ತಂದೆಯ ಕಣ್ಣೆದುರಲ್ಲೇ ಭೀಮಾನದಿಯಲ್ಲಿ ಬೈಕ್​ ಸಮೇತ ಕೊಚ್ಚಿಹೋದ ಮಗ

RameshBasaragi-Missing
Published on

ವಿಜಯಪುರ: ಯಮಪಾಶ ಯಾವ ರೂಪದಲ್ಲಿ ಬರುತ್ತೋ ಆ ದೇವರೇ ಬಲ್ಲ. ಸಂಬಂಧಿಕರೊಬ್ಬರ ಅಂತ್ಯಸಂಸ್ಕಾರಕ್ಕೆಂದು ಹೋಗಿದ್ದ ತಂದೆ-ಮಗ ಇಬ್ಬರು ಊರಿಗೆ ವಾಪಸ್​ ಆಗುತ್ತಿದ್ದರು. ಮಾರ್ಗಮಧ್ಯೆ ನೀರಿನ ರೂಪದಲ್ಲಿ ಕಾಯುತ್ತಿದ್ದ ಜವರಾಯ ತಂದೆಯ ಕಣ್ಣೆದುರಲ್ಲೇ ಮಗನನ್ನು ಬಾರದ ಲೋಕಕ್ಕೆ ಕರೆದೊಯ್ದ ಹೃದಯವಿದ್ರಾವಕ ಘಟನೆ ಚಡಚಣ ತಾಲೂಕಿನಲ್ಲಿ ಸಂಭವಿಸಿದೆ.

ಹತ್ತಳ್ಳಿ ಗ್ರಾಮದ ರಮೇಶ ಬಸರಗಿ(25) ಮೃತ ದುರ್ದೈವಿ. ಸೆ.9ರಂದು ಸಂಬಂಧಿಕರೊಬ್ಬರ ಅಂತ್ಯಕ್ರಿಯೆಗೆಂದು ಸೊಲ್ಲಾಪುರಕ್ಕೆ ರಮೇಶ ಬಸರಗಿ ಮತ್ತು ಅವರ ತಂದೆ ದುಂಡಪ್ಪ ಇಬ್ಬರೂ ಬೈಕ್​ನಲ್ಲಿ ಹೋಗಿದ್ದರು. ಮೃತರ ಅಂತಿಮ ದರ್ಶನ ಪಡೆದು ಸ್ವಗ್ರಾಮಕ್ಕೆ ವಾಪಸ್​ ಆಗುತ್ತಿದ್ದರು. ಮಹಾರಾಷ್ಟ್ರದಲ್ಲಿ ಭಾರೀ ಮಳೆಯಾಗಿದ್ದು, ಭೀಮಾನದಿ ಉಕ್ಕಿ ಹರಿಯುತ್ತಿದೆ. ಭೀಮಾನದಿಗೆ ಅಡ್ಡಲಾಗಿರುವ ಉಮರಾಣಿ ಬ್ರಿಜ್ ಕಂ ಬ್ಯಾರೇಜ್(ಬಾಂದಾರ್) ಮೇಲೂ ನೀರು ಹರಿಯುತ್ತಿತ್ತು. ಬಾಂದಾರ್ ಬಳಿ ಬಂದಾಗ ಬೈಕ್​ನಿಂದ ಇಳಿದ ತಂದೆ ದುಂಡಪ್ಪ, ನಡೆದುಕೊಂಡೇ ಸಾಗುತ್ತಿದ್ದರು. ಈ ವೇಳೆ ಮಗ ರಮೇಶ ಬೈಕ್ ದಾಟಿಸುವಾಗ ನೋಡನೋಡುತ್ತಿದ್ದಂತೆಯೇ ಬೈಕ್​ ಸಮೇತ ಕೊಚ್ಚಿಹೋದ.

ನಿರಲ್ಲಿ ಕೊಚ್ಚಿಹೋದ ಮಗನಿಗಾಗಿ ಎರಡು ದಿನ ಹುಡುಕಾಡಿದ ತಂದೆ ಬಳಿಕ ಚಡಚಣ ಠಾಣೆಗೆ ದೂರು ನೀಡಿದ್ದಾರೆ. ಬೈಕ್ ಸಮೇತ ಭಿಮಾನದಿಯಲ್ಲಿ ರಮೇಶ ಕೊಚ್ಚಿಹೋಗುತ್ತಿರುವ ದೃಶ್ಯ ಸ್ಥಳೀಯರ ಮೊಬೈಲ್​ನಲ್ಲಿ ಸೆರೆಯಾಗಿದೆ. ಸಂಬಂಧಿಕರೊಬ್ಬರ ಅಂತ್ಯಕ್ರಿಯೆಗೆಂದು ಹೋದ ಮಗ ವಾಪಸ್​ ಮನೆಗೆ ಬರುವ ದಾರಿಯಲ್ಲೇ ನದಿಪಾಲಾದ ಸುದ್ದಿ ಕೇಳಿ ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿದೆ.

ವಿಜ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net