

ಬೆಂಗಳೂರು: ಖಾಸಗಿವಾಹಿನಿಯಲ್ಲಿ ಪ್ರಸಾರವಾಗುತ್ತಿರುವ ಬಿಗ್‌ಬಾಸ್ ಕಾರ್ಯಕ್ರಮವು ಜನಮನ್ನಣೆ ಪಡೆದುಕೊಳ್ಳುತ್ತಿದೆ. ಬಿಗ್‌ಬಾಸ್ ಮನೆಯ ಸ್ಪರ್ಧಿಗಳಿಗೆ ರಾಕ್ಷಸರು, ಗಂಧರ್ವರು ಎಂದು ಎರಡು ಟೀಮ್ ಮಾಡಿ ಟಾಸ್ಕ್ವೊಂದನ್ನು ನೀಡಿದ್ದರು. ರಾಕ್ಷಸರ ತಂಡದ ಕೌರ್ಯದಿಂದಾಗಿ ಸಂಗೀತಾ ಮತ್ತು ಡ್ರೋನ್ ಪ್ರತಾಪ್ ಆಸ್ಪತ್ರೆ ಸೇರಿದ್ದಾರೆ. ರಾಕ್ಷಸರ ತಂಡದ ಹಿಂಸಾತ್ಮಕ ವರ್ತನೆ ಬಗ್ಗೆ ಸಂಗೀತಾ ಸಹೋದರ ಸಂತೋಷ್ ಬಹಿರಂಗವಾಗಿ ತಮ್ಮ ಬೇಸರ, ಅಸಮಾಧಾನ ಹೊರಹಾಕಿದ್ದಾರೆ.
’ಕಿಚ್ಚ ಸುದೀಪ್ ಸರ್.. ನೀವು ನಮಗೆ ಭರವಸೆ ನೀಡಿದ್ರಿ.. “ಬಿಗ್ ಬಾಸ್ ಮನೆ ಸುರಕ್ಷತೆಯ ಸ್ವರ್ಗ. ಏನೂ ಆಗುವುದಿಲ್ಲ ಎಂದು. ಆದರೆ, ಪ್ರಸ್ತುತ ಸನ್ನಿವೇಶವು ಈ ನಂಬಿಕೆಯನ್ನು ಸಂಪೂರ್ಣವಾಗಿ ನಾಶಪಡಿಸುತ್ತದೆ. ಒಂದು ಕಾಲದಲ್ಲಿ ಕೌಟುಂಬಿಕ ಕಾರ್ಯಕ್ರಮವಾಗಿದ್ದ ಈ ಶೋ ಈಗ ಅನಿಯಂತ್ರಿತ ಆಕ್ರಮಣ ಮತ್ತು ಹಿಂಸೆಯ ಅಖಾಡವಾಗಿ ಮಾರ್ಪಟ್ಟಿರುವುದನ್ನು ನೋಡಿದರೆ ಹೃದಯ ಛಿದ್ರವಾಗುತ್ತದೆ. ಕುಟುಂಬಗಳು ಗಾಬರಿಗೊಂಡಿವೆ. ಪರದೆಯ ಮೇಲೆ ಇಂತಹ ಆಕ್ರಮಣಕಾರಿ, ಹಿಂಸೆಯ ನಡವಳಿಕೆಯನ್ನು ನಾವು ಒಟ್ಟಿಗೆ ಕುಳಿತು ಹೇಗೆ ವೀಕ್ಷಿಸಬಹುದೇ?’
" ನಾವ್ ಸುದೀಪ್ ಸರ್ ಬಗ್ಗೆ ಸರಿ ಮಾಡುವವರೆಗೂ ನಾವು ಯಾಕೆ ಕಾಯಬೇಕು. ಬಿಗ್‌ಬಾಸ್ ಇರೋದು ಜನರ ತಪ್ಪುಗಳನ್ನು ತಕ್ಷಣ ಅವರಿಗೆ ಅರ್ಥ ಮಾಡಿಸಲು ಅಲ್ಲವೇ? ಎಂದು ಬರೆದುಕೊಂಡಿದ್ದಾರೆ. ಸದ್ಯ ಈ ಪೋಸ್ಟ್ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದೆ. ವೀಕ್ಷಕರು ಕೂಡ ಈ ಬಗ್ಗೆ ಬೇಸರ ಹೊರ ಹಾಕುತ್ತಿದ್ದಾರೆ.
ಕುರ್ಚಿಯಲ್ಲಿ ಕೂತಿದ್ದ ಸಂಗೀತಾ ಹಾಗೂ ಡ್ರೋನ್ ಪ್ರತಾಪ್ರನ್ನು ಎಬ್ಬಿಸಲು ಸೋಲು, ಡೆಟಾಲ್, ಖಾರದ ಪುಡಿ ಇನ್ನಿತರೆ ಬೆರೆಸಿದ ನೀರನ್ನು ಸತತವಾಗಿ ಮತ್ತು ಬಲವಾಗಿ ಎಸೆದರು. ಇದರಿಂದ ಸಂಗೀತಾ ಹಾಗೂ ಡ್ರೋನ್ ಪ್ರತಾಪ್ ಮುಖ, ಕಣ್ಣಿಗೆ ಹಾನಿಯಾಗಿ ಅವರನ್ನು ಆಸ್ಪತ್ರೆಗೆ ಕರೆದೊಯ್ಯಲಾಯ್ತು. ಶನಿವಾರ ಸುದೀಪ್ ವಾರದ ಪಂಚಾಯ್ತಿ ನಡೆಸಲಿದ್ದಾರೆ. ಟಾಸ್ಕ್ಗಳಲ್ಲಿ ತಪ್ಪು ಮಾಡಿದವರಿಗೆ ಇಂದು ಶಿಕ್ಷೆಯಾಗುವ ನಿರೀಕ್ಷೆ ಇದೆ.