ಸರಕು ರೈಲು ಅಪಘಾತ ಪ್ರಕರಣ: ಅವಶೇಷಗಳಡಿ ಸಿಲುಕ್ಕಿದ್ದ ಮೂವರ ಸಾವು

train 1 mar 20
Published on

ಭೋಪಾಲ್​: ಮಧ್ಯಪ್ರದೇಶದ ಸಿಂಗ್ರೌಲಿ ಜಿಲ್ಲೆಯಲ್ಲಿ ಭಾನುವಾರ ಎರಡು ಕಲ್ಲಿದ್ದಲು ತುಂಬಿದ ಎರಡು ಸರಕು ರೈಲುಗಳ ಪರಸ್ವರ ಡಿಕ್ಕಿ ಹೊಡೆದ ಪರಿಣಾಮ ಲೊಕೊ ಪೈಲಟ್​ ಹಾಗೂ ಆತನ ಸಹಾಯಕ ಸೇರಿ ಮೂವರು ಮೃತಪಟ್ಟಿದ್ದಾರೆ.

ವಿದ್ಯುತ್​ ಉತ್ಪಾದಕ ಕಂಪನಿಗೆ ಸರಕು ಸಾಗಿಸುವ ರೈಲುಗಳ ನಡುವೆ ಅಪಘಾತ ಸಂಭವಿಸಿದೆ. ಭೋಪಾಲ್ ರಾಜ್ಯ ರಾಜಧಾನಿಯಿಂದ 780 ಕಿಲೋಮೀಟರ್ ದೂರದಲ್ಲಿರುವ ಸಿಂಗ್ರೌಲಿ ಜಿಲ್ಲೆಯಲ್ಲಿ ಅಪಘಾತ ಸಂಭವಿಸಿದೆ.

ಉತ್ತರ ಪ್ರದೇಶದ ಮಿರ್ಜಾಪುರ ನಿವಾಸಿ ಲೊಕೊ ಪೈಲಟ್ ರಶೀದ್ ಅಹ್ಮದ್, ಉತ್ತರ ಪ್ರದೇಶದ ರಾಬರ್ಟ್ಸ್ ಗಂಜ್ ನ ಸಹಾಯಕ ಲೊಕೊ ಪೈಲಟ್ ಮಂದೀಪ್ ಕುಮಾರ್ ಮತ್ತು ಸಿಂಗ್ರೌಲಿಯ ಪಾಯಿಂಟ್ ಮ್ಯಾನ್ ರಾಮ್​ ಲಕ್ಷಾನ್​ ಅಪಘಾತದಲ್ಲಿ ಸಾವನ್ನಪ್ಪಿದ್ದಾರೆ.

ಕಲ್ಲಿದ್ದಲು ತುಂಬಿದ ಸರಕು ರೈಲು ಉತ್ತರ ಪ್ರದೇಶದ ರಿಹಾದ್​ ನಗರದಲ್ಲಿರುವ ಎನ್‌ಟಿಪಿಸಿಗೆ ತೆರಳುತ್ತಿತ್ತು, ಮತ್ತೊಂದು ರೈಲು ವಿದ್ಯುತ್ ಉತ್ಪಾದನಾ ಕೇಂದ್ರದಲ್ಲಿ ಕಲ್ಲಿದ್ದಲು ಸುರಿದು ಹಿಂದಿರುಗುತ್ತಿತ್ತು. ಈ ವೇಳೆ ಅಪಘಾತ ಸಂಭವಿಸಿದೆ ಎಂದು ಪೊಲೀಸರು ತಿಳಿಸಿದ್ದಾರೆ. (ಏಜೆನ್ಸೀಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net