ಮೂರು ತಿಂಗಳು ಬಾಡಿಗೆ ಕಟ್ಟಿಲ್ಲ..ಇವತ್ತಲ್ಲ ನಾಳೆ ಸಾಧನೆ ಮಾಡೇ ಮಾಡುತ್ತೀವಿ: ಕಾರ್ತಿಕ್ ಮಹೇಶ್

karthik mahesh (2)
Published on

ಬೆಂಗಳೂರು: ಬಿಗ್ ಬಾಸ್ ಕನ್ನಡ ಸೀಸನ್ 10ರ ಚಾಂಪಿಯನ್ ಆಗಿ ಕಾರ್ತಿಕ್ ಮಹೇಶ್ ಹೊರಹೊಮ್ಮಿದ್ದು, ಡ್ರೋನ್ ಪ್ರತಾಪ್‌ ರನ್ನರ್‌ ಅಪ್‌ ಸ್ಥಾನ ಪಡೆದುಕೊಂಡಿದ್ದಾರೆ. ಕಾರ್ತಿಕ್​ ಗೆಲುವಿನ ಹಿಂದೆ ಅವರ ಸಹೋದರಿ ಪಾತ್ರ ತುಂಬಾ ಮುಖ್ಯವಾಗಿದೆ ಎಂದು ಟ್ರೋಲ್​ ಪೇಜ್​ಗಳು ವೈರಲ್​ ಮಾಡುತ್ತಿದ್ದವು. ಈ ಕುರಿತಾಗಿ ಕಾರ್ತಿಕ್​ ಮಾತನಾಡಿ ಸ್ಪಷ್ಟನೆ ನೀಡಿದ್ದಾರೆ.

ಕಾರ್ತಿಕ್ ಮಹೇಶ್ ಬಹುಮಾನವಾಗಿ 50 ಲಕ್ಷ ರೂಪಾಯಿ, ಹೊಸ ಬ್ರಿಜ್ಜಾ ಕಾರು ಮತ್ತು ಬೌನ್ಸ್‌ ಎಲೆಟ್ರಿಕ್‌ ವಾಹವನ್ನು ಗಿಫ್ಟ್‌ ಆಗಿ ಪಡೆದುಕೊಂಡಿದ್ದಾರೆ. ತಾಯಿಗೋಸ್ಕರ ಮನೆ ಕಟ್ಟಿಸಬೇಕು, ಸ್ವಂತ ಮನೆ ಮಾಡಬೇಕು ಅಂತ ಹೇಳಿಕೊಂಡಿದ್ದಾರೆ.

ಬಿಗ್​ಬಾಸ್​ ಕಾರ್ತಿಕ್​​ ಅವರಿಗೆ ತಂಗಿ ಜತೆಗೆ ಲೈವ್ ವಿಡಿಯೋ ಕಾಲ್‌ ಮೂಲಕ ಕಾರ್ತಿಕ್‌ ಮಾತುಕತೆ ನಡೆಸುವ ಅವಕಾಶ ಮಾಡಿಕೊಟ್ಟಿದ್ದರು. ಪುಟಾಣಿ ಮಗುವನ್ನೂ ಕಾರ್ತಿಕ್‌ ಕಣ್ತುಂಬಿಕೊಂಡಿದ್ದರು. ಈ ಎಪಿಸೋಡ್​​ ಪ್ರಸಾರವಾಗುತ್ತಿದ್ದಂತೆ ಕಾರ್ತಿಕ್​ ಅವರ ಮೇಲೆ ಇರುವ ಅಭಿಪ್ರಾಯವೇ ವೀಕ್ಷಕರಿಗೆ ಬದಲಾಗಿತ್ತು. ಬ್ಯಾಗ್ರೌಂಡ್‌ನ ನೋಡಿ ಹಳ್ಳಿ ಮನೆ, ಬಡವರ ಮನೆ ಇದ್ದಂತೆ ಕಾಣುತ್ತಿತ್ತು. ಕಾರ್ತಿಕ್​ ಅವರ ಮನೆ ಪರಿಸ್ಥಿತಿ ಹಾಗೂ ಅವರ ತಂಗಿ ನೋಡಿದ ವೀಕ್ಷಕರ ಮನಸ್ಸು ಕರಗಿತ್ತು ಅನ್ಸುತ್ತೆ. ಕಾರ್ತಿಕ್​​ ಅವರಿಗೆ ವೋಟ್​​ ಮಾಡುವ ಮೂಲಕವಾಗಿ ಅವರ ಗೆಲುವಿಗೆ ಕಾರಣರಾದ್ರು ಎನ್ನುವ ಸುದ್ದಿ ಕೂಡಾ ಸೋಶಿಯಲ್​ ಮೀಡಿಯಾದಲ್ಲಿ ವೈರಲ್​ ಆಗಿತ್ತು. ಈ ಕುರಿತಾಗಿ ಕಾರ್ತಿಕ್​ ಅವರು ಮಾತನಾಡಿದ್ದಾರೆ.

ಸಂದರ್ಶನವೊಂದರಲ್ಲಿ ಮಾತನಾಡಿದ ಕಾರ್ತಿಕ್​​, '9 ವರ್ಷ ಜರ್ನಿಯಲ್ಲಿ ಜನರ ಮನಸ್ಸಿನಲ್ಲಿ ಸ್ಥಾನ ಪಡೆಯಲು ತುಂಬಾ ಕಷ್ಟ ಪಟ್ಟಿದ್ದೀನಿ. ತಂಗಿ ವಿಡಿಯೋ ಕಾಲ್ ಮಾಡಿದ ಫೋಟೋ ಮತ್ತು ನನ್ನ ಫೋಟೋ ಹಾಕಿ ಅನೇಕರು ಟ್ರೋಲ್ ಮಾಡುತ್ತಿದ್ದಾರೆ. ಅವರಿಗೆ ನಾನು ಹೇಳಿವುದು ಇಷ್ಟೆ...ಊರಿನಲ್ಲಿ ಇರುವ ನನ್ನ ಮಾಮ ಅವರ ಮನೆ ಅದು, ಅದು ನನ್ನ ಮನೆ ಕೂಡ ಎಂದಿದ್ದಾರೆ.

ಬೆಂಗಳೂರಿನಲ್ಲಿ ನಾನು ಇರುವುದು ಬಾಡಿ ಮನೆ,ಸ್ವಂತ ಮನೆ ಅಲ್ಲ. ಬಿಗ್ ಬಾಸ್ ಮನೆಯಲ್ಲಿದ್ದ ಕಾರಣ ಮೂರು ತಿಂಗಳು ಬಾಡಿಗೆ ಕಟ್ಟಿಲ್ಲ ಪಾಪ ಓನರ್ ಸುಮ್ಮನಿದ್ದಾರೆ' ನನ್ನ ಜರ್ನಿಯಲ್ಲಿ ತುಂಬಾ ಕಷ್ಟ ಪಟ್ಟಿದ್ದೀನಿ ಹೀಗಾಗಿ ಬಡವರ ಮಕ್ಕಳು ಬೆಳೆಯಬೇಕು. ಬಡವರ ಮಕ್ಕಳ ಗೆಲ್ಲಬೇಕು, ಗೆದ್ದು ನಿಂತುಕೊಳ್ಳಬೇಕು. Dont give up ಅನ್ನೋ ಧೈರ್ಯ ಇರಬೇಕು. ಇವತ್ತಲ್ಲ ಅಂತ ನಾಳೆ ನಾಳಿದ್ದು ಸಾಧನೆ ಮಾಡೇ ಮಾಡುತ್ತೀವಿ ಎಂದಿದ್ದಾರೆ.

ಕಾರ್ತಿಕ್‌ ಮಹೇಶ್ ಮೂಲತಃ ಚಾಮರಾಜ ನಗರದವರು. ಸಿನಿಮಾ ಕ್ಷೇತ್ರದಲ್ಲಿ ತೊಡಗಿಸಿಕೊಂಡಿರುವ ಕಾರ್ತಿಕ್‌ ಸದ್ಯ ಇರುವುದು ಬೆಂಗಳೂರಿನಲ್ಲಿ. ಕಿರುತೆರೆಯಲ್ಲೂ ದೊಡ್ಡ ಪ್ರಾಜೆಕ್ಟ್‌ಗಳಲ್ಲಿ ಕಾಣಿಸಿಕೊಂಡಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net