'ಬಿಗ್ ಬಾಸ್' ಮತ್ತೊಂದು ಪ್ರೋಮೋ ಬಿಡುಗಡೆ; ಕಾಗೆ ಕಥೆ ಹೇಳಿದ ಕಿಚ್ಚ| bigg boss

sudeep
Published on

BIGG BOSS : ಕನ್ನಡ ಬಿಗ್​ಬಾಸ್​ ಕಾರ್ಯಕ್ರಮದ 12ನೇ ಸೀಸನ್​ ಯಾವಾಗ ಎಂದು ಅಭಿಮಾನಿಗಳು ಕಾತುರದಿಂದ ಕಾಯುತ್ತಿದ್ದ ವೇಳೆಗೆ ಆ.31ರಂದು ಬಿಗ್​ಬಾಸ್​ ಲೋಗೋ ಬಿಡುಗಡೆ ಮಾಡಿದ್ದರು. ನಂತರ  ರಂದು ಪ್ರೋಮೋವನ್ನು ಸಹ ಬಿಡುಗಡೆ ಮಾಡಲಾಗಿತ್ತು. ಇದೀಗ ಬಿಗ್​ ಬಾಸ್​ನ ಮತ್ತೊಂದು ಪ್ರೋಮೋ ರಿಲೀಸ್ ಆಗಿದೆ.

ಕಿಚ್ಚ ಸುದೀಪ್ ವಿಶೇಷವಾದ ಗೆಟಪ್​​ನಲ್ಲಿ ಬಿಗ್ ಬಾಸ್ ಪ್ರೋಮೋದಲ್ಲಿ ಕಾಣಿಸಿಕೊಂಡಿದ್ದಾರೆ. ಈ ಸಲ ನೀವಿದ್ದೀರಾ ನೀವಿದ್ದೀರಾ ಅಂತಾ ಕೇಳ್ತಾ ಇದ್ದೋರು, ಈಗ ನೆಕ್ಸ್ಟ್ ಏನು ನೆಕ್ಸ್ಟ್ ಏನು ಅಂತಾ ಕೇಳ್ತಾ ಇದ್ದೀರಾ. ಒಂದು ಕತೆ ಹೇಳ್ತೀನಿ ಎಂದು ಕಿಚ್ಚ ಸುದೀಪ್ ಪ್ರೋಮೋದಲ್ಲಿ ಹೆಚ್ಚಿನ ಕುತೂಹಲ ಮೂಡಿಸಿದ್ದಾರೆ. ಶಾಲೆಯಲ್ಲಿ ಕೇಳಿರುವ ಕಾಗೆ, ಹಾಗೂ ನರಿ ಕತೆಯನ್ನು ಹೇಳುವ ಮೂಲಕ ಕಿಚ್ಚ ಕಾಣಿಸಿಕೊಂಡಿದ್ದು, ಆ ಕತೆಯನ್ನೇ ಬದಲಾಯಿಸುವ ಹಾಗೆ ಡೈಲಾಗ್​ ಹೊಡೆದಿದ್ದಾರೆ.  ಇಲ್ಲಿವರೆಗೂ ನಾವು ಬಿಗ್ ಬಾಸ್ 11 ಸೀಸನ್ ನೋಡಿದ್ದೇವೆ. ಎಲ್ಲವೂ ಗೊತ್ತು ಅನ್ನೋರಿಗೆ ಈ ಸಲ ಟ್ವಿಸ್ಟ್‌ಗಳ ಮೇಲೆ ಟ್ವಿಸ್ಟ್‌ ಎಂದು ಕಿಚ್ಚ ಸಖತ್​ ಡೈಲಾಗ್​ ಹೊಡೆದಿದ್ದಾರೆ.

ಈಗಾಗಲೇ ಯಶಸ್ವಿ 11 ಆವೃತ್ತಿಯನ್ನು ಯಶಸ್ವಿಯಾಗಿ ಮುಗಿಸಿರುವ ಬಿಗ್​ಬಾಸ್ ಶೋ 12ನೇ ಆವೃತ್ತಿಗೆ ಭರ್ಜರಿ ತಯಾರಿ ಮಾಡಿಕೊಂಡಿದೆ. ಭರಪೂರ ಮನರಂಜನೆಯ ಜೊತೆಗೆ ವಿವಾದಗಳನ್ನು ಹುಟ್ಟು ಹಾಕುವ ಬಿಗ್​ಬಾಸ್​, ಕಿರುತೆರೆ ಲೋಕದ ಜನಪ್ರಿಯ ಶೋಗಳಲ್ಲಿ ಒಂದೆಂದರೆ ತಪ್ಪಾಗಲಾರದು. ಪ್ರೀತಿ, ಸ್ನೇಹ ಸಂಬಂಧಗಳಿಗೆ ಈ ಶೋ ಬೆಸುಗೆಯಾಗುತ್ತದೆ. ಇಲ್ಲಿ ನಗು, ಕಣ್ಣೀರು, ಕೋಪ, ಮುನಿಸು ಮತ್ತು ಮನಸ್ತಾಪಗಳ ಮಿಶ್ರಣವು ಇದೆ. ಟಾಸ್ಕ್​ ನೀಡುವುದರ ಜೊತೆಗೆ ಜೀವನದ ಪಾಠವನ್ನು ಹೇಳಲಾಗುತ್ತದೆ. ಎಲ್ಲದಕ್ಕಿಂತ ಹೆಚ್ಚಾಗಿ ವಾರದ ಕೊನೆಯಲ್ಲಿ ಬಾದ್​ಶಾ ಕಿಚ್ಚ ಸುದೀಪರ ಪಂಚಾಯಿತಿಯಲ್ಲಿ ಸರಿ-ತಪ್ಪುಗಳ ತಿದ್ದುವಿಕೆ ಶೋಗೆ ಹೊಸ ಆಯಾಮವನ್ನು ತಂದುಕೊಡುತ್ತದೆ.

(ಏಜೆನ್ಸೀಸ್)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net