದಗಳನ್ನು ಹುಟ್ಟು ಹಾಕುವ ಬಿಗ್​ಬಾಸ್​ (BiggBoss), ಕಿರುತೆರೆ ಲೋಕದ ಜನಪ್ರಿಯ ಶೋಗಳಲ್ಲಿ ಒಂದೆಂದರೆ ತಪ್ಪಾಗಲಾರದು. ಪ್ರೀತಿ, ಸ್ನೇಹ ಸಂಬಂಧಗಳಿಗೆ ಈ ಶೋ ಬೆಸುಗೆಯಾಗುತ್ತದೆ. ಇಲ್ಲಿ ನಗು, ಕಣ್ಣೀರು, ಕೋಪ, ಮುನಿಸು ಮತ್ತು ಮನಸ್ತಾಪಗಳ ಮಿಶ್ರಣವು ಇದೆ. ಟಾಸ್ಕ್​ ನೀಡುವುದರ ಜೊತೆಗೆ ಜೀವನದ ಪಾಠವನ್ನು ಹೇಳಲಾಗುತ್ತದೆ. ಎಲ್ಲದಕ್ಕಿಂತ ಹೆಚ್ಚಾಗಿ ವಾರದ ಕೊನೆಯಲ್ಲಿ ನಟ ಕಿಚ್ಚ ಸುದೀಪ್​ ಸರಿ-ತಪ್ಪುಗಳ ತಿದ್ದುವಿಕೆ ಶೋಗೆ ಹೊಸ ಆಯಾಮವನ್ನು ತಂದುಕೊಡುತ್ತದೆ. ಈ ಎಲ್ಲ ಕಾರಣಗಳಿಂದ ಈ ಶೋ ವಿಶೇಷ ಎನಿಸಿಕೊಂಡಿದ್ದು, ಕಿರುತೆರೆ ಲೋಕದಲ್ಲಿ ಸಿಕ್ಕಾಪಟ್ಟೆ ಜನಪ್ರಿಯತೆ ಪಡೆದುಕೊಂಡಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net