

ಮುಂಬೈ: ಬಿಗ್ ಬಾಸ್ ಸೀಸನ್ 13 ಸೂಪರ್ ಹಿಟ್ ಆಗಿತ್ತು ಎಂದು ಪ್ರತ್ಯೇಕವಾಗಿ ಹೇಳಬೇಕಾಗಿಲ್ಲ. ಇದುವರೆಗಿನ ಎಲ್ಲಾ ಹಿಂದಿ ಸೀಸನ್ಗಳಲ್ಲಿ ಇದು ಅತ್ಯುತ್ತಮ ಎಂದು ಹೇಳಬಹುದು. ಈ ಸೀಸನ್ನಲ್ಲಿ ರಿಯಾಜ್ ಮತ್ತು ಹಿಮಾಂಶಿ ಖುರಾನಾ ಕೂಡ ಜನಪ್ರಿಯರಾದರು. ಬಿಗ್ಬಾಸ್ ನಂತರ ಇಬ್ಬರೂ ಸುಮಾರು 3 ವರ್ಷಗಳ ಕಾಲ ಪ್ರೀತಿಸುತ್ತಿದ್ದರು. ಆದರೆ ಈಗ ತಾವು ಬೇರ್ಪಡುತ್ತಿರುವುದಾಗಿ ಸಾಮಾಜಿಕ ಜಾಲತಾಣದಲ್ಲಿ ಪ್ರಕಟಿಸಿದ್ದಾರೆ.
ಹಿಮಾಂಶಿ ಪಂಜಾಬಿ ಸಿಖ್ ಕುಟುಂಬಕ್ಕೆ ಸೇರಿದವರಾಗಿದ್ದಾರೆ. ಅಸೀಮ್ ಜಮ್ಮು ಪ್ರದೇಶದ ಮುಸ್ಲಿಂ ಕುಟುಂಬಕ್ಕೆ ಸೇರಿದವರು. ಇಬ್ಬರೂ ಬಿಗ್ ಬಾಸ್ ಸೀಸನ್ 13 ರಲ್ಲಿ ಭೇಟಿಯಾದರು ಮತ್ತು ನಂತರ ಇವರ ಪರಿಚಯ ಪ್ರೀತಿಗೆ ತಿರುಗಿತ್ತು. ಆ ನಂತರ ಇಬ್ಬರೂ ತಮ್ಮ ಪ್ರೇಮ ಸಂಬಂಧವನ್ನು ಮುಂದುವರೆಸಿದ್ದರು. ಹಿಮಾಂಶಿ ತಮ್ಮ ಇನ್ಸ್ಟಾಗ್ರಾಮ್ ಸ್ಟೋರಿಯಲ್ಲಿ ಬ್ರೇಕಪ್ ಬಗ್ಗೆ ಪ್ರಸ್ತಾಪಿಸಿದ್ದಾರೆ.
ಹಿಂದಿ ಬಿಗ್ಬಾಸ್ ಮನೆಯಲ್ಲಿ ಹಿಮಾನ್ಶಿ ಖುರಾನಾ ಮತ್ತು ಆಸಿಮ್ ರಿಯಾಜ್ ಲವ್ ಮಾಡಿದ್ದರು. ಬಿಗ್ಬಾಸ್ 13ರ ಮನೆಯಲ್ಲಿ ಪರಿಚಯವಾಗಿ ಲವ್ ಮಾಡಿದ್ದರು. ಆಮೇಲೆ ನಾಲ್ಕು ವರ್ಷ ಒಟ್ಟಿಗೇ ಇದ್ದರು. ಎಲ್ಲಾ ಕಡೆ ಸುತ್ತಾಡಿದ್ದರು. ಇದೀಗ, ಮದುವೆಯ ವಿಷಯಕ್ಕೆ ಬಂದಾಗ ಇಬ್ಬರಿಗೂ ತಮ್ಮ ಧರ್ಮದ ಅರಿವಾದಂತಿದೆ. ತಮ್ಮದು ಬೇರೆ ಬೇರೆ ಧರ್ಮ ಆಗಿರುವ ಕಾರಣ, ಒಟ್ಟಿಗೆ ಇರುವುದು ಸಾಧ್ಯವಿಲ್ಲ ಎಂದಿರುವ ಜೋಡಿ, 4 ವರ್ಷದ ಸಂಬಂಧವನ್ನು ಕೊನೆಗೊಳಿಸಿದ್ದಾರೆ.
“ಹೌದು.. ನಾವು ಈಗ ಒಟ್ಟಿಗೆ ಇಲ್ಲ. ನಾವು ಒಟ್ಟಿಗೆ ಕಳೆದ ಸಮಯ ಅದ್ಭುತವಾಗಿದೆ. ಆದರೆ ಈಗ ನಮ್ಮ ಸಂಬಂಧ ಮುಗಿದಿದೆ. ನಮ್ಮ ಸಂಬಂಧದ ಪ್ರಯಾಣ ಅದ್ಭುತವಾಗಿದೆ. ನಮ್ಮ ಜೀವನದಲ್ಲಿ ಮುಂದೆ ಸಾಗುತ್ತಿದೆ. ನಮ್ಮ ಧರ್ಮಗಳಿಗೆ ಸರಿಯಾದ ಗೌರವದೊಂದಿಗೆ, ನಾವು ನಮ್ಮ ಎರಡು ವಿಭಿನ್ನ ಧಾರ್ಮಿಕ ನಂಬಿಕೆಗಳಿಗಾಗಿ ನಮ್ಮ ಪ್ರೀತಿಯನ್ನು ತ್ಯಾಗ ಮಾಡುತ್ತಿದ್ದೇವೆ" ಎಂದು ಹಿಮಾಂಶಿ ಟ್ವೀಟ್ ಮಾಡಿದ್ದಾರೆ. ಪ್ರತಿಯೊಬ್ಬರೂ ತಮ್ಮ ಖಾಸಗಿತನವನ್ನು ಗೌರವಿಸುವಂತೆ ಕೇಳಿಕೊಳ್ಳಲಾಗಿದೆ.
'ನಾವು ಸಾಕಷ್ಟು ಪ್ರಯತ್ನಿಸಿದ್ದೇವೆ. ಆದರೆ ನಮ್ಮ ಪ್ರೀತಿಗೆ ಪರಿಹಾರ ಸಿಗಲಿಲ್ಲ. ನಾವು ಇನ್ನೂ ಒಬ್ಬರನ್ನೊಬ್ಬರು ಪ್ರೀತಿಸುತ್ತೇವೆ. ಆದರೆ ಒಟ್ಟಿಗೆ ಬಾಳುವ ಅದೃಷ್ಟ ಕೂಡಿ ಬರಲಿಲ್ಲ. ನಮ್ಮ ನಡುವೆ ಯಾವುದೇ ದ್ವೇಷವಿಲ್ಲ. ಪ್ರೀತಿ ಮಾತ್ರ ಇದೆ. ಇದನ್ನು ಪ್ರಬುದ್ಧ ನಿರ್ಧಾರ ಎಂದು ಕರೆಯಲಾಗುತ್ತದೆ ಎಂದು ನಾನು ಭಾವಿಸುತ್ತೇನೆ' ಎಂದು ಇನ್ಸ್ಟಾಗ್ರಾಮ್ ಸ್ಟೋರಿಯಲ್ಲಿ ಪೋಸ್ಟ್ ಮಾಡಿದ್ದಾರೆ. ಸದ್ಯ ಆಕೆ ಶೇರ್ ಮಾಡಿರುವ ಟಿಪ್ಪಣಿ ವಿವಾದಕ್ಕೀಡಾಗಿದ್ದು, ನೆಟ್ಟಿಗರು ವಿಭಿನ್ನವಾಗಿ ಕಾಮೆಂಟ್ ಮಾಡುತ್ತಿದ್ದಾರೆ.