chaitra kundapura : ಬಿಗ್‌ ಬಾಸ್‌ ಮನೆಯಿಂದ ಹೊರಬಂದ ಚೈತ್ರಾ ಕುಂದಾಪುರ ಕೋರ್ಟ್‌ಗೆ ಹಾಜರ್‌

chaitra kundapura
Published on

ಬೆಂಗಳೂರು:  ಬಿಗ್​ಬಾಸ್​​ ಸೀಸನ್​ 11 ಸ್ಪರ್ಧಿಯಲ್ಲಿ ಒಬ್ಬರಾಗಿದ್ದ ಚೈತ್ರಾ ಕುಂದಾಪುರ ( chaitra kundapura ) ಅವರು  ದೊಡ್ಡ ಮನೆಯಿಂದ ಹೊರಬಂದು, ವಂಚನೆಯ ಆರೋಪದ ಅಡಿಯಲ್ಲಿ ಈ ಹಿಂದೆ ದಾಖಲಾಗಿದ್ದ ಪ್ರಕರಣ ಹಿನ್ನೆಲೆ  ಕೋರ್ಟ್‌ಗೆ ಹಾಜರಾಗಿದ್ದಾರೆ.

MLA ಸೀಟ್‌ ಕೋಡಿಸೋದಾಗಿ 5 ಕೋಟಿ ವಂಚನೆ ಮಾಡಿದ ಆರೋಪದ ಅಡಿಯಲ್ಲಿ ಬಿಗ್‌ಬಾಸ್‌ ಸ್ಫರ್ಧಿ ಚೈತ್ರಾ ಕುಂದಾಪುರ ಅವರಿಗೆ ಕೋರ್ಟ್‌ ನೋಟಿಸ್‌ ಜಾರಿ ಮಾಡಿತ್ತು. ಇದೀಗ ಈ ಹಿನ್ನಲೆಯಲ್ಲಿ ಚೈತ್ರ 1ನೇ ACMM ಕೋರ್ಟ್‌ಗೆ ಹಾಜರಾಗಿದ್ದಾರೆ.

ಬಿಗ್‌ಬಾಸ್‌ ಮನೆಯಿಂದ ಕೋರ್ಟ್‌, ಕೇಸ್​​ ಎಂದು ಸ್ಪರ್ಧಿಗಳು ಹೊರಗೆ ಬರುತ್ತಿರುವುದು ಹೊಸ  ಸುದ್ದಿ ಏನು ಅಲ್ಲ. ಈ ಹಿಂದೆ  ಬಿಗ್‌ ಬಾಸ್‌ 10 ಸೀಸನ್‌ನಲ್ಲಿ ವರ್ತೂರ್‌ ಸಂತೋಷ್​​ ಕೂಡ ಮನೆಯಿಂದ ಹೊರಬಂದು ಕೋರ್ಟ್‌ಗೆ ಹಾಜರ್‌ ಆಗಿದ್ದರು. ಹುಲಿ ಉಗುರಿನ ಪೆಂಡೆಂಟ್‌ ಧರಿಸಿದ್ದ ಕಾರಣಕ್ಕಾಗಿ ನೋಟಿಸ್‌ ಜಾರಿ ಮಾಡಲಾಗಿದ್ದು, ಸಂತೋಷ್​ ಅವರು ಕೋರ್ಟ್‌ನಲ್ಲಿ ವಿಚಾರಣೆ ಎದುರಿಸಿದ್ದರು.

ಇದೀಗ ಚೈತ್ರ ಕುಂದಾಪುರ ವಿಚಾರದಲ್ಲಿಯೂ ಹಾಗೆಯೇ ಆಗಿದೆ. ಚೈತ್ರ ಕುಂದಾಪುರ ಅವರು ಬಿಗ್‌ ಬಾಸ್‌ ಮನೆಯಿಂದ ಹೊರಬಂದು ಕೋರ್ಟ್‌ಗೆ ಹಾಜರ್‌ ಆಗಿದ್ದಾರೆ. ಕೋರ್ಟ್​​ ಏನು ಹೇಳುತ್ತದೆ? ಮತ್ತೆ ಬಿಗ್​ಬಾಸ್​​ ಮನೆಗೆ ಚೈತ್ರಾ ಹೋಗ್ತಾರಾ? ಎಂದು ಕಾದು ನೋಡ ಬೇಕಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net