

ನವದೆಹಲಿ: ಉತ್ತರ ಪ್ರದೇಶದ ಹಾಥರಸ್‌ನಲ್ಲಿ ಇತ್ತೀಚೆಗೆ ಸತ್ಸಂಗ ನಡೆಸಿದ್ದ ಸ್ವಯಂ ಘೋಷಿತ ದೇವಮಾನವ ಭೋಲೆ ಬಾಬಾ ಹತ್ರಾಸ್ ಕಾಲ್ತುಳಿತದಿಂದ ನಾನು ತುಂಬಾ ಆಘಾತಗೊಂಡಿದ್ದೇನೆ. ಆದರೆ ಯಾರೊಬ್ಬರೂ ವಿಧಿಯನ್ನು ತಪ್ಪಿಸಲು ಸಾಧ್ಯವಿಲ್ಲ ಮತ್ತು ಎಲ್ಲರೂ ಒಂದು ದಿನ ಸಾಯಲೇಬೇಕು ಎಂದು ಹೇಳಿದ್ದಾರೆ.
'ಸತ್ಸಂಗ'ದಲ್ಲಿ ಸಂಭವಿಸಿದ ಕಾಲ್ತುಳಿತದಲ್ಲಿ 121 ಜನ ಸಾವನ್ನಪ್ಪಿದ ಹದಿನೈದು ದಿನಗಳ ನಂತರ ಪಿಟಿಐ ವಿಡಿಯೋಗೆ ತಿಳಿಸಿದ್ದಾರೆ.
ಭೋಲೆ ಬಾಬಾ ಮಾತನಾಡಿ, ಪ್ರತಿಯೊಬ್ಬರೂ ಒಂದು ದಿನ ಸಾಯಲೇಬೇಕು. ಆದರೆ ಯಾವಾಗ ಅಂತ ಖಚಿತವಾಗಿ ಗೊತ್ತಿರುವುದಿಲ್ಲ. ಜುಲೈ 2 ರಂದು ನಡೆದ ಘಟನೆಯ ನಂತರ, ನಾನು ತುಂಬಾ ಖಿನ್ನತೆಗೆ ಒಳಗಾಗಿದ್ದೆ ಮತ್ತು ವಿಚಲಿತನಾಗಿದ್ದೆ. ಆದರೆ ಏನಾಗಬೇಕು ಎಂಬುದನ್ನು ಯಾರೂ ತಪ್ಪಿಸಲು ಸಾಧ್ಯವಿಲ್ಲ. ನನ್ನ ವಕೀಲರು ಮತ್ತು ಪ್ರತ್ಯಕ್ಷದರ್ಶಿಗಳು ವಿಷಪೂರಿತ ಕ್ಯಾನ್‌ಗಳನ್ನು ತೆರೆದ ಬಗ್ಗೆ ಹೇಳಿದ್ದು ಸಂಪೂರ್ಣವಾಗಿ ನಿಜ. ಖಂಡಿತವಾಗಿಯೂ ಪಿತೂರಿ ನಡೆದಿದೆ" ಎಂದು ಬಾಬಾ ಹೇಳಿದ್ದಾರೆ.
ಎಸ್‌ಐಟಿ ಮತ್ತು ನ್ಯಾಯಾಂಗ ಆಯೋಗದ ಮೇಲೆ ನಮಗೆ ಸಂಪೂರ್ಣ ನಂಬಿಕೆಯಿದೆ. ಮೊದಲ ಮಾನವ ಮಂಗಲ್ ಮಿಲನ್ ಸದ್ಭಾವನಾ ಸಮಾಗಮ್‌ನ ಎಲ್ಲಾ ಅನುಯಾಯಿಗಳು ಕೂಡ ಸತ್ಯ ಹೊರಬರುತ್ತದೆ ಮತ್ತು ಪಿತೂರಿಯನ್ನು ಬಹಿರಂಗಪಡಿಸುತ್ತಾರೆ ಎಂದು ನಂಬಿರುವುದಾಗಿ ತಿಳಿಸಿದ್ದಾರೆ.