ಗೊತ್ತಿದ್ರೂ ಮಾಡೋದಕ್ಕೆ... Bigg Boss ಸ್ಫರ್ಧಿಗಳಿಗೆ ಕಿಚ್ಚನ ಖಡಕ್​ ಕ್ಲಾಸ್​

Kichcha Sudeepa
Published on

ಬೆಂಗಳೂರು: ಕನ್ನಡ ಕಿರುತೆರಯ ಜನಪ್ರಿಯ ರಿಯಾಲಿಟಿ ಶೋ ಬಿಗ್​ಬಾಸ್​ 11ನೇ ಆವೃತ್ತಿ (Bigg Boss 11th Season) ಆರಂಭವಾಗಿ ಎರಡು ವಾರಗಳಾಗಿದ್ದು, ಸ್ವರ್ಗ-ನರಕ ಥೀಮ್ (Hell-Heaven Theme)​, ಸ್ಫರ್ಧಿಗಳ (Contestants) ನಡುವಿನ ಕಿತ್ತಾಟ, ತರ್ಲೆ, ತಮಾಷೆಗಳಿಂದಲೇ ಹೆಚ್ಚು ಸದ್ದು ಮಾಡುತ್ತಿದೆ. 11ನೇ ಆವೃತ್ತಿಯ (11th Seasonj) ಎರಡನೇ ಪಂಚಾಯಿತಿ ಶನಿವಾರ (ಅಕ್ಟೋಬರ್​ 12) ನಡೆಯಲಿದ್ದು, ಕಳೆದ ವಾರದಂತೆ ಈ ವಾರವೂ ನಿರೂಪಕ (Anchor) ಕಿಚ್ಚ ಸುದೀಪ್​ (Kichcha Sudeep) ಸ್ಫರ್ಧಿಗಳಿಗೆ ಕ್ಲಾಸ್​ ತೆಗೆದುಕೊಂಡಿದ್ದಾರೆ. ಇದರ ಪ್ರೋಮೋ (Promo) ಸಖತ್​ ವೈರಲ್​ ಆಗಿದೆ.

ನಗು ನಗುತ್ತಲೇ ವಾರ್ನಿಂಗ್ ಕೊಟ್ರು ಕಿಚ್ಚ ಎಂಬ ಶೀರ್ಷಿಕೆಯಡಿ (Caption) ಬಿಡುಗಡೆಯಾಗಿರುವ ಪ್ರೋಮೋದಲ್ಲಿ ಸ್ಫರ್ಧಿಗಳಿಗೆ ಸಖತ್​ ಕ್ಲಾಸ್​ ತೆಗೆದುಕೊಂಡಿರುವ ನಿರೂಪಕ (Anchor) ಕಿಚ್ಚ ಸುದೀಪ್ (Kichcha Sudeep)​ ಈ ವಾರ ನಡೆದ ಒಟ್ಟಾರೆ ಬೆಳವಣಿಗೆ ಬಗ್ಗೆ ಮಾತನಾಡಿದ್ದಾರೆ. ಇದರಲ್ಲಿ ಪ್ರಮುಖವಾಗಿ ಸ್ಫರ್ಧಿ ಮಾನಸ ಸೇರಿದಂತೆ ಕೆಲವರು ಮಾಡಿದ ತಪ್ಪನ್ನು ಸುದೀಪ್​ ಉಲ್ಲೇಖಿಸಿದ್ದಾರೆ ಎಂದು ವರದಿಯಾಗಿದೆ.

ಕಳೆದ ವಾರ ಬಿಗ್​ಬಾಸ್​ಗೆ (Bigg Boss) ಸವಾಲು ಹಾಕುವ ಮೂಲಕ ಸುದ್ದಿಯಾಗಿದ್ದ ಜಗದೀಶ್​ಗೆ (jagadish) ಸಖತ್​ ಕ್ಲಾಸ್​ ತೆಗೆದುಕೊಂಡಿದ್ದ ನಿರೂಪಕ ಸುದೀಪ್​ (Sudeep) ಕಳೆದ ಬಾರಿಯಂತೆಯೇ ಕೆಲ ಸ್ಪರ್ಧಿಗಳ ಮೇಲೆ ಅಬ್ಬರಿಸಿದ್ದಾರೆ. ಅಲ್ಲದೇ ನನ್ನ ಪ್ರೀತಿಗೆ ಭಾಗಿ ಆಗಿ, ಸವಾಲು ಹಾಕಬೇಡಿ ಎಂದು ಹೇಳುವ ಮೂಲಕ ಸ್ಫರ್ಧಿಗಳಿಗೆ ಎಚ್ಚರಿಕೆಯನ್ನು (Warning) ನೀಡಿದ್ದಾರೆ. ಅಂತಿಮವಾಗಿ ಸಂಚಿಕೆ ಪ್ರಸಾರವಾದ ನಂತರ ಈ ಬಗ್ಗೆ ತಿಳಿಯಲಿದೆ.

ಭರಪೂರ ಮನರಂಜನೆಯ ಜೊತೆಗೆ ವಿವಾದಗಳನ್ನು ಹುಟ್ಟು ಹಾಕುವ ಬಿಗ್​ಬಾಸ್ (Bigg Boss)​, ಕಿರುತೆರೆ ಲೋಕದ ಜನಪ್ರಿಯ ಶೋಗಳಲ್ಲಿ ಒಂದೆಂದರೆ ತಪ್ಪಾಗಲಾರದು. ಪ್ರೀತಿ, ಸ್ನೇಹ ಸಂಬಂಧಗಳಿಗೆ ಈ ಶೋ ಬೆಸುಗೆಯಾಗುತ್ತದೆ. ಇಲ್ಲಿ ನಗು, ಕಣ್ಣೀರು, ಕೋಪ, ಮುನಿಸು ಮತ್ತು ಮನಸ್ತಾಪಗಳ ಮಿಶ್ರಣವು ಇದೆ. ಟಾಸ್ಕ್​ ನೀಡುವುದರ ಜೊತೆಗೆ ಜೀವನದ ಪಾಠವನ್ನು ಹೇಳಲಾಗುತ್ತದೆ. ಎಲ್ಲದಕ್ಕಿಂತ ಹೆಚ್ಚಾಗಿ ವಾರದ ಕೊನೆಯಲ್ಲಿ ನಟ ಕಿಚ್ಚ ಸುದೀಪ್​ ಸರಿ-ತಪ್ಪುಗಳ ತಿದ್ದುವಿಕೆ ಶೋಗೆ ಹೊಸ ಆಯಾಮವನ್ನು ತಂದುಕೊಡುತ್ತದೆ. ಈ ಎಲ್ಲ ಕಾರಣಗಳಿಂದ ಈ ಶೋ ವಿಶೇಷ ಎನಿಸಿಕೊಂಡಿದ್ದು, ಕಿರುತೆರೆ ಲೋಕದಲ್ಲಿ ಸಿಕ್ಕಾಪಟ್ಟೆ ಪಾಪ್ಯೂಲರ್​ ಆಗಿದೆ ಎಂದರೆ ತಪ್ಪಾಗಲಾರದು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net