

ಹೈದರಾಬಾದ್: ನಟ ಅಲ್ಲು ಅರ್ಜುನ್ ಅವರ ಪುಷ್ಪ 2(Pushpa 2); ದಿ ರೂಲ್ ಸಿನಿಮಾದ ಪ್ರದರ್ಶನದ ವೇಳೆ ಕಾಲ್ತುಳಿತದಲ್ಲಿ ಮೃತಪಟ್ಟ ಮಹಿಳೆ ಕುಟುಂಬಕ್ಕೆ 20 ಕೋಟಿ ರೂಪಾಯಿ ನೀಡಬೇಕು ಎಂದು ತೆಲಂಗಾಣ ಸಚಿವ ಕೋಮಟಿರೆಡ್ಡಿ ವೆಂಕಟ್ ರೆಡ್ಡಿ ಒತ್ತಾಯಿಸಿದ್ದಾರೆ.
ಈ ಕುರಿತು ಭಾನುವಾರ(ಡಿಸೆಂಬರ್ 22) ಮಾತನಾಡಿದ ಕೋಮಟಿರೆಡ್ಡಿ, ನಟ ಅಲ್ಲು ಅರ್ಜುನ್ ಅವರನ್ನು ಟೀಕಿಸಿದ್ದಾರೆ. ಪೊಲೀಸರು ಮೊದಲೆ ಎಚ್ಚರಿಕೆ ನೀಡದ್ದರ ಹೊರತಾಗಿಯೂ ಅಲ್ಲು ಅರ್ಜುನ್ ಪ್ರೀಮಿಯರ್‌ನಲ್ಲಿ ಹಾಜರಿರುವುದು. ಅಲ್ಲದೆ ಅಲ್ಲು ಅರ್ಜುನ್ ತನ್ನ ಅಜ್ಞಾನ ಮತ್ತು ನಿರ್ಲಕ್ಷ್ಯ ನಡವಳಿಕೆಯಿಂದ ಥಿಯೇಟರ್‌ನಲ್ಲಿ ಉಳಿಯುವುದನ್ನು ಮುಂದುವರೆಸಿದರು. ಇದರಿಂದ ಅನಿಯಂತ್ರಿತ ಜನಸಂದಣಿ ಮತ್ತು ಪರಿಣಾಮವಾಗಿ ಸಾವಿಗೆ ಕಾರಣವಾಗಿದೆ ಎಂದು ಹೇಳಿದರು.
ಪುಷ್ಪಾ 2 ಬಾಕ್ಸ್ ಆಫೀಸ್‌ನಲ್ಲಿ ಅದ್ಭುತ ಕಲೆಕ್ಷನ್ ಮಾಡಿದೆ. ಅಲ್ಲು ಅರ್ಜುನ್ ಮಾಡಬಹುದಾದ ಕನಿಷ್ಠ ಕೆಲಸವೆಂದರೆ ಕಲೆಕ್ಷನ್ ಆಗಿರುವ ಹಣದಲ್ಲಿ 20 ಕೋಟಿ ರೂಪಾಯಿಯನ್ನು ಸಂತ್ರಸ್ತ ಕುಟುಂಬಕ್ಕೆ ನೀಡಿ ಸಹಾಯ ಮಾಡುವುದು ಎಂದು ಅವರು ತಿಳಿಸಿದರು. ವಿಧಾನಸಭೆಯಲ್ಲಿ ನಡೆದ ಚರ್ಚೆಯ ವೇಳೆ ರಾಜ್ಯದ ಸಿನಿಮಾಟೋಗ್ರಫಿ ಸಚಿವ ರೆಡ್ಡಿ ಅವರೂ ಅಲ್ಲು ಅರ್ಜುನ್ಅವರನ್ನು ಟೀಕಿಸಿದ್ದಾರೆ. ನಟನಿಗೆ ಸರ್ಕಾರ ಮತ್ತು ಮುಖ್ಯಮಂತ್ರಿ ಬಗ್ಗೆ ಗೌರವ ಇರಬೇಕೆಂದು ಗಮನಿಸಿದ ಸಚಿವರು, ಅಲ್ಲು ಅರ್ಜುನ್ ಸರ್ಕಾರ ಮತ್ತು ಸಿಎಂ ಕ್ಷಮೆಯಾಚಿಸಬೇಕು ಎಂದು ಒತ್ತಾಯಿಸಿದರು. ಈ ಸರ್ಕಾರವು ಎಂದಿಗೂ ಸೇಡಿನ ಕ್ರಮವಲ್ಲ. ಸಿನಿಮಾಟೋಗ್ರಫಿ ಸಚಿವರಾಗಿ ನಾವು ಚಲನಚಿತ್ರೋದ್ಯಮವನ್ನು ಉತ್ತೇಜಿಸಲು ಬೆನಿಫಿಟ್ ಶೋಗಳಿಗೆ ಮತ್ತು ಟಿಕೆಟ್ ದರವನ್ನು ಹೆಚ್ಚಿಸಲು ಅವಕಾಶ ನೀಡಿದ್ದೇವೆ ಎಂದು ಅವರು ಹೇಳಿದರು.
ಡಿಸೆಂಬರ್ 4 ರಂದು ಹೈದರಾಬಾದ್‌ನ ಸಂಧ್ಯಾ ಥಿಯೇಟರ್‌ನಲ್ಲಿ ‘ಪುಷ್ಪ 2’ ವಿಶೇಷ ಪ್ರದರ್ಶನದ ವೇಳೆ ಕಾಲ್ತುಳಿತದಿಂದ ಮಹಿಳೆಯೊಬ್ಬರು ಪ್ರಾಣ ಕಳೆದುಕೊಂಡರು. ಈ ಪ್ರಕರಣದಲ್ಲಿ ನಟ ಅಲ್ಲು ಅರ್ಜುನ್ ಅವರನ್ನು ಬಂಧಿಸಲಾಗಿತ್ತು. ಬಳಿಕ ಹೈದರಾಬಾದ್ ನ್ಯಾಯಾಲಯವು ನಟ ಅಲ್ಲು ಅರ್ಜುನ್ ಅವರಿಗೆ 14 ದಿನಗಳ ನ್ಯಾಯಾಂಗ ಬಂಧನದ ಆದೇಶವನ್ನು ನೀಡಿತ್ತು. ಆದರೆ ಅದೇ ದಿನ ಸಂಜೆ ಹೈಕೋರ್ಟ್ 50,000 ರೂಪಾಯಿಗಳ ವೈಯಕ್ತಿಕ ಬಾಂಡ್ ಮೇಲೆ ಅಲ್ಲು ಅರ್ಜುನ್ ಅವರಿಗೆ ಮಧ್ಯಂತರ ಜಾಮೀನು ನೀಡಿತು. (ಏಜೆನ್ಸೀಸ್)