

ಬೆಂಗಳೂರು: ಕನ್ನಡದ ಬಿಗ್ಬಾಸ್ ಸೀಸನ್ 8 ಫೆಬ್ರವರಿ 28ರಂದು ಆರಂಭವಾಗಲಿದೆ. ಏಳೂ ಸೀಸನ್ಗಳಲ್ಲಿ ವೀಕ್ಷಕರ ಮನಸ್ಸನ್ನು ಗೆದ್ದಿರುವ ಬಿಗ್ಬಾಸ್ ಬಗ್ಗೆ ಈ ಬಾರಿಯೂ ಎಂದಿನಂತೆ ಜನರು ಹೆಚ್ಚಿನ ನಿರೀಕ್ಷೆಯನ್ನೇ ಇಟ್ಟುಕೊಂಡಿದ್ದಾರೆ. ಯಾರ್ಯಾರು ಮನೆಗೆ ಎಂಟ್ರಿ ತೆಗೆದುಕೊಳ್ಳವಲಿದ್ದಾರೆ ಎನ್ನುವವರ ಬಗ್ಗೆ ಭಾರೀ ಕುತೂಹಲವಿದೆ.
ಸದ್ಯಕ್ಕೆ ಕರ್ನಾಟಕದ ಕೆಲವು ಸೆಲೆಬ್ರಿಗಳ ಹೆಸರು ಬಿಗ್ಬಾಸ್ ಸ್ಪಧಿಗಳ ಪಟ್ಟಿಯಲ್ಲಿ ಕೇಳಿಬಂದಿದೆ. ಕಾಮಿಡಿ ಕಿಲಾಡಿಯಲ್ಲಿ ಎಲ್ಲರನ್ನು ನಕ್ಕು ನಲಿಸಿದ್ದ ನಯನಾ, ಸರಿಗಮಪಾ ಖ್ಯಾತಿಯ ಹನುಮಂತಣ್ಣ ರಿಯಾಲಿಟಿ ಸ್ಟಾರ್ಗಳಾಗಿ ಮನೆಯೊಳಗೆ ಹೋಗುವ ಸಾಧ್ಯತೆಯಿದೆ. ಇನ್ನು ಧಾರಾವಾಗಿ ಸ್ಟಾರ್ಗಳಾದ ಬ್ರಹ್ಮಗಂಟು ಖ್ಯಾತಿಯ ಗೀತಾ ಭಾರತಿ ಭಟ್, ಮೂರುಗಂಟು ಧಾರಾವಾಹಿಯ ಸಮೀಕ್ಷಾ, ಅಗ್ನಿಸಾಕ್ಷಿಯ ಸುಕೃತಾ, ಅಮೃತವರ್ಷಿಣಿಯ ರಜಿನಿ ಹೆಸರು ಕೂಡ ಸಂಭಾವ್ಯ ಪಟ್ಟಿಯಲ್ಲಿದೆ. ಉಳಿದಂತೆ ಸ್ಯಾಂಡಲ್ವುಡ್ನ ತುಪ್ಪದ ಬೆಡಗಿ ರಾಗಿಣಿ ದ್ವಿವೇದಿ, ಲೈಫ್ 360 ಸಿನಿಮಾ ಖ್ಯಾತಿಯ ಅನುಶಾ ರಂಗನಾಥ್ (ಅಶಿಕಾ ರಂಗನಾಥ್ ಸಹೋದರಿ), ಕಿರಣ್ ಶ್ರೀನಿವಾಸ್, ಸುನಿಲ್ ರಾವ್, ತಬಲಾ ನಾಣಿ, ತರಂಗ ವಿಶ್ವ ಹಾಗೂ ನಿರ್ದೇಶಕ ರವಿ ಶ್ರೀವತ್ಸ ಹೆಸರೂ ಪಟ್ಟಿಯಲ್ಲಿದೆ. ಅವರ ಜತೆಯಲ್ಲಿ ರಘುವೈನ್ ಸ್ಟಾರ್ ಮೂಲಕ ಫೇಸ್ಬುಕ್ನಲ್ಲಿ ಅಪಾರ ಅಭಿಮಾನಿಗಳನ್ನು ಪಡೆದುಕೊಂಡಿರುವ ರಘು ಗೌಡ ಹಾಗೂ ಲವ್ ಗುರು ಖ್ಯಾತಿಯ ರಾಜೇಶ್ ಹೆಸರೂ ಸೇರಿಕೊಂಡಿದೆ.
ಈ ಎಲ್ಲ ಕುತೂಹಲಕ್ಕೆ ಭಾನುವಾರ ಸಂಜೆ 6 ಗಂಟೆಗೆ ನಟ ಸುದೀಪ್ ತೆರೆ ಎಳೆಯಲಿದ್ದಾರೆ. ಬಿಗ್ ಬಾಸ್ ಮನೆಗೆ ಹೋಗುವ ಸ್ಪರ್ಧಿಗಳನ್ನು ಈಗಾಗಲೇ ಕ್ವಾರಂಟೈನ್ ಮಾಡಿಡಲಾಗಿದೆ ಎನ್ನುವ ಸುದ್ದಿಯೂ ಹರಿದಾಡಿದೆ. (ಏಜೆನ್ಸೀಸ್)
ಕ್ಷಣಕ್ಷಣದ ಮಾಹಿತಿಗಾಗಿ ವಿಜಯವಾಣಿ ಫೇಸ್ಬುಕ್ ಪೇಜ್ ಲೈಕ್ ಮಾಡಿ