ಖಡಕ್​ ಹಳ್ಳಿ ಹುಡುಗಿ ಗೆಟಪ್​ನಲ್ಲಿ ಅನುಪಮಾ ಪರಮೇಶ್ವರನ್​

ಅನುಪಮಾ ಪರಮೇಶ್ವರನ್​
ಅನುಪಮಾ ಪರಮೇಶ್ವರನ್​
Published on

ಪ್ರಮುಖ ಮುಖ್ಯಾಂಶಗಳು

  • ಭಿನ್ನ, ವಿಭಿನ್ನ ಪಾತ್ರಗಳಲ್ಲಿ ಮಿಂಚುತ್ತಿರುವ ಕನ್ನಡದ ಸಾರ್ವಭೌಮ ನಟಿ
  • ಭೋಗಿ ಚಿತ್ರದಲ್ಲಿ ಡಿ-ಗ್ಲಾಮರ್ ಪಾತ್ರದ ಕಾಣಿಸಿಕೊಂಡ ನಟಿ
  • 1960ರ ದಶಕದಲ್ಲಿ ಕಥೆಯಲ್ಲಿ ಮಿಂಚಲಿದ್ದಾರೆ ಅನುಪಮಾ
ಕಳೆದ ವರ್ಷ ಆರು ಚಿತ್ರಗಳಲ್ಲಿ ಮಿಂಚುವ ಮೂಲಕ ಬಹುಭಾಷಾ ತಾರೆ ಅನುಪಮಾ ಪರಮೇಶ್ವರನ್ ಸಿಕ್ಸರ್ ಬಾರಿಸಿದ್ದರು. ಆರು ಸಿನಿಮಾಗಳಲ್ಲೂ ಭಿನ್ನ, ವಿಭಿನ್ನ ಪಾತ್ರಗಳಲ್ಲಿ ನಟಿಸಿ ಸೈ ಎನಿಸಿಕೊಂಡಿದ್ದರು. ಇನ್ನು, ತಮಿಳಿನ ‘ಲಾಕ್‌ಡೌನ್’ ಮೂಲಕ ನಟಿಯು ಈ ವರ್ಷದ ಖಾತೆ ತೆರೆದಿದ್ದಾರೆ. ಈ ಚಿತ್ರ ರಿಲೀಸ್ ಆದ ಬೆನ್ನಲ್ಲೇ ತೆಲುಗಿನ ಮತ್ತೊಂದು ಚಿತ್ರ ‘ಭೋಗಿ’ ಬಿಡುಗಡೆಗೆ ಸಿದ್ಧವಾಗಿದೆ. ‘ಬೈಕರ್’ ಬಳಿಕ ನಟ ಶರ್ವಾನಂದ ಅಭಿನಯಿಸುತ್ತಿರುವ ಚಿತ್ರವಿದು. ಅವರಿಗೆ ಅನುಪಮಾ ಜೋಡಿಯಾಗಿದ್ದಾರೆ. ಈಗಾಗಲೇ ಚಿತ್ರತಂಡ ಶೂಟಿಂಗ್ ಪೂರ್ಣಗೊಳಿಸಿದ್ದು, ಪ್ರಚಾರಕ್ಕೆ ಧುಮುಕಿದೆ. ಈ ಹಿನ್ನೆಲೆಯಲ್ಲಿ ಇತ್ತೀಚೆಗೆ ಅನುಪಮಾ ಫಸ್ಟ್ ಲುಕ್ ಅನಾವರಣ ಮಾಡಲಾಗಿದೆ. ಇಲ್ಲಿ ಅವರು ಪಕ್ಕಾ ಹಳ್ಳಿ ಹುಡುಗಿ ಅವತಾರದಲ್ಲಿ, ‘ಕಂಡುಲ ಸುಲೋಚನಾ ರಾಣಿ’ ಎಂಬ ಪಾತ್ರದಲ್ಲಿದ್ದಾರೆ. ಫಸ್ಟ್ ಲುಕ್‌ನಲ್ಲಿ ಅನುಪಮಾ ತಲೆಯ ಮೇಲೆ ಬುಟ್ಟಿ ಹೊತ್ತಿದ್ದು, ಇನ್ನೊಂದು ಕೈಯಲ್ಲಿ ಗಿಡದ ಎಲೆಗಳು, ಟಿನ್ ಬಾಕ್ಸ್ ಹಿಡಿದಿದ್ದಾರೆ. ಲಂಗ, ಧಾವಣಿ ಧರಿಸಿ ಹಳ್ಳಿ ಹುಡುಗಿ ಪಾತ್ರದಲ್ಲಿ ಮಿಂಚಿದ್ದಾರೆ. ಮಾಡರ್ನ್ ಮತ್ತು ಗ್ಲಾಮರ್ ಲುಕ್‌ನಲ್ಲಿ ಕಾಣಿಸಿಕೊಳ್ಳುತ್ತಿದ್ದ ಅನುಪಮಾರ ಹೊಸ ಅವತಾರಕ್ಕೆ ಮೆಚ್ಚುಗೆ ವ್ಯಕ್ತವಾಗಿದೆ. ಇದು 1960ರ ದಶಕದ ತೆಲಂಗಾಣ ಹಾಗೂ ಮಹಾರಾಷ್ಟ್ರ ಗಡಿಭಾಗದ ಹಳ್ಳಿಯೊಂದರಲ್ಲಿ ನಡೆಯುವ ಕಥೆಯಾಗಿದೆ. ‘ರಚ್ಚ’, ‘ಬೆಂಗಾಲ್ ಟೈಗರ್’ ಖ್ಯಾತಿಯ ಸಂಪತ್ ನಂದಿ ‘ಭೋಗಿ’ಗೆ ಆ್ಯಕ್ಷನ್-ಕಟ್ ಹೇಳುತ್ತಿದ್ದಾರೆ. ಅನುಪಮಾ, ಶರ್ವಾನಂದ್ ಜತೆಗೆ ಡಿಂಪಲ್ ಹಯಾತಿ, ರೋಹಿತ್ ಪಾಠಕ್ ಕಲಾಬಳಗದಲ್ಲಿದ್ದಾರೆ. ಇದೇ ಆಗಸ್ಟ್ 28ಕ್ಕೆ ಸಿನಿಮಾ ಪ್ಯಾನ್ ಇಂಡಿಯಾ ರಿಲೀಸ್ ಆಗಲಿದೆ. -ಏಜೆನ್ಸೀಸ್
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net