ಹೃದಯಾಘಾತದಿಂದ ನಟ ಸುದೀಪ್ ಪಾಂಡೆ ನಿಧನ: ಸಿನಿಮಾ ಶೂಟಿಂಗ್ ವೇಳೆ ಕುಸಿದು ಬಿದ್ದ Sudip Pandey

Sudip Pandey
Published on

ಮುಂಬೈ: (Sudip Pandey )ಜನಪ್ರಿಯ ಭೋಜ್‌ಪುರಿ ನಟ, ನಿರ್ಮಾಪಕ ಮತ್ತು ರಾಜಕಾರಣಿ ಎಂದು ಗುರುತಿಸಿ ಕೊಂಡಿದ್ದ ಸುದೀಪ್ ಪಾಂಡೆ ಹೃದಯಾಘಾತದಿಂದ ನಿಧನರಾಗಿದ್ದಾರೆ.

ಮುಂಬೈನಲ್ಲಿ ಚಿತ್ರದ ಚಿತ್ರೀಕರಣದ ವೇಳೆ ಹೃದಯಾಘಾತದಿಂದ ಕುಸಿದು ಬಿದ್ದು ಕೊನೆಯುಸಿರೆಳೆದಿದ್ದಾರೆ. ಸುದೀಪ್ ಕೇವಲ ನಟ ಅಲ್ಲ. ನಿರ್ಮಾಪಕ, ರಾಜಕೀಯದಲ್ಲೂ ಸಕ್ರಿಯರಾಗಿದ್ದಾರೆ. ಇಳಿವಯಸ್ಸಿನಲ್ಲಿ ಹೃದಯಾಘಾತದಿಂದ ಇಹಲೋಕ ತ್ಯಜಿಸಿರುವುದು ಎಲ್ಲರಿಗೂ ಆಘಾತ ತಂದಿದೆ.

ಸುದೀಪ್ ನಿಧನದ ಸುದ್ದಿ ಕೇಳಿದ ಕುಟುಂಬಸ್ಥರು ಹಾಗೂ ಅಭಿಮಾನಿಗಳು ಕಂಬನಿ ಮಿಡಿದಿದ್ದಾರೆ. ಜನವರಿ 5 ರಂದು ಸುದೀಪ್ ಹುಟ್ಟುಹಬ್ಬವನ್ನು ಆಚರಿಸಲಾಯಿತು. ತಮ್ಮ ಮುಂದಿನ ಚಿತ್ರದ ಶೂಟಿಂಗ್‌ಗಾಗಿ ಮುಂಬೈಗೆ ಬಂದಿದ್ದರು. ಎಂದಿನಂತೆ ಸುದೀಪ್ ಪಾಂಡೆ ಬುಧವಾರ (ಜನವರಿ 15) ಸಿನಿಮಾವೊಂದರ ಶೂಟಿಂಗ್ ನಲ್ಲಿ ಪಾಲ್ಗೊಂಡಿದ್ದರು. ಈ ವೇಳೆ ಹೃದಯಾಘಾತದಿಂದ ಕುಸಿದು ಬಿದ್ದಿದ್ದಾರೆ. ಅದಾದ ಬಳಿಕ ಆಸ್ಪತ್ರೆಗೆ ದಾಖಲು ಮಾಡಿದರೂ ಫಲ ಸಿಗಲಿಲ್ಲ. ನಟನೆಯ ಹೊರತಾಗಿ ನಿರ್ಮಾಣದಲ್ಲೂ ತೊಡಗಿಸಿಕೊಂಡಿದ್ದಾರೆ. ಸುದೀಪ್ ಸಾವಿನ ಸುದ್ದಿಯನ್ನು ಅವರ ಆಪ್ತರು ಸಾಮಾಜಿಕ ಜಾಲತಾಣದಲ್ಲಿ ಖಚಿತಪಡಿಸಿದ್ದಾರೆ.

ಸುದೀಪ್ ಪಾಂಡೆ 2007 ರಲ್ಲಿ ಚಿತ್ರರಂಗಕ್ಕೆ ಕಾಲಿಟ್ಟರು. 'ಭೋಜ್‌ಪುರಿ ಭಯ್ಯಾ' ಅವರ ಮೊದಲ ಸಿನಿಮಾ. ಕಡಿಮೆ ಅವಧಿಯಲ್ಲಿ ಆಕ್ಷನ್ ಹೀರೋ ಆಗಿ ಗುರುತಿಸಿಕೊಂಡರು. ಸುದೀಪ್ ಅವರು 'ಖೂನಿ ದಂಗಲ್', 'ಮಸೀಹಾ ಬಾಬು', 'ಹಮರ್ ಸಂಗಿ ಬಜರಂಗಿ ಬಲಿ', 'ಹಮರ್ ಲಾಲ್ಕರ್', 'ಶರಾಬಿ' ಮತ್ತು 'ಕುರ್ಬಾನಿ' ಸಿನಿಮಾಗಳಲ್ಲಿ ನಟಿಸಿದ್ದಾರೆ. ಸಿನಿಮಾದಲ್ಲಿ ನಟಿಸುತ್ತಲೇ ರಾಜಕೀಯ ಪ್ರವೇಶಿಸಿದರು. ಅವರು ಎನ್‌ಸಿಪಿ ಪಕ್ಷದಲ್ಲಿ ಸಕ್ರಿಯವಾಗಿರುವ ಯುವ ನಾಯಕ. ಚಲನಚಿತ್ರಗಳಿಗೆ ಪ್ರವೇಶಿಸುವ ಮೊದಲು, ಅವರು ಸಾಫ್ಟ್‌ವೇರ್ ಇಂಜಿನಿಯರ್ ಆಗಿಯೂ ಕೆಲಸ ಮಾಡಿದರು.

ಸುದೀಪ್ ಪಾಂಡೆ ಫಿಟ್‌ನೆಸ್‌ಗೆ ಹೆಚ್ಚಿನ ಪ್ರಾಮುಖ್ಯತೆ ನೀಡುತ್ತಾರೆ. ಪ್ರತಿದಿನ ಜಿಮ್ ನಲ್ಲಿ ಗಂಟೆಗಟ್ಟಲೆ ವ್ಯಾಯಾಮ ಮಾಡುತ್ತಿದ್ದರು. ಅವನಿಗೆ ಹ್ಯಾಂಡ್ಸಮ್ ಹಂಕ್ ಎಂಬ ಹೆಸರೂ ಇದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net