BiggBoss ಮನೆಯಲ್ಲಿ ಸ್ಯಾಂಡಲ್​ವುಡ್​ ತಾರೆಯರು ಸ್ಪರ್ಧಿಗಳಾದ್ರೆ ಹೇಗಿರತ್ತೆ?; ಅಭಿನಯ ಚಕ್ರವರ್ತಿ ಕೊಟ್ಟ ಉತ್ತರ ಮಾತ್ರ...

Untitled design - 2024-12-23T175720.278
Published on

ಖಾಸಗಿ ವಾಹಿನಿಯಲ್ಲಿ ಮೂಡಿಬರುತ್ತಿರುವ ಕನ್ನಡ ಬಿಗ್​ಬಾಸ್(BiggBoss)​ ಶೋ ಸದ್ಯ ಎಲ್ಲರ ಮನದಲ್ಲಿನ ಟಾಪಿಕ್​ ಆಗಿದೆ. ಅಂದ್ಹಾಗೆ ಇದು ಸೀಸನ್​ 11 ಎಂಬುದು ಗೊತ್ತೆ ಇದೆ. ಅದೂ ಅಲ್ಲದೆ ಕಳೆದ 10 ಸೀಸನ್​ಗಳನ್ನು ಯಶಸ್ವಿಯಾಗಿ ನಡೆಸಿಕೊಟ್ಟಿರುವ ಅಭಿನಯ ಚಕ್ರವರ್ತಿ ಸುದೀಪ್​​​​ ಅವರು ಇದು ನನ್ನ ಕೊನೆಯ ನಿರೂಪಣೆಯಾಗಿದೆ. ಬಿಗ್​ಬಾಸ್​​ ಸೀಸನ್​​​ 11ರೊಂದಿಗೆ ತಮ್ಮ ಮತ್ತು ಬಿಗ್​ಬಾಸ್ ಪಯಣವನ್ನು ಮುಗಿಸುವುದಾಗಿ ಸ್ವತಃ ಸುದೀಪ್​ ಅವರೇ ತಿಳಿಸಿದ್ದರು.

ಪ್ರತಿ ಬಾರಿಯೂ ಬಿಗ್​ಬಾಸ್​​ ಮನೆಗೆ ಹೋಗುವ ಸ್ಪರ್ಧಿಗಳನ್ನು ನಾವು ನೋಡುತ್ತೇವೆ. ಎಲ್ಲಾ ವಿಭಾಗದಿಂದ ಆಯ್ದ ವ್ಯಕ್ತಿಗಳನ್ನು ಆ ದೊಡ್ಮನೆಗೆ ಕಳುಹಿಸಲಾಗುತ್ತದೆ. ಅದೇ ಮನೆಗೆ ನಮ್ಮ ಚಂದನವನದ ತಾರೆಯರು ಎಂಟ್ರಿ ಕೊಟ್ಟರೆ ಹೇಗಿರುತ್ತೆ ಅಲ್ವಾ.. ಆಲೋಚಿಸಿದರೆ ಫುಲ್​ ಖುಷ್​ ಆಗೋದಂತೂ ಸತ್ಯ ಸಂಗತಿ. ಆದ್ರೆ ಅವರೆಲ್ಲಾ ಇದ್ರೆ ಅವರ ಮಾತುಕತೆ ಅಥವಾ ಒಡನಾಟ ಹೇಗಿರುತ್ತೆ. ಇದರ ಉತ್ತರವನ್ನು ನಾವು ಆಲೋಚನೆ ಮಾಡುವುದಕ್ಕಿಂತ ಬಿಗ್​ಬಾಸ್​​ ಶೋ ನಿರೂಪಣೆ ಮಾಡುತ್ತಿರುವ ಕಿಚ್ಚ ಸುದೀಪ್​​ ಅವರ ಮಾತಿನಲ್ಲಿ ಕೇಳಿದರೆ ಮಜಾವಾಗಿರುತ್ತದೆ.

ಸ್ಯಾಂಡಲ್​ವುಡ್​ನ ಬಹುತೇಕ ತಾರೆಯರೊಂದಿಗೆ ಒಡನಾಟ ಇರುವ ಕಿಚ್ಚ ಸುದೀಪ್​ ಅವರೇ ಬಿಗ್​ಬಾಸ್​ ಮನೆಗೆ ಸ್ಪರ್ಧಿಗಳಾಗಿ ಚಂದನವನದ ತಾರೆಯರು ಬಂದರೆ ಹೇಗಿರುತ್ತೇ ಎಂಬುದನ್ನು ಇತ್ತೀಚೆಗೆ ಖಾಸಗಿ ವಾಹಿನಿಯಲ್ಲಿ ನಡೆದ ಸಂದರ್ಶನದಲ್ಲಿ ಹೇಳಿದ್ದಾರೆ. ಕಿಚ್ಚ ಸುದೀಪ್​ ಅವರನ್ನು ನೀವು ಬಿಗ್​ಬಾಸ್​​ ಸ್ಪರ್ಧಿಯಾಗಿ ದೊಡ್ಮನೆಗೆ ಹೋದ್ರೆ ಎಂದು ಕೇಳಲಾಗಿದೆ. ಅದಕ್ಕೆ ಪ್ರತಿಯಾಗಿ ಸುದೀಪ್​​​, ನಾವು ಬಿಗ್​ಬಾಸ್​ ಮನೆಗೆ ಹೋದ್ರೆ ನನ್ನ ಸಹ ಕಂಟೆಸ್ಟೆಂಟ್​​ಗಳು ಯಾರು ಎಂದು ಕೇಳಿದ್ದಾರೆ. ಆ ಸಮಯದಲ್ಲಿ ಸ್ಯಾಂಡಲ್​ವುಡ್​​​ ತಾರೆಯೆ ಹೆಸರುಗಳನ್ನು ತೆಗೆದುಕೊಳ್ಳಲಾಗಿದೆ. ಪ್ರತಿಯೊಬ್ಬರ ಹೆಸರು ಬಂದಾಗ ಅಭಿನಯ ಚಕ್ರವರ್ತಿ ಹೇಳಿದ ಉತ್ತರ ತಮಾಷೆಯಾಗಿ ಮತ್ತು ಸ್ವಾರಸ್ಯಕರವಾಗಿದೆ.

ಸಹ ಕಂಟೆಸ್ಟೆಂಟ್​ ಆಗಿ ಶಿವರಾಜ್​ಕುಮಾರ್ ಅವರನ್ನು ಕಳುಹಿಸಿದ್ರೆ ಎಂದು ಕೇಳಿದಾಗ ಸುದೀಪ್​​ ಅವರು ನಾವೇ ಅವರನ್ನು ಗೆಲ್ಲಿಸಿ ಕಳುಹಿಸುತ್ತೇವೆ. ಶಿವಣ್ಣ ಏನು ಶ್ರಮ ಪಡುವುದೇ ಬೇಡ. ಶಿವಣ್ಣ ಗೆಲ್ಲಬೇಕು ಎಂದು ನಾವೇ ಗೆಲ್ಲಿಸಿ ಕಳುಹಿಸುತ್ತೇವೆ ಎಂದು ಹೇಳಿದ್ದಾರೆ. ಮತ್ತೊಂದು ಧ್ರುವ ಸರ್ಜಾ ಹೆಸರನ್ನು ತೆಗೆದುಕೊಳ್ಳಲಾಯಿತು. ಅದಕ್ಕೆ ಉತ್ತರಿಸಿದ ಕಿಚ್ಚ ಸುದೀಪ್​​ ಧ್ರುವನನ್ನು ಕರೆದು ಹೇಳುತ್ತೇನೆ, ನಾನು ಗೆಲ್ಲಬೇಕು ಸುಮ್ಮನೆ ಸೈಡಿಗೆ ಬಾ.. ಇಲ್ಲ ಅಂದ್ರೆ ಮರ್ಯಾದೆ ಹೋಗುತ್ತೇ ಎಂದು. ಆಗ ಅವರು ಆಯ್ತು ನೋ ಪ್ರಾಬ್ಲಂ ಎಂದು ಬರ್ತಾರೆ. ಸುಲಭ ಆಗುತ್ತೆ ಬಿಗ್​ಬಾಸ್​ ಗೆಲ್ಲುವುದು ಎಂದು ಹೇಳಿದ್ದಾರೆ.

ಮುಂದಿನ ಹೆಸರಿನಲ್ಲಿ ಸ್ಯಾಂಡಲ್​ವುಡ್​​ ಕ್ವೀನ್​ ರಮ್ಯಾ ಮೇಡಂ ಹೆಸರನ್ನು ತೆಗೆದುಕೊಳ್ಳಲಾಗುತ್ತದೆ. ಇದಕ್ಕೆ ಅಭಿನಯ ಚಕ್ರವತ್ತಿ ಸ್ವಲ್ಪ ತಮಾಷೆಯಾಗಿ ಉತ್ತರಿಸಿದ್ದಾರೆ. ಸರ್​ ಬಾಗಿಲು ಓಪನ್​ ಆಗುತ್ತಲ್ಲ ಒಂದು ಕೀಯನ್ನು ನನ್ನ ಬಳಿ ಇಟ್ಟಿರುತ್ತೇನೆ. ಯಾಕಂದ್ರೆ ಬಿಗ್​ಬಾಸ್​ ಮನೆಯಿಂದ ಒಂದು ಅವರು ಓಡಿಹೋಗ್ತಾರೆ ಇಲ್ಲ ನಾನು ಓಡಿಹೋಗ್ತೇನೆ. ನಾವಿಬ್ಬರೂ ಒಳ್ಳೆಯ ಸ್ನೇಹಿತರು ಆದ್ರೆ ನಾವು ಕೆಲವು ಸಮಯ ಮಾತ್ರ ಒಟ್ಟಿಗೆ ಮಾತನಾಡಬಲ್ಲೆವು ಎಂದು ತಿಳಿಸಿದರು.

ಕೊನೆಯದಾಗಿ ಬುದ್ಧಿವಂತ.. ರಿಯಲ್​ ಸ್ಟಾರ್ ಉಪೇಂದ್ರ ಅವರ ಹೆಸರನ್ನು ಹೇಳಲಾಯಿತು. ಇದಕ್ಕೆ ಉತ್ತರಿಸಿದ ಸುದೀಪ್​​, ಆಹಾ.... ಉಪ್ಪಿ ಸರ್​ ಇರೋ ಕಡೆ ಬಿಗ್​ಬಾಸ್​​ಗೆ ಏನು ಕೆಲಸ ಎಂದು ಯೋಚಿಸಬೇಕಾಗುತ್ತದೆ. ಏಕೆಂದರೆ ಬಿಗ್​ಬಾಸ್​​ ಒಂದು ಟಾಸ್ಕ್​​ ಕೊಟ್ರೆ ಇವರೇ ಒಂದು ಕ್ರಿಯೆಟ್ ಮಾಡುತ್ತಿರುತ್ತಾರೆ. ಎಲ್ಲರಿಗೂ ಸುದೀಪ್​ ಅದಲ್ಲಾ ರೀ ಟಾಸ್ಕ್​​ ಇದು ಟಾಸ್ಕ್​​​.. ಹೇಳ್ತೇನೆ ಕೇಳ್ರಿ, ಅವರು ಮಾಡೋದೆ ತಪ್ಪು ರೀ.. ಬಿಗ್​ಬಾಸ್ಸೆ ತಪ್ಪು ರೀ.. ಎಲ್ಲರದ್ದೂ ತಪ್ಪು ಎಂದು ಹೇಳುತ್ತಾರೆ. ಸರ್​ ಉಪೇಂದ್ರ ಅವರು ಬಿಗ್​ಬಾಸ್​ ಮನೆಯಲ್ಲಿ ಕಂಟೆಸ್ಟೆಂಟ್​ ಆಗಿ ಇದ್ದರೆ, ಬಿಗ್​ಬಾಸ್​ ಮನೆಯಲ್ಲಿ 18 ಸ್ಪರ್ಧಿಗಳು ಇರ್ತಾರೆ ಎಂದುಕೊಳ್ಳೋಣ. 18 ಮಂದಿಯಲ್ಲಿ ಉಪ್ಪಿ ಸರ್​ ಇದ್ದಾರೆ ಎಂದುಕೊಂಡ್ರೆ 17 ಮಂದಿ ಕಳಪೆಗೆ ಹೋಗ್ತಾರೆ ಎಂದು ತಮಾಷೆಯಾಗಿ ಉತ್ತರಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net