

ಕಳೆದ ವಾರ ಬಿಗ್ಬಾಸ್ ಕನ್ನಡದಲ್ಲಿ ಎಲಿಮಿನೇಷನ್ ಆಗಿಲ್ಲ. ಈ ವಾರ 10 ಮಂದಿ ನಾಮಿನೇಟ್ ಆಗಿದ್ದಾರೆ. ಹಾಗಾಗಿ ಡಬಲ್ ಎಲಿಮಿನೇಷನ್ ಆಗುವ ಸಾಧ್ಯತೆಯಿದೆ ಎಂದು ಹೇಳಲಾಗುತ್ತಿದೆ.
ಬಿಗ್ ಬಾಸ್ ಮನೆಯ ಆಟಕ್ಕೆ ಗುಡ್ಬೈ ಹಾಡಲು 10 ಸ್ಪರ್ಧಿಗಳ ಮೇಲೆ ನಾಮಿನೇಷನ್ ಬಿಸಿ ತಟ್ಟಿದೆ. ಈ ಪೈಕಿ ಅನುಷಾ ರೈ, ಮೋಕ್ಷಿತಾ ಪೈ, ಧನರಾಜ್ ಆಚಾರ್, ಭವ್ಯಾ ಗೌಡ, ಧರ್ಮ ಕೀರ್ತಿರಾಜ್, ಗೋಲ್ಡ್ ಸುರೇಶ್, ಗೌತಮಿ ಜಾದವ್, ಹನುಮಂತ, ಶಿಶಿರ್ ಶಾಸ್ತಿç, ಉಗ್ರಂ ಮಂಜು ನಾಮಿನೇಟ್ ಆಗಿದ್ದಾರೆ.
ಕಳೆದ ವೀಕೆಂಡ್‌ನಲ್ಲಿ ಎಲಿಮಿನೇಷನ್ ಪ್ರಕ್ರಿಯೆ ನಡೆದಿಲ್ಲ. ಹಾಗಾಗಿ ಈ ವಾರ ಜೋಡಿ ಎಲಿಮಿನೇಷನ್ ನಡೆಯಬಹುದು ಎಂಬುದು ಪ್ರೇಕ್ಷಕರ ಲೆಕ್ಕಾಚಾರ. ಕಳೆದ ವಾರ ಭವ್ಯಾ ಎಲಿಮಿನೇಟ್ ಎಂದು ಬಿಗ್ ಬಾಸ್ ಪ್ರ್ಯಾಂಕ್ ಮಾಡಿದರು.
ಈಗಾಗಲೇ ಯಮುನಾ, ರಂಜಿತ್, ಹಂಸ, ಮಾನಸಾ ಅವರ ಆಟ ದೊಡ್ಮನೆಯಲ್ಲಿ ಅಂತ್ಯವಾಗಿದೆ. ಹಾಗಾದ್ರೆ ಈ ವಾರಾಂತ್ಯ ಆಟಕ್ಕೆ ಬ್ರೇಕ್ ಬೀಳಲಿದೆ ಎಂಬುದರ ಬಗ್ಗೆ ಪ್ರೇಕ್ಷಕರು ಕೌತುಕದಿಂದ ಎದುರು ನೋಡುತ್ತಿದ್ದಾರೆ. ಬಿಗ್ ಬಾಸ್ ಕನ್ನಡ ಸೀಸನ್ 11 ದಿನ ಕಳೆದಂತೆ ಹೊಸ ತಿರುವುಗಳಲ್ಲಿ ಸಾಗುತ್ತಿದೆ. ಈ ವಾರ ನಾಮಿನೇಷನ್ ಪ್ರಕ್ರಿಯೆ ನಡೆಯುತ್ತಿರುವ ರೀತಿ ವಿಭಿನ್ನವಾಗಿದೆ.
ಈ ವಾರ ಬಿಗ್ ಬಾಸ್ ಕನ್ನಡ ಮನೆಯಲ್ಲಿ ಸ್ಟ್ರಾಂಗ್ ಕಂಟೆಸ್ಟಂಟ್‌ಗಳೇ ನಾಮಿನೇಟ್ ಆಗಿದ್ದಾರೆ.