ದೀಪಾವಳಿಗೆ ಭೀಮ ಪಟಾಕಿ?; ಭರದಿಂದ ಸಾಗಿದೆ ಚಿತ್ರದ ಪೋಸ್ಟ್ ಪ್ರೊಡಕ್ಷನ್ ಕೆಲಸ

BHEEMA
Published on

ಬೆಂಗಳೂರು: ‘ಸಲಗ’ ಚಿತ್ರದ ಯಶಸ್ಸಿನ ಬಳಿಕ ದುನಿಯಾ ವಿಜಯ್ ನಟಿಸಿ, ನಿರ್ದೇಶಿಸುತ್ತಿರುವ ಸಿನಿಮಾ ‘ಭೀಮ’. ಕೆಲ ದಿನಗಳ ಹಿಂದಷ್ಟೇ ಚಿತ್ರೀಕರಣ ಪೂರ್ಣಗೊಳಿಸಿದ್ದ ಚಿತ್ರತಂಡ ಸದ್ಯ ಪೋಸ್ಟ್ ಪ್ರೊಡಕ್ಷನ್ ಕೆಲಸಗಳ ಕೊನೆಯ ಹಂತದಲ್ಲಿದೆ.

ಹೀಗಾಗಿಯೇ ಚಿತ್ರದ ರಿಲೀಸ್‌ಗೆ ಪ್ಲ್ಯಾನ್ ಮಾಡಿಕೊಳ್ಳುತ್ತಿರುವ ‘ಭೀಮ’ ಟೀಮ್, ಇದೇ ನವೆಂಬರ್ ತಿಂಗಳ ದೀಪಾವಳಿ ಹಬ್ಬದ ಸಂಭ್ರಮದಲ್ಲಿ ಬಿಡುಗಡೆ ಮಾಡುವ ಆಲೋಚನೆಯಲ್ಲಿದೆ. ಮುಂದಿನ ವಾರ ಅಧಿಕೃತವಾಗಿ ಚಿತ್ರದ ಬಿಡುಗಡೆ ದಿನಾಂಕವನ್ನು ದುನಿಯಾ ವಿಜಯ್ ಮತ್ತು ತಂಡ ೋಷಣೆ ಮಾಡಲಿದೆ. ದುನಿಯಾ ವಿಜಯ್ ನಾಯಕನಾಗಿದ್ದು, ಅವರಿಗೆ ರಂಗಭೂಮಿ ಪ್ರತಿಭೆ ಅಶ್ವಿನಿ ನಾಯಕಿಯಾಗಿದ್ದಾರೆ. ಜತೆಗೆ ರಂಗಾಯಣ ರಘು, ಅಚ್ಯುತ್ ಕುಮಾರ್, ಕಾಕ್ರೋಚ್ ಸುಧಿ, ಕಲ್ಯಾಣಿ, ಪ್ರಿಯಾ ಶಠಮರ್ಷಣ, ಗಿಲಿಗಿಲಿ ಚಂದ್ರು, ಬ್ಲ್ಯಾಕ್ ಡ್ರಾೃಗನ್ ಮಂಜು, ಮಹಿಳಾ ಬೀಟ್ ಬಾಕ್ಸರ್ ಆ್ಯಶ್ ಮೆಲೋ ಮುಖ್ಯ ಭೂಮಿಕೆಯಲ್ಲಿದ್ದಾರೆ.

ಉಳಿದಂತೆ ಶಿವಸೇನಾ ಛಾಯಾಗ್ರಹಣ, ಚರಣ್ ರಾಜ್ ಸಂಗೀತ, ಮಾಸ್ತಿ ಸಂಭಾಷಣೆ, ದೀಪು ಎಸ್. ಕುಮಾರ್ ಸಂಕಲನ, ಚೇತನ್ ಡಿಸೋಜಾ, ವಿನೋದ್, ಗೌತಮ್ ಸಾಹಸ ನಿರ್ದೇಶನ, ಧನು ಮಾಸ್ಟರ್ ನೃತ್ಯಸಂಯೋಜನೆ ಚಿತ್ರಕ್ಕಿರಲಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net