ಛಲವಾದಿ ಬಾಯಲ್ಲಿ ಭೂತೋಪದೇಶ; ಯು.ಬಿ.ವೆಂಟಕೇಶ್ ಲೇವಡಿ

chalavadi narayanaswamy
Published on

ಬೆಂಗಳೂರು: ಖರ್ಗೆ ಕುಟುಂಬದ ಟ್ರಸ್ಟ್‌ಗೆ ಕೆಐಎಡಿಬಿ ಜಮೀನು ಹಂಚಿಕೆಯನ್ನು ತೀವ್ರವಾಗಿ ವಿರೋಧಿಸಿರುವ ವಿಧಾನ ಪರಿಷತ್ ಪ್ರತಿಪಕ್ಷ ನಾಯಕ ಛಲವಾದಿ ನಾರಾಯಣಸ್ವಾಮಿ ವಿರುದ್ಧ ವಿಧಾನ ಪರಿಷತ್ ಸದಸ್ಯ ಯು.ಬಿ.ವೆಂಕಟೇಶ್ ಹರಿಹಾಯ್ದಿದ್ದು, ಛಲವಾದಿ ಬಾಯಲ್ಲಿ ಭೂತೋಪದೇಶ ಬಂದಂತಾಗಿದೆ ಎಂದು ಲೇವಡಿ ಮಾಡಿದ್ದರು.
ರಾಹುಲ್ ಖರ್ಗೆ ನೇತೃತ್ವದ ಟ್ರಸ್ಟ್ ಸಾರ್ವಜನಿಕ ಉದ್ದೇಶ ಹೊಂದಿದೆ. ಆದರೆ, ಪ್ರತಿಪಕ್ಷ ನಾಯಕರಿಗೆ ಅದೇಕೋ ಏನೋ ಈ ಟ್ರಸ್ಟ್‌ಗೆ ಭೂಮಿ ಮಂಜೂರು ಮಾಡಿರುವುದು ಇಷ್ಟವಾಗಿಲ್ಲ. ಬಹುಶಃ ಇದಕ್ಕೆ ಬುದ್ಧನ ಮೇಲಿನ ಕೋಪವೋ ಅಥವಾ ಖರ್ಗೆ ಕುಟುಂಬದ ಮೇಲಿನ ಸಿಟ್ಟೋ ತಿಳಿಯುತ್ತಿಲ್ಲ. ಅಂದಹಾಗೆ ನಾರಾಯಣಸ್ವಾಮಿಯವರು ಕೂಡಾ ಕೆಐಎಡಿಬಿ ಮೂಲಕ ಮೈಸೂರಿನಲ್ಲಿ ಜಮೀನನ್ನು 2006ರಲ್ಲಿ ಮಂಜೂರು ಮಾಡಿಸಿಕೊಂಡಿರುವುದು ಯಾವ ಘನಂದಾರಿ ಉದ್ದೇಶಕ್ಕೆ ಎಂಬುದು ನಿಗೂಢವೇ ಎಂದು ಕೆಣಕಿಸಿದ್ದಾರೆ.
ನಾರಾಯಣಸ್ವಾಮಿಯವರು ಸರ್ಕಾರಕ್ಕೆ ಹೇಳಿದ್ದು ಸಾಫ್ಟ್‌ವೇರ್ ಘಟಕ ಸ್ಥಾಪನೆ ಮಾಡುವ ಸಲುವಾಗಿ ಜಮೀನು ಬೇಕು ಎಂದು. ಆದರೆ ಈಗ ಸ್ಥಾಪನೆ ಮಾಡಿರುವುದು ಶೆಡ್. ತಾವೇ ಫಲಾನುಭವಿಯಾಗಿ ಇನ್ನೊಬ್ಬ ಫಲಾನುಭವಿಯ ಎಲೆಯ ಮೇಲೆ ಕಾಣದಿರುವ ನೊಣವನ್ನು ಹೆಗ್ಗಣ ಎಂದು ಗುರುತಿಸುವುದು ಜಾಣ್ಮೆ ಎನ್ನುವುದು ಮೂರ್ಖತನವಷ್ಟೇ. ಇದು ಉದ್ಧಟತನದ ಪರಮಾವಧಿ ಎಂದು ಹೇಳಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net