

ಬಿಗ್ ಬಾಸ್ ಕನ್ನಡ 10ರ ಮನೆ ಈಗ ಹಳ್ಳಿ ಮನೆಯಾಗಿ ಬದಲಾಗಿದೆ. ಸ್ಪರ್ಧಿಗಳಿಗೆ ಗಾರ್ಡನ್ ಏರಿಯಾದಲ್ಲಿ ಇಡೀ ದಿನ ಕಳೆಯುವಂತೆ ಟಾಸ್ಕ್ ನೀಡಲಾಗಿದೆ. ವಿವಿಧ ಗೇಮ್‌ಗಳ ಮೂಲಕ ಆಟದ ರೋಚಕತೆಯನ್ನು ಹೆಚ್ಚಿಸಲಾಗುತ್ತಿದೆ. ಈ ಮಧ್ಯೆ ಬಿಗ್ ಬಾಸ್ ಮನೆಯೊಳಗೆ ಮಾತಿನ ಚಕಮಕಿ ಮುಂದುವರಿದಿದ್ದು, ಇದೀಗ ಡ್ರೋನ್ ಪ್ರತಾಪ್ ಮತ್ತು ವಿನಯ್ ಗೌಡ ನಡುವೆ ನಡೆದ ಸಂಭಾಷಣೆ ಸೋಶಿಯಲ್ ಮೀಡಿಯಾದಲ್ಲಿ ಟ್ರೋಲರ್ಗಳಿಗೆ ಆಹಾರವಾದಂತಿದೆ.
ಇದೀಗ ಈ ವಾರದ ಕ್ಯಾಪ್ಟನ್ ಆಗಿ ವಿನಯ್ ಗೌಡ ಆಯ್ಕೆ ಆಗಿದ್ದಾರೆ. ತಮ್ಮ ಗಟ್ಟಿ ಧ್ವನಿಯಿಂದ ವಿನಯ್ ಜನರ ಕೆಂಗಣ್ಣಿಗೆ ಗುರಿಯಾಗಿದ್ದಾರೆ.
ಸಂಗೀತಾ ಹಿಂದಿನ ಸಂಚಿಕೆಯಲ್ಲಿ ಕವಚನದಲ್ಲಿ ಮಾತನಾಡಿಸಬೇಡ ಅಂತ ವಿನಯ್‌ಗೆ ವಾರ್ನಿಂಗ್ ಕೊಟ್ಟಿದ್ರು. ತನಿಷಾ ಕುಪ್ಪಂಗೂ ವಿನಯ್ ಏಕವಚನದಲ್ಲಿ ಮಾತನಾಡಿಸಿರೋದಕ್ಕೆ ಜನ ವಿನಯ್ ಒರಟು ಹೆಣ್ಣು ಮಕ್ಕಳ ಜತೆ ಹೇಗೆ ಮಾತನಾಡ್ಬೇಕು ಅಂತಾನೆ ಈತನಿಗೆ ಗೊತ್ತಿಲ್ಲ ಎಂದು ಕಾಮೆಂಟ್ಗಳನ್ನ ಮಾಡುತ್ತಿದ್ದಾರೆ.
ಕ್ಯಾಪ್ಟನ್ ಪಟ್ಟಕ್ಕೆ ಆಯ್ಕೆಯಾಗಿರುವ ವಿನಯ್ ಸದ್ಯ ಅದರ ಬಗ್ಗೆ ವಿಷಾದ ವ್ಯಕ್ತಪಡಿಸಿ ತನಿಷಾ ಬಳಿ ಕ್ಷಮೆ ಕೇಳಿದ್ದಾರೆ. ಕಿಚ್ಚ ಸುದೀಪ್ ನೀಮ್ಮನ್ನು ಪೈನಲಿಸ್ಟ್ ಎಂದು ಆಯ್ಕೆ ಮಾಡುತ್ತೀನೆ ಎಂದು ಹೇಳಿದ್ದಕ್ಕೆ ಈ ರೀತಿ ಮಾಡುತ್ತಿದ್ದಾರಾ? ಅನ್ನೋದು ವೀಕ್ಷಕರ ಪ್ರಶ್ನೆಯಾಗಿದೆ. ಇಂತಹ ಒರಟು ಬಿದ್ಧಿ ಇರೋರು ಫೈನಲ್ಸ್ಗೆ ಬರೋದೇ ಇಲ್ಲ ಎಂದು ಜನ ಹೇಳಿತ್ತಿದ್ದಾರೆ.
ಕಿಚ್ಚ ಸುದೀಪ್ ಯಾರ ವಿಚಾರವಾಗಿ ಮಾತನಾಡಬಹುದು ಅನ್ನೋದನ್ನು ಕಾದುನೋಡಬೇಕು. ಇನ್ನು ವಿನಯ್ ಗೌಡ ಅವರನ್ನು ಬಾಯ್ಕಾಟ್ ಮಾಡಿ ಇವರ ವರ್ತನೆ ಮಕ್ಕಳ ಮೇಲೆ ಕೆಟ್ಟ ಪರಣಾಮ ಬೀರುತ್ತೆ ಎಂದು ಸಾಕಷ್ಟು ಮಂದಿ ಕಾಮೆಂಟ್ ಮಾಡಿದ್ದಾರೆ.