ಬಿಗ್​​ ಬಾಸ್​ ಮನೆಯಲ್ಲಿ ಹಾಟ್ ರೊಮಾನ್ಸ್; ಸಾಮಾಜಿಕ ಜಾಲತಾಣಗಳಲ್ಲಿ ವಿಡಿಯೋ ವೈರಲ್​..!

ಬ ್ಇನಅಯ
Published on

ಬಿಗ್ ಬಾಸ್ ಹಿಂದಿ ಸೀಸನ್ 17ರಲ್ಲಿ ಸ್ಪರ್ಧಿಗಳು ತಮ್ಮ ಹದ್ದು ಮೀರಿ ವರ್ತಿಸುತ್ತಿದ್ದಾರೆ ಎಂದು ನೆಟ್ಟಿಗರು ಕೆಂಡಕಾರುತ್ತಿದ್ದಾರೆ. ಇದಕ್ಕೆ ಕಾರಣವಾಗಿದ್ದು, ಸಮರ್ಥ್ ಜುರೆಲ್ ಮತ್ತು ಇಶಾ ಮಾಳವೀಯಾ ಅವರ ಕೆಲ ದೃಶ್ಯಗಳು. ಸಮರ್ಥ್, ಇಶಾ ಸೀರೆಯನ್ನು ಎತ್ತಿ ಸೊಂಟಕ್ಕೆ ಮುತ್ತಿಡುತ್ತಿದ್ದಾರೆ. ಈ ದೃಶ್ಯ ಪ್ರಸಾರವಾಗುತ್ತಿದ್ದಂತೆ, ಸ್ಪರ್ಧಿಗಳ ವರ್ತನೆಗೆ ವ್ಯಾಪಕ ಟೀಕೆ ವ್ಯಕ್ತವಾಗಿವೆ.


ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ದೊಡ್ಡ ಮಟ್ಟಿನಲ್ಲಿ ವೈರಲ್​ ಆಗುತ್ತಿದ್ದು, ಈ ಹುಡುಗಿ ನಿಜವಾಗಿಯೂ ನಿಬ್ಬಿ, ಯಾವುದೇ ಕಾರಣವಿಲ್ಲದೆ ಬಿಗ್ ಬಾಸ್‌’ನಲ್ಲಿದ್ದಾಳೆ. ಅವಳನ್ನು ಹೊರಗೆ ಕಳುಹಿಸಿ” ಎಮದು ಆಕ್ರೋಶ ವ್ಯಕ್ತ ಪಡಿಸಿದ್ದಾರೆ.


ಮತ್ತೊಬ್ಬ ಬಳಕೆದಾರ ಇವೆಲ್ಲವನ್ನ ನಿಮ್ಮ ಖಾಸಗಿ ಕೋಣೆಯಲ್ಲಿ ಇಟ್ಟುಕೊಳ್ಳಿ ಎಂದಿದ್ದಾರೆ. ಈ ರೀತಿ ವರ್ತಿಸೋದು ಎಷ್ಟು ಸರಿ ಎಂದು ಕೆಲವು ಮಂದಿ ಪ್ರಶ್ನಿಸಿದ್ರೆ, ಇನ್ನೂ ಹಲವರು ಇವರಿಗೆ ಮಾನ ಮರಿಯಾದೇನೇ ಇಲ್ಲ ಎಂದು ಕಾಮೆಂಟ್​​ ಮಾಡುತ್ತಿದ್ದಾರೆ.


ಬಿಗ್ ಬಾಸ್ ಹಿಂದಿ 17ರ ಸ್ಪರ್ಧಿಗಳಾದ ಇಶಾ ಮಾಳವಿಯಾ ಮತ್ತು ಸಮರ್ಥ್ ಜುರೆಲ್ ತಮ್ಮ ಸಂಬಂಧದ ಕಾರಣದಿಂದ ಸಖತ್ ಸುದ್ದಿಯಲ್ಲಿದ್ದಾರೆ. ವೀಕೆಂಡ್ ಕಾ ವಾರ್’ನಲ್ಲಿ, ಸಮರ್ಥ್ ಮತ್ತು ಆಕೆಯ ಮಾಜಿ ಗೆಳೆಯ ಅಭಿಷೇಕ್ ಕುಮಾರ್ ನಡುವೆ ತಪ್ಪು ತಿಳುವಳಿಕೆಯನ್ನು ಸೃಷ್ಟಿಸಿದ್ದಕ್ಕಾಗಿ ಸಲ್ಮಾನ್ ಖಾನ್ ಇಶಾ ಅವರನ್ನು ತರಾಟೆಗೆ ತೆಗೆದುಕೊಂಡಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net