

ಆಸ್ಟಿನ್: ಈ ಬಾರಿ ಪ್ರಕೃತಿ ವಿಸ್ಮಯಗಳು ತುಸು ಹೆಚ್ಚೆನಿಸುವಷ್ಟೇ ನಡೆಯುತ್ತಿದೆ. ಅಮೆರಿಕದ ಟೆಕ್ಸಾಸ್ನಲ್ಲಿ ಭಾರಿ ಪ್ರಮಾಣದ ಹಿಮಪಾತವಾಗಿದೆ. ವಿಚಿತ್ರವೆಂದರೆ ಅಲ್ಲಿ ಈಗ ಬೀಳುತ್ತಿರುವ ಹಿಮ ಬೆಂಕಿಗೆ ಕರಗುವುದಿಲ್ಲವಂತೆ ಬದಲಾಗಿ ಹೊತ್ತಿ ಉರಿಯುತ್ತದೆಯಂತೆ.
ಹೌದು! ಇಂತದ್ದೊಂದು ವಿಚಿತ್ರ ರೀತಿಯ ಹಿಮ ಬೀಳುತ್ತಿರುವುದಾಗಿ ಟೆಕ್ಸಾಸ್ ಜನರು ಹೇಳುತ್ತಿದ್ದಾರೆ. ಬೆಂಕಿಗೆ ಕರಗಬೇಕಾದ ಹಿಮ ಕರಗದೆ ಇರುವ ವಿಡಿಯೋವನ್ನೂ ಮಾಡಿ ಹರಿಬಿಟ್ಟಿದ್ದಾರೆ. ಅನೇಕರು ಹಿಮವನ್ನು ಬೆಂಕಿಗಿಟ್ಟು ನೋಡಿದ್ದಾರಂತೆ. ಆಗೆಲ್ಲ ಹಿಮ ಹೊತ್ತಿ ಉರಿದಿರುವ ಘಟನೆಯೂ ನಡೆದಿದೆಯಂತೆ. ಈ ರೀತಿ ಹಿಮ ಸುಟ್ಟ ನಂತರ ಕೆಟ್ಟ ವಾಸನೆ ಬರುತ್ತದೆಯಂದೂ ಅವರು ಹೇಳಿಕೊಂಡಿದ್ದಾರೆ.
ಬೆಂಕಿಗೆ ಹಿಮ ಏನಾಗುತ್ತಿದೆ ಎನ್ನುವುದನ್ನು ಟಿಕ್ಟಾಕ್ನಲ್ಲಿ ವಿಡಿಯೋ ಮಾಡಿ ಬಿಡುಗಡೆ ಮಾಡಲಾಗಿದೆ. ಆ ವಿಡಿಯೋವನ್ನು ಟ್ವಿಟ್ಟರ್ನಲ್ಲಿ ಹಂಚಿಕೊಳ್ಳಲಾಗಿದ್ದು, ಆ ವಿಡಿಯೋವನ್ನು 30 ಲಕ್ಷಕ್ಕೂ ಹೆಚ್ಚು ಮಂದಿ ವೀಕ್ಷಿಸಿದ್ದಾರೆ. (ಏಜೆನ್ಸೀಸ್)
ಕ್ಷಣಕ್ಷಣದ ಮಾಹಿತಿಗಾಗಿ ವಿಜಯವಾಣಿ ಫೇಸ್ಬುಕ್ ಪೇಜ್ ಲೈಕ್ ಮಾಡಿ