

ಕಡೂರು: ಪಟ್ಟಣದ ಛತ್ರದ ಬೀದಿಯಲ್ಲಿನ ಕೆಂಚಾಂಬಿಕಾ ದೇವಾಲಯ ಸಮೀಪ ಶ್ರೀದುರ್ಗಾ ಸೇವಾ ಸಮಿತಿಯಿಂದ ಶರನ್ನವರಾತ್ರಿ ಮಹೋತ್ಸವದ ಅಂಗವಾಗಿ ಅ.15ರಿಂದ 24ರವರೆಗೆ ಪ್ರತಿಷ್ಟಾಪನೆಗೊಳ್ಳುವ ಶ್ರೀ ದುರ್ಗಾದೇವಿ ಆಸ್ಥಾನ ಮಂಟಪ ನಿರ್ಮಾಣದ ಕಾರ್ಯಕ್ಕೆ ಸೋಮವಾರ ಸಮಿತಿ ಪದಾಧಿಕಾರಿಗಳು ಭೂಮಿ ಪೂಜೆ ನೆರವೇರಿಸಿದರು.
ಶ್ರೀದುರ್ಗಾ ಸಮಿತಿ ಅಧ್ಯಕ್ಷ ಕೆ.ಪಿ.ವೆಂಕಟೇಶ್ ಮಾತನಾಡಿ, ಕಳೆದ 9 ವರ್ಷಗಳಿಂದ ದೇವಿ ಪ್ರತಿಷ್ಟಾಪನೆಯೊಂದಿಗೆ ಶರನ್ನವರಾತ್ರಿ ಮಹೋತ್ಸವದ ಧಾರ್ಮಿಕ ಕಾರ್ಯಕ್ರಮಗಳನ್ನು ಯಶಸ್ವಿಯಾಗಿ ನಡೆಸಿಕೊಂಡು ಬರಲಾಗುತ್ತಿದೆ. ಈ ಬಾರಿಯ ನೂತನ ಸಮಿತಿ ರಚಿಸಿಕೊಂಡು ಪಟ್ಟಣದ ನಾಗರಿಕರ ಸಹಕಾರದೊಂದಿಗೆ ದುರ್ಗಾದೇವಿ ಪ್ರತಿಷ್ಟಾಪನಾ ಮಹೋತ್ಸವವನ್ನು ಅರ್ಥಪೂರ್ಣವಾಗಿ ಆಚರಿಸಲು ತಿರ್ಮಾನಿಸಲಾಗಿದೆ. ದೇವಿಯ ಸೇವಾಕಾರ್ಯದಲ್ಲಿ ಪ್ರತಿಯೊಬ್ಬರೂ ಕೈಜೋಡಿಸಿ ಯಶಸ್ವಿಗೊಳಿಸಬೇಕು ಎಂದು ಮನವಿ ಮಾಡಿದರು.
ಭದ್ರಿಸ್ವಾಮಿ, ಪುರಸಭೆ ಸದಸ್ಯ ಯತಿರಾಜ್, ಕೆ.ಪಿ.ಶ್ರೀನಿವಾಸ್, ಸೋಮೇಶ್‌ಶಿವಮೊಗ್ಗೆ, ಕೆ.ಸಿ.ವಿಕಾಸ್, ನಾಗೇಂದ್ರ ಅಗ್ನಿ, ರಾಜುಕರಿಬಡ್ಡೆ, ಕೆ.ಎಂ. ನೂತನ್, ಸಿದ್ದೇಶ್, ಚಂದ್ರು ಮತ್ತಿತರಿದ್ದರು.