

ಮುಂಬೈ: ಬಿಗ್ ಬಾಸ್ ಹಿಂದಿ ಸೀಸನ್ 16ರ ಖ್ಯಾತಿಯ ಅಬ್ದು ರೋಜಿಕ್ ಇದೀಗ ದಾಂಪತ್ಯ ಜೀವನಕ್ಕೆ ಕಾಲಿಡಲು ಸಜ್ಜಾಗಿದ್ದಾರೆ. ಕೋಟ್ಯಧಿಪತಿಯೂ ಆಗಿರುವ ತಜಿಕಿಸ್ತಾನ್ ದೇಶದ 20 ವರ್ಷ್ಗಳ ಅಬ್ದು 19 ವರ್ಷದ ಯುವತಿಯನ್ನು ಇವರು ವಿವಾಹವಾಗಲಿದ್ದು, ಈ ಬಗ್ಗೆ ಖುದ್ದು ಸೋಷಿಯಲ್ ಮೀಡಿಯಾದಲ್ಲಿ ಅವರು ಶೇರ್ ಮಾಡಿಕೊಂಡಿದ್ದಾರೆ.
ನನ್ನನ್ನು ಗೌರವಿಸುವ, ಪ್ರೀತಿಸುವ ಹುಡುಗಿ ಸಿಗುತ್ತಾಳೆ ಎಂದು ನಾನು ಊಹಿಸಿರಲಿಲ್ಲ. ನಾನು ಎಷ್ಟು ಸಂತೋಷವಾಗಿದ್ದೇನೆ ಎಂಬುದನ್ನು ಪದಗಳಲ್ಲಿ ವ್ಯಕ್ತಪಡಿಸಲು ಸಾಧ್ಯವಿಲ್ಲ ಎಂದಿದ್ದಾರೆ ಅಬ್ದು. ಡೈಮಂಡ್ ರಿಂಗ್ ಹಿಡಿದುಕೊಂಡಿರುವ ಫೋಟೋವನ್ನು ಶೇರ್ ಮಾಡಿ ಇದಕ್ಕೆ ಅವರು ಅಡಿಬರಹ ಕೂಡ ನೀಡಿದ್ದಾರೆ.
'ಗೆಳೆಯರೇ.. ನಿಮಗೆಲ್ಲ ಗೊತ್ತಿರುವಂತೆ ನನಗೆ 20 ವರ್ಷ. ಪ್ರೀತಿಯಲ್ಲಿ ಬೀಳಬೇಕು, ನಾನು ಪ್ರೀತಿಸುವ ಹುಡುಗಿ ನನ್ನನ್ನು ಗೌರವಿಸಬೇಕು, ಅತಿಯಾಗಿ ಪ್ರೀತಿ ಮಾಡಬೇಕು ಎನ್ನುವ ಆಸೆ ಇತ್ತು. ಆಗ ಈ ಹುಡುಗಿ ಸಿಕ್ಕಳು. ನಾನು ಇದನ್ನು ಊಹಿಸಿಯೂ ಇರಲಿಲ್ಲ. ಈ ಖುಷಿಯನ್ನು ಹೇಗೆ ಹೇಳಬೇಕು ಎನ್ನುವುದೇ ತಿಳಿಯುತ್ತಿಲ್ಲ. ನಾನು ಸಖತ್ ಎಗ್ಸೈಟ್ ಆಗಿದ್ದೇನೆ. ನಿಮ್ಮೆಲ್ಲರಿಗೂ ಒಂದು ಸರ್ಪ್ರೈಸ್ ಇದೆ' ಎಂದಿರುವ ಅಬ್ದು ರಿಂಗ್ ಓಪನ್ ಮಾಡಿ ತೋರಿಸಿದ್ದಾರೆ. ಹುಡುಗಿ ಹೆಸರು ಅಮೀನಾ ಎನ್ನಲಾಗಿದೆ.
ಇದೀಗ ಅಬ್ದು ರೋಜಿಕ್ ಮದುವೆ ಆಗುತ್ತಿರುವ ವಿಚಾರ ಹೊರ ಬಿದ್ದಿದ್ದು, ಅಬ್ದು ಕೈ ಹಿಡಿಯುವ ಲಕ್ಕಿ ಹುಡುಗಿ ಯಾರು ಎನ್ನುವ ಕುತೂಹಲ ಎಲ್ಲರಿಗಿದೆ. ನೋಡಲು ಚಿಕ್ಕ ಹುಡುಗನಂತೆ ಕಾಣುವ 20 ವರ್ಷದ ಅಬ್ದು ಅವರ ಮದುವೆಯ ಸುದ್ದಿ ಕೇಳುತ್ತಿದ್ದಂತೆಯೇ ಅಭಿಮಾನಿಗಳು ಮಿಶ್ರ ಪ್ರತಿಕ್ರಿಯೆ ನೀಡುತ್ತಿದ್ದಾರೆ.