'ಭೋಲಾ ಶಂಕರ್' ಬಗ್ಗೆ ಟ್ರೋಲರ್ಸ್​​ ಬೇಸರ; ಕಾರಣ ಹೀಗಿದೆ

Untitled design - 2023-08-15T134222.114
Published on

ಆಂಧ್ರಪ್ರದೇಶ: ಟಾಲಿವುಡ್​ನ ಮೆಗಾಸ್ಟಾರ್ ಚಿರಂಜೀವಿ ಅಭಿನಯದ 'ಭೋಲಾ ಶಂಕರ್' ಬಾಕ್ಸ್ ಆಫೀಸ್‌ನಲ್ಲಿ ನಿರೀಕ್ಷಿಸಿದಂತೆ ಕಮಾಲ್​ ಮಾಡಿಲ್ಲ. ಸಿನಿಮಾದ ದೃಶ್ಯಗಳು ಚಿರಂಜೀವಿ ಅವರಿಗೆ ಹೇಳಿ ಮಾಡಿಸಿದ್ದಂತಿಲ್ಲ ಎಂದು ಅಭಿಮಾನಿಗಳು ವ್ಯಾಪಕ ಟೀಕೆ ಹೊರಹಾಕಿದ್ದಾರೆ. ಈ ಮಧ್ಯೆ ಟ್ರೋಲ್​, ಮೀಮ್​ರ್ಸ್​ ಚಿತ್ರದ ಕುರಿತು ತೀವ್ರ ಹತಾಶೆ ವ್ಯಕ್ತಪಡಿಸಿದ್ದಾರೆ.

ಚಿತ್ರವು ಬಿಡುಗಡೆಗೊಂಡ ಮೊದಲ ದಿನದಿಂದಲೂ ಬಾಕ್ಸ್​ ಆಫೀಸ್​​ನಲ್ಲಿ ಉತ್ತಮ ಗಳಿಕೆ ಕಂಡಿಲ್ಲ. ಚಿತ್ರಮಂದಿರಗಳತ್ತ ಸಿನಿಪ್ರೇಕ್ಷಕರ ಸಂಖ್ಯೆ ಕ್ಷಿಣಿಸುತ್ತಿದೆ. ಮೆಹರ್ ರಮೇಶ್ ನಿರ್ದೇಶಿಸಿದ ಈ ಚಿತ್ರ ಇದೀಗ ಅಭಿಮಾನಿಗಳು ಮತ್ತು ಪ್ರೇಕ್ಷಕರನ್ನು ಸೆಳೆಯುವಲ್ಲಿ ವಿಫಲವಾಗಿದೆ. ಸಿನಿಮಾದ ಇತ್ತೀಚಿನ ಬೆಳವಣಿಗೆಯನ್ನು ಕಂಡು ಮೀಮ್​ರ್ಸ್​ ಮತ್ತು ಟ್ರೋಲರ್ಸ್​​ಗಳು ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್​ ಮುಖೇನ ಬೇಸರ ವ್ಯಕ್ತಪಡಿಸಿದ್ದಾರೆ.

ನೆಟ್ಟಿಗರು ಮತ್ತು ಟ್ರೋಲರ್ಸ್​ಗಳು ಈ ಚಿತ್ರವನ್ನು ಇನ್ನೂ ಉತ್ತಮವಾಗಿ ತೆರೆ ಮೇಲೆ ತರಬಹುದಿತ್ತು. ಈ ಸಿನಿಮಾವನ್ನು ಕಳೆದ 90 ಅಥವಾ 20ರ ದಶಕದಲ್ಲೇ ರಿಲೀಸ್​ ಮಾಡಬಹುದಿತ್ತು. ಚಿರಂಜೀವಿ ಅವರಿಗೆ ಈ ಚಿತ್ರ ಹೇಳಿ ಮಾಡಿಸಿದಂತಿಲ್ಲ ಎಂದು ವ್ಯಾಪಕವಾಗಿ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ,(ಏಜೆನ್ಸೀಸ್).

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net