ಸಲ್ಮಾನ್​ ಖಾನ್​​ ನಂತ್ರ ನಟಿ Akshara Singhಗೆ ಜೀವ ಬೆದರಿಕೆ...50 ಲಕ್ಷ ರೂ.ಗೆ ಬೇಡಿಕೆ

Bhojpuri actress Akshara Singh receives death threat
Published on

ಮುಂಬೈ: ಬಾಲಿವುಡ್​ ನಟ ಸಲ್ಮಾನ್​ ಖಾನ್​ ಹಾಗೂ ಶಾರುಕ್​ ಖಾನ್​ಗೆ ಜೀವ ಬೇದರಿಕೆ ಕರೆಗಳು ಬರುತ್ತಿರುವ ಬೆನ್ನಲ್ಲೇ ಇದೀಗ ನಟಿ ಅಕ್ಷರಾ ಸಿಂಗ್​​  (  Akshara Singh ) ಅವರಿಗೂ ಕೊಲೆ ಬೆದರಿಕೆ ಕರೆ ಬಂದಿದೆ ಎನ್ನಲಾಗಿದೆ.

ಬಿಗ್ ಬಾಸ್ OTT 1' (ಹಿಂದಿ) ನಲ್ಲಿ ಕಾಣಿಸಿಕೊಂಡಿದ್ದಕ್ಕಾಗಿ ಹೆಸರುವಾಸಿಯಾಗಿರುವ ಭೋಜ್‌ಪುರಿ ನಟಿ ಅಕ್ಷರಾ ಸಿಂಗ್ ಅವರಿಗೆ ಇತ್ತೀಚೆಗೆ ಬೆದರಿಕೆ ಕರೆ ಬಂದಿದ್ದು ಪೊಲೀಸ್​​ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.

ವರದಿಗಳ ಪ್ರಕಾರ, ನವೆಂಬರ್ 11 ರ ರಾತ್ರಿ ಅಕ್ಷರಾ ಸಿಂಗ್  ಅಕ್ಷರಾ ಸಿಂಗ್ ಅವರಿಗೆ ದೂರವಾಣಿ ಕರೆ ಮಾಡಿ ಬೆದರಿಕೆ ಹಾಕಲಾಗಿದ್ದು, ಕರೆ ಮಾಡಿದವರು 50 ಲಕ್ಷ ರೂಪಾಯಿ  ಬೇಡಿಕೆ ಇಟ್ಟಿದ್ದಾರೆ. ಹಣ ಕೊಡದಿದ್ದರೆ ಕೊಲೆ ಮಾಡುವುದಾಗಿ ಕರೆ ಮಾಡಿದ ವ್ಯಕ್ತಿ ನಟಿಗೆ ಬೆದರಿಕೆ ಹಾಕಿದ್ದ ಎನ್ನಲಾಗಿದೆ. ಆತಂಕಕಾರಿ ಬೆದರಿಕೆಗೆ  ಹಿನ್ನೆಲೆ ಅಕ್ಷರಾ ಪಾಟ್ನಾದಲ್ಲಿ ಎಫ್‌ಐಆರ್ ದಾಖಲಿಸಿದ್ದಾರೆ,  ಕಾನೂನು ಕ್ರಮ ಜರುಗಿಸುವಂತೆ ಕೋರಿದ್ದಾರೆ.

ಸಲ್ಮಾನ್ ಖಾನ್ ಮತ್ತು ಶಾರುಖ್ ಖಾನ್  ಇದೇ ರೀತಿಯ ಬೆದರಿಕೆಗಳನ್ನು ಎದುರಿಸಿದ್ದಾರೆ. ಅವರಂತೆಯೇ, ಅಕ್ಷರ ಈಗ ಬೆದರಿಕೆ ಕರೆಗೆ ಒಳಗಾಗಿದ್ದಾರೆ.

ಸುಲಿಗೆ ಮತ್ತು ಕೊಲೆ ಬೆದರಿಕೆಗೆ ಸಂಬಂಧಿಸಿದಂತೆ ಅಕ್ಷರ ಸಿಂಗ್ ದೂರು ದಾಖಲಿಸಿದ್ದಾರೆ ಎಂದು ಪೊಲೀಸ್ ಠಾಣೆಯ ಉಸ್ತುವಾರಿ ಅಧಿಕಾರಿ ಪ್ರಶಾಂತ್ ಕುಮಾರ್ ಭಾರದ್ವಾಜ್ ಖಚಿತಪಡಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net