ಕಿರುತೆರೆ ರಿಯಾಲಿಟಿ ಶೋಗಳಲ್ಲಿ ‘ಬಿಗ್​ ಬಾಸ್​’ ಕಾರ್ಯಕ್ರಮಕ್ಕೆ ಹೆಚ್ಚು ಜನಪ್ರಿಯತೆ, ಒಟ್ಟಿಗೆ ಅನೌನ್ಸ್​ ಆಯ್ತು ಕನ್ನಡ-ಹಿಂದಿ ಬಿಗ್​ ಬಾಸ್​

sk
Published on

ಬಿಗ್‌ ಬಾಸ್‌ ಸೀಸನ್‌ 10ರ ಎರಡನೇ ಪ್ರೋಮೋ ಬಿಡುಗಡೆ ಆಗಿದೆ. ಕಿಚ್ಚ ಸುದೀಪ್‌ ಬ್ಲಾಕ್‌ ಸೂಟ್‌ನಲ್ಲಿ ಮಿಂಚುಹರಿಸಿದ್ದಾರೆ. ಬನ್ನಿ ಎಲ್ಲರೂ ಸೇರಿ ಹಬ್ಬ ಮಾಡೋಣ ಎಂಬ ಸುಳಿವನ್ನೂ ನೀಡಿದ್ದಾರೆ.


ಕೆಲವು ಬದಲಾವಣೆಗಳನ್ನು ಮಾಡಿಕೊಂಡು ಪ್ರತಿ ಸೀಸನ್​ನಲ್ಲೂ ಬಿಗ್​ ಬಾಸ್​ ಶೋ ನಡೆಸಲಾಗುತ್ತದೆ. ಹಿಂದಿ ಬಿಗ್​ ಬಾಸ್​ 17ನೇ ಸೀಸನ್​ನಲ್ಲೂ ಒಂದಷ್ಟು ಹೊಸ ಅಂಶಗಳನ್ನು ಪರಿಚಯಿಸಲಾಗುತ್ತಿದೆ. ಈ ಬಗ್ಗೆ ಸಲ್ಮಾನ್​ ಖಾನ್​ ಅವರು ಪ್ರೋಮೋ ಮೂಲಕ ಮಾಹಿತಿ ನೀಡಿದ್ದಾರೆ. ಕಿಚ್ಚ ಸುದೀಪ್​ ಕಾಣಿಸಿಕೊಂಡಿರುವ ಕನ್ನಡದ ಪ್ರೋಮೋ ಕೂಡ ಗಮನ ಸೆಳೆಯುತ್ತಿದೆ.


‘ಬಿಗ್​ ಬಾಸ್​’ ಕಾರ್ಯಕ್ರಮಕ್ಕೆ ಕಿರುತೆರೆ ರಿಯಾಲಿಟಿ ಶೋಗಳಲ್ಲಿ ಹೆಚ್ಚು ಜನಪ್ರಿಯತೆ ಇದೆ. ಕನ್ನಡ ಮತ್ತು ಹಿಂದಿಯಲ್ಲಿ 2024ರ ಹೊಸ ಸೀಸನ್​ ಒಟ್ಟಿಗೆ ಪ್ರಾರಂಭವಾಗಲಿದ್ದು, ರಡೂ ಭಾಷೆಯ ಹೊಸ ಸೀಸನ್​ನ ಪ್ರೋಮೋಗಳು ಏಕಕಾಲಕ್ಕೆ ಬಿಡುಗಡೆ ಆಗಿವೆ. ಒಂದೆಡೆ ಕಿಚ್ಚ ಸುದೀಪ್​, ಇನ್ನೊಂದೆಡೆ ಸಲ್ಮಾನ್​ ಖಾನ್ ಅವರು ಮಿಂಚಿದ್ದಾರೆ. ಈ ಪ್ರೋಮೋಗಳ ಮೂಲಕ ಕುತೂಹಲ ಕೆರಳಿಸುವ ಪ್ರಯತ್ನ ಮಾಡಲಾಗಿದೆ. ಕನ್ನಡದಲ್ಲಿ 10ನೇ ಸೀಸನ್​ ಹಾಗೂ ಹಿಂದಿಯಲ್ಲಿ 17ನೇ ಸೀಸನ್ ಕೆಲವೇ ದಿನದಲ್ಲಿ ಪ್ರಾರಂಭವಾಗಲಿದೆ.


‘ಇದುವರೆಗೂ ನೀವು ಕೇವಲ ಬಿಗ್​ ಬಾಸ್​ ಕಣ್ಣು ನೋಡಿದ್ದೀರಿ. ಈಗ ಬಿಗ್​ ಬಾಸ್​ನ ಮೂರು ಅವತಾರ ಕಾಣುತ್ತದೆ. ಹೃದಯ, ಬುದ್ಧಿ ಮತ್ತು ಬಲ’ ಎಂದು ಪ್ರೋಮೋದಲ್ಲಿ ಸಲ್ಮಾನ್​ ಖಾನ್​ ಅವರು ಡೈಲಾಗ್​ ಹೊಡೆದಿದ್ದಾರೆ.


ಉತ್ಸಾಹದಿಂದ ನಿರೂಪಣೆ ಮಾಡಲು ಸಲ್ಮಾನ್​ ಖಾನ್​ ಅವರು ಸಜ್ಜಾಗಿದ್ದಾರೆ. ‘ಕಲರ್ಸ್​’ ಟಿವಿ ಮತ್ತು ‘ಜಿಯೋ ಸಿನಿಮಾ’ ಒಟಿಟಿ ಮೂಲಕ ಈ ಕಾರ್ಯಕ್ರಮ ಪ್ರಸಾರ ಆಗಲಿದೆ. ಕನ್ನಡದಲ್ಲಿ ಬಿಗ್​ ಬಾಸ್​ 10ನೇ ಸೀಸನ್​ ಆಗಿರುವುದರಿಂದ ಬಹಳ ಅದ್ದೂರಿಯಾಗಿ ಮಾಡುವ ಆಲೋಚನೆ ಇದೆ. ಈಗಾಗಲೇ ಬಿಡುಗಡೆ ಆಗಿರುವ ಪ್ರೋಮೋದಲ್ಲೂ ಆ ಅದ್ದೂರಿತನ ಕಾಣಿಸಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net