Pushpa 2 ಸ್ಕ್ರೀನಿಂಗ್​​ ವೇಳೆ ಚಿತ್ರಮಂದಿರಕ್ಕೆ ಪೊಲೀಸರ ಖಡಕ್​​ ಎಂಟ್ರಿ; ವಾಂಟೆಡ್​ ಕ್ರಿಮಿನಲ್​​​ ಅರೆಸ್ಟ್​​​

Untitled design - 2024-12-22T142459.246
Published on

ಮುಂಬೈ: ಮಹಾರಾಷ್ಟ್ರದ ನಾಗ್ಪುರದ ಚಿತ್ರಮಂದಿರದಲ್ಲಿ ವಿಚಿತ್ರ ಘಟನೆಯೊಂದು ಬೆಳಕಿಗೆ ಬಂದಿದೆ. ಸಿನಿಮಾ ನೋಡಲು ಥಿಯೇಟರ್​ ತಲುಪಿದ್ದ ಪ್ರೇಕ್ಷಕರಿಗೆ ಒಂದೇ ಸಮಯದಲ್ಲಿ ಎರಡೇರಡು ಸಿನಿಮಾ ನೋಡುವ ಅವಕಾಶ ಲಭಿಸಿದೆ. ಅರೇ.. ಹೇಗೆ ಸಾಧ್ಯ ಎಂದು ಆಲೋಚಿಸುತ್ತಿದ್ದೀರಾ. ಹೌದು ಒಂದು ಸಿನಿಮಾ ತೆರೆ ಮೇಲೆ ಮೂಡಿ ಬರುತಿತ್ತು ಮತ್ತೊಂದು ಸಿನಿಮಾಮಂದಿರದಲ್ಲಿ ಲೈವ್​ ಆಗಿ ನಡೆಯಿತು.

ವಾಸ್ತವವಾಗಿ ಪುಷ್ಪ-2(Pushpa 2) ಸಿನಿಮಾದ ತಡರಾತ್ರಿ ಶೋ ವೇಳೆ ಪೊಲೀಸರು ಮಲ್ಟಿಪ್ಲೆಕ್ಸ್ ಮೇಲೆ ದಾಳಿ ನಡೆಸಿದರು. ಕೊಲೆ ಮತ್ತು ಮಾದಕ ದ್ರವ್ಯ ಪ್ರಕರಣಗಳಲ್ಲಿ ಬೇಕಾಗಿದ್ದ ಆರೋಪಿಯೂ ಸಿನಿಮಾ ಹಾಲ್‌ನಲ್ಲಿ ಪ್ರೇಕ್ಷಕರ ಜತೆ ಚಿತ್ರ ವೀಕ್ಷಿಸುತ್ತಿದ್ದ. ಸಿನಿಮಾ ಹಾಲ್​ಗೆ ಎಂಟ್ರಿ ಕೊಟ್ಟ ಪೊಲೀಸರು ಆತನನ್ನು ಸುತ್ತುವರಿದು ಬಂಧಿಸಿದ್ದಾರೆ.

ಆರೋಪಿಯನ್ನು ಬಂಧಿಸಿದ ನಂತರ ಸಿನಿಮಾವನ್ನು ಆನಂದಿಸುವಂತೆ ಪೊಲೀಸರು ಅಲ್ಲಿ ಕುಳಿತಿದ್ದ ಪ್ರೇಕ್ಷಕರಿಗೆ ತಿಳಿಸಿದರು. ಆರೋಪಿ ವಿಶಾಲ್ ಮೇಶ್ರಾಮ್ ಕಳೆದ 10 ತಿಂಗಳಿನಿಂದ ತಲೆಮರೆಸಿಕೊಂಡಿದ್ದ. ಇತ್ತೀಚೆಗಷ್ಟೇ ಬಿಡುಗಡೆಯಾದ ಪುಷ್ಪ-2 ಸಿನಿಮಾದ ಮೇಲಿನ ಆತನ ಆಸಕ್ತಿಯನ್ನು ಮೂಲಗಳಿಂದ ತಿಳಿದ ಪೊಲೀಸರು ಸಮಯ ನೋಡಿ ಆತನನ್ನು ಬಂಧಿಸಿದ್ದಾರೆ.

ಆರೋಪಿ ವಿಶಾಲ್ ವಿರುದ್ಧ ನಾಗ್ಪುರದ ಸೆಂಟ್ರಲ್ ಜೈಲಿನಲ್ಲಿ 27 ಪ್ರಕರಣಗಳು ದಾಖಲಾಗಿದ್ದು, ಇದರಲ್ಲಿ ಎರಡು ಕೊಲೆಗಳು ಮತ್ತು ಮಾದಕವಸ್ತು ಕಳ್ಳಸಾಗಣೆ ಸೇರಿವೆ. ಪೊಲೀಸರು ಆತನನ್ನು ನಿರಂತರವಾಗಿ ಹುಡುಕಾಟ ನಡೆಸುತ್ತಿದ್ದರು ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ. ಸದ್ಯ ಆರೋಪಿಯನ್ನು ನಾಗ್ಪುರದ ಕೇಂದ್ರ ಕಾರಾಗೃಹದಲ್ಲಿ ಇರಿಸಲಾಗಿದೆ. ಶೀಘ್ರದಲ್ಲೇ ಅವರನ್ನು ನಾಸಿಕ್ ಜೈಲಿಗೆ ಸ್ಥಳಾಂತರಿಸಲಾಗುವುದು ಎಂದು ತಿಳಿಸಿದರು.  ಅಲ್ಲು ಅರ್ಜುನ್​ ಮತ್ತು ರಶ್ಮಿಕಾ ಮಂದಣ್ಣ ಅಭಿನಯದ ಸುಕುಮಾರ್ ನಿರ್ದೇಶನದ ಪುಷ್ಪ 2: ದಿ ರೂಲ್ ಡಿಸೆಂಬರ್ 5 ರಂದು ಬಿಡುಗಡೆಯಾಗಿದೆ. (ಏಜೆನ್ಸೀಸ್​​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net