

ಮುಂಬೈ: ಹಿಂದಿ ಬಿಗ್ಬಾಸ್ನ ಮಾಜಿ ಸ್ಪರ್ಧಿಯೊಬ್ಬರು ಮಹಾರಾಷ್ಟ್ರದ ನಾಸಿಕ್ನಲ್ಲಿ ರೇವ್ ಪಾರ್ಟಿಯಲ್ಲಿ ಪಾಲ್ಗೊಂಡಿದ್ದು ಇದೀಗ ಪೊಲೀಸರ ವಶದಲ್ಲಿದ್ದಾರೆ. ಪಾರ್ಟಿಯಲ್ಲಿದ್ದ 12 ಯುವತಿಯರು ಸೇರಿ ಒಟ್ಟು 22 ಮಂದಿಯನ್ನು ಪೊಲೀಸರು ಬಂಧಿಸಿದ್ದಾರೆ.
ನಾಸಿಕ್ ಜಿಲ್ಲೆಯ ಇಗತ್ಪುರಿ ಪಟ್ಟಣದ ಹೊರ ವಲಯದಲ್ಲಿರುವ ಎರಡು ಖಾಸಗಿ ವಿಲ್ಲಾಗಳಲ್ಲಿ ರೇವ್ ಪಾರ್ಟಿ ನಡೆಸಲಾಗುತ್ತಿತ್ತು. ಖಚಿತ ಮಾಹಿತಿಯನ್ನು ಆಧರಿಸಿ ಪೊಲೀಸರು ದಾಳಿ ನಡೆದಿದ್ದಾರೆ. ಬಂಧಿತ ಯುವತಿಯರಲ್ಲಿ ನಾಲ್ಕು ಮಂದಿ ಸಿನಿಮಾ ರಂಗದೊಂದಿಗೆ ಸಂಪರ್ಕ ಇರುವುದರು ಎನ್ನಲಾಗಿದೆ. ಓರ್ವ ಯುವತಿ ಈ ಹಿಂದೆ ಬಿಗ್ ಬಾಸ್ ರಿಯಾಲಿಟಿ ಶೋನಲ್ಲಿ ಭಾಗವಹಿಸಿ ಬಂದಿದ್ದವರು ಎನ್ನುವ ಮಾಹಿತಿಯಿದೆ.
ಪಾರ್ಟಿಯಲ್ಲಿ 12 ಯುವತಿಯರು ಮತ್ತು 10 ಪುರುಷರು ಭಾಗವಗಿಸಿದ್ದರು. ಅವರೆಲ್ಲರೂ ಡ್ರಗ್ಸ್ ಸೇವಿಸಿದ್ದರು ಎನ್ನಲಾಗಿದೆ. ಪ್ರತಿಯೊಬ್ಬರನ್ನು ವೈದ್ಯಕೀಯ ಪರೀಕ್ಷೆಗೆ ಒಳಪಡಿಸಲಾಗಿದೆ. ಪಾರ್ಟಿಯನ್ನು ಆಯೋಜನೆ ಮಾಡಿದ್ದವರು ಮಾತ್ರ ನಾಪತ್ತೆಯಾಗಿದ್ದಾರೆ. ಅವರ ಪತ್ತೆಗಾಗಿ ಕಾರ್ಯಾಚರಣೆ ನಡೆಸಲಾಗುತ್ತಿದೆ. ಪಾರ್ಟಿ ಸ್ಥಳದಿಂದ ಅಪಾರ ಪ್ರಮಾಣ ಡ್ರಗ್ಸ್ ಹಾಗೂ ಹುಕ್ಕಾ ವಶಪಡಿಸಿಕೊಳ್ಳಲಾಗಿದೆ. (ಏಜೆನ್ಸೀಸ್)