

ಬೆಂಗಳೂರು: ಬಿಗ್‌ಬಾಸ್ ಸೀಸನ್ 10ರ ವಿನ್ನರ್ ಪಟ್ಟ ಅಲಂಕರಿಸಿದ ಕಾರ್ತಿಕ್ ಮಹೇಶ್ ಅವರು ನಟ ಸುದೀಪ್ ಅವರ ಮೇಲಿನ ಗೌರವ ಹಾಗೂ ಪ್ರೀತಿಯನ್ನು ಕವಿತೆ ಮೂಲಕ ವ್ಯಕ್ತಪಡಿಸಿದ್ದಾರೆ. ಇನ್‌ಸ್ಟಾದಲ್ಲಿ ಸುದೀಪ್ ಬಗ್ಗೆ ಸಣ್ಣ ಕವಿತೆಯನ್ನು ಪೋಸ್ಟ್ ಮಾಡಿದ್ದಾರೆ.
ಬಿಗ್‌ಬಾಸ್ ಕಾರ್ತಿಕ್ ಕಿಚ್ಚನ ಬರೆದ ಕವಿತೆ:
ನಾ ಕಂಡ ಕಿಚ್ಚ ಆಕಾಶದ ಎತ್ತರಕ್ಕೆ ಏರಿದರು ಭೂಮಿಯಲ್ಲೇ ನಿಂತಿರುವ ಅಭಿನಯ ಚಕ್ರವರ್ತಿ, ಪ್ರೀತಿಯ ಅಭಿಮಾನಿಗಳ ಅಭಿಮಾನಿ ತಪ್ಪಿದ್ದರೂ ಸರಿ ಇದ್ದರೂ ಸೂಕ್ಷ್ಮವಾಗಿ ಮಾತಿನಲ್ಲೇ ತಿಳಿ ಹೇಳುವ ನನ್ನ ಪ್ರೀತಿಯ ಕಿಚ್ಚ ಕಣ್ಣಲ್ಲೇ ಕಿಚ್ಚು ಹಚ್ಚುವ ಕಿಚ್ಚ ಸ್ಟೈಲಲ್ಲಿ ಹುಚ್ಚು ಹಿಡಿಸುವ ಕಿಚ್ಚ ನಿಮ್ಮ ಕಿವಿ ಮಾತು ಇಲ್ಲದೆ ನನ್ನ ಬಿಗ್ ಬಾಸ್ ಜೀವನ ಅಸಾಧ್ಯವೇ ಸರಿ
ಬಿಗ್‌ಬಾಸ್ ಕಾರ್ಯಕ್ರಮ ಶುರುವಾದ ದಿನದಿಂದಲೂ ಸೀಸನ್ 10ರ ವರೆಗೂ ನಟ ಸುದೀಪ್ ಅವರೆ ನಿರೂಪಣೆ ಮಾಡಿಕೊಂಡು ಬಂದಿದ್ದಾರೆ. ಕಿಚ್ಚನ ನಿರೂಪಣೆಗೆ ಬಿಗ್‌ಬಾಸ್ ವೀಕ್ಷಕರು, ಬಿಗ್‌ಬಾಸ್ ತಂಡ ಹಾಗೂ ಬಿಗ್‌ಬಾಸ್ ಗೆ ಇಲ್ಲಿಯವರೆಗೂ ಸ್ಪರ್ಧಿಸಿದ ಕಂಟೆಸ್ಟಂಟ್ಗಳು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
ಬಿಗ್‌ಬಾಸ್ ಸ್ಪರ್ಧಿಗಳು ಒಂಟಿಮನೆಯೊಳಗೆ ಇದ್ದಾಗ ಅವರ ಸುಖಃ ಹಾಗೂ ದುಖಃದಲ್ಲಿ ಜತೆಯಾಗಿ ನಿಲ್ಲುವುದೆ ಕಿಚ್ಚ. ಸುದೀಪ್ ಅವರ ಮಾತುಗಳು ಸ್ಪರ್ಧಿಗಳಿಗೆ ಹೊಸ ಚೈತನ್ಯ ನೀಡುತ್ತದೆ. ಸಾಕಷ್ಟು ಸ್ಪರ್ಧಿಗಳು ಕೂಡಾ ಈ ಕುರಿತಾಗಿ ಬಿಗ್‌ಬಾಸ್ ವೇದಿಕೆ ಮೇಲೆ ವ್ಯಕ್ತಪಡಿಸಿರುವ ಹಲವು ಉದಾಹರಣೆಗಳು ಇವೆ. ಹೀಗೆ ಇದೀಗ ಬಿಗ್‌ಬಾಸ್ ವಿನ್ನರ್ ಕಾರ್ತೀಕ್ ಮಹೇಶ್ ಅವರು ಇನ್ಸ್ಟಗ್ರಾಮ್ನಲ್ಲಿ ಕಿಚ್ಚನ ಕುರಿತಾಗಿ ಒಂದು ಕವನ ಬರೆದಿದ್ದಾರೆ. ಸೋಶಿಯಲ್ ಮೀಡಿಯಾದಲ್ಲಿ ಈ ಕುರಿತಾಗಿ ಮೆಚ್ಚುಗೆ ವ್ಯಕ್ತವಾಗುತ್ತಿದೆ.
ಬಿಗ್‌ಬಾಸ್ ಕನ್ನಡ ಸೀಸನ್ 10ರಲ್ಲಿ ಗೆಲುವು ಪಡೆದ ಕಾರ್ತಿಕ್ ಮಹೇಶ್ ಇಂದು (ಫೆಬ್ರವರಿ 5) ಅಪ್ಪು ಸಮಾಧಿಗೆ ಇಂದು ಭೇಟಿ ನೀಡಿದ್ದು, ದಿ. ಪುನೀತ್ ರಾಜ್‌ಕುಮಾರ್ ಮತ್ತು ಡಾ. ರಾಜ್‌ಕುಮಾರ್ ಪುಣ್ಯಭೂಮಿಯಲ್ಲಿ ಕೈಮುಗಿದು ಆಶೀರ್ವಾದ ಪಡೆದಿದ್ದಾರೆ.