

ರೋಣ: ತಾಲೂಕಿನ ಸವಡಿ ಗ್ರಾಮದಲ್ಲಿ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ, ಗ್ರಾಮ ಪಂಚಾಯಿತಿ ಸಹಯೋಗದಲ್ಲಿ
10 ಲಕ್ಷ ರೂ. ಅನುದಾನದಲ್ಲಿ ಶುದ್ಧ ಗಂಗಾ ನೀರಿನ ಘಟಕದ ಕಾಮಗಾರಿಗೆ ಶನಿವಾರ ಭೂಮಿಪೂಜೆ ನೆರವೇರಿಸಲಾಯಿತು. ಈ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದ ಧಗ್ರಾ ಯೋಜನಾಧಿಕಾರಿ ಮಹಾಬಲೇಶ್ವರ ಪಟಗಾರ, ಶ್ರೀ ಕ್ಷೇತ್ರ ಧರ್ಮಸ್ಥಳದ ಸಂಘವು ರಾಜ್ಯದ ಎಲ್ಲ ಗ್ರಾಮಗಳಿಗೆ ಸೇವೆ ಒದಗಿಸುವ ಕಾರ್ಯ ಮಾಡುತ್ತಿದೆ. ಇಂದು ಮನುಷ್ಯ ಆರೋಗ್ಯದಿಂದ ಇರಬೇಕಾದಲ್ಲಿ ಶುದ್ಧ ನೀರು ಬಹಳ ಮುಖ್ಯ. ಜೀವ ಜಲ ಉಳಿಸುವುದು ಎಲ್ಲ ಕರ್ತವ್ಯ. ಈ ಮೂಲಕ ಸಮಾಜದ ಆರೋಗ್ಯ ಕಾಪಾಡಲು ಸಾಧ್ಯವಿದೆ ಎಂದರು. ಗ್ರಾಮ ಪಂಚಾಯಿತಿ ಅಧ್ಯಕ್ಷೆ ಅನ್ನಪೂರ್ಣಾ ಪರೆಡ್ಡಿ ಅಧ್ಯಕ್ಷತೆ ವಹಿಸಿದ್ದರು. ಪಿಡಿಒ ಬಸವರಾಜ ಶೆಟ್ಟಿಗೇರಿ, ಮಲ್ಲನಗೌಡ ಪರೆಡ್ಡಿ, ಮೇಘರಾಜ ಬಾವಿ, ಸುಭಾಷ್ ಕುಂಬಾರ, ವಿಜಯಲಕ್ಷ್ಮೀ ಕಂಬ್ಳಿ, ಡಾ. ಅರವಿಂದ, ಉಪಸ್ಥಿತರಿದ್ದರು. ವಲಯ ಮೇಲ್ವಿಚಾರಕ ಶ್ರೀ ಖಾದರ್‌ಸಾಬ್ ಬಡಿಗೇರ ಸ್ವಾಗತಿಸಿ, ಶುದ್ಧ ಗಂಗಾ ಮೇಲ್ವಿಚಾರಕರಾದ ಬಾಲರಾಜ ವಂದಿಸಿ, ಸೇವಾ ಪ್ರತಿನಿಧಿ ಮಂಜು ನಿರೂಪಿಸಿದರು.