40ನೇ ವಯಸ್ಸಿನಲ್ಲಿ ಅವಳಿ ಮಕ್ಕಳ ನಿರೀಕ್ಷೆಯಲ್ಲಿ ನಟಿ ಭಾವನಾ ರಾಮಣ್ಣ! | Bhavana Ramanna

ವಿಜಯವಾಣಿ (1)
Published on

ಬೆಂಗಳೂರು: ಕನ್ನಡ ಚಿತ್ರರಂಗದಲ್ಲಿ 'ಚಂದ್ರಮುಖಿ ಪ್ರಾಣಸಖಿ' ಚಿತ್ರದಿಂದಲೇ ಕನ್ನಡ ಸಿನಿಪ್ರೇಕ್ಷಕರ ಮನಗೆದ್ದ ನಟಿ ಭಾವನಾ ರಾಮಣ್ಣ (Bhavana Ramanna), ಐವಿಎಫ್​ ಮೂಲಕ ತಮ್ಮ ಮೊದಲ ಮಗುವಿನ ನಿರೀಕ್ಷೆಯಲ್ಲಿದ್ದಾರೆ.

ದಾಂಪತ್ಯ ಜೀವನದ ಬಗ್ಗೆ ಆಸಕ್ತಿ ತೋರದ ಭಾವನಾ, ಇಲ್ಲಿಯವರೆಗೂ ಮದುವೆ ಆಗಲೇ ಇಲ್ಲ. ಆದರೆ, ಮಗು ಮಾಡಿಕೊಳ್ಳುವ ಬಯಕೆ ಹೆಚ್ಚಿದ ಹಿನ್ನಲೆ ಐವಿಎಫ್​ ಮೂಲಕ ಅವಳಿ ಮಕ್ಕಳ ಜನನಕ್ಕೆ ಎದುರುನೋಡುತ್ತಿದ್ದಾರೆ. ಈ ವಿಷಯವನ್ನು ತಮ್ಮ ಜಾಲತಾಣ ಖಾತೆಯಲ್ಲಿ ನಟಿ ಬಹಿರಂಗಪಡಿಸಿದ್ದಾರೆ. ಪ್ರಸ್ತುತ ನಟಿ ಆರು ತಿಂಗಳ ಗರ್ಭೀಣಿ ಎನ್ನಲಾಗಿದೆ.

ಸಿನಿಮಾ ರಂಗ ಮಾತ್ರವಲ್ಲದೇ ರಾಜಕೀಯದಲ್ಲಿ ಸಕ್ರಿಯರಾಗಿದ್ದ ಭಾವನಾ, ಆಗಾಗ್ಗೆ ತಮ್ಮ ಖಡಕ್ ಹೇಳಿಕೆಗಳಿಂದ ಜಾಲತಾಣಗಳಲ್ಲಿ ಸದ್ದು ಮಾಡುತ್ತಿದ್ದರು. ಕಳೆದ ಹಲವು ತಿಂಗಳುಗಳಿಂದ ಹೆಚ್ಚಾಗಿ ಎಲ್ಲಿಯೂ ಕಾಣಿಸಿಕೊಳ್ಳದ ನಟಿ ಇದೀಗ ತಾವು ತಾಯಿಯಾಗುತ್ತಿರುವ ಸಂತಸವನ್ನು ತಮ್ಮ ಅಭಿಮಾನಿಗಳು ಮತ್ತು ಅನುಯಾಯಿಗಳೊಂದಿಗೆ ಹಂಚಿಕೊಂಡಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net