

OTT Films: ವರ್ಷದ ಮೊದಲಾರ್ಧದಲ್ಲಿ ಚಿತ್ರಮಂದಿರ ಮತ್ತು ಒಟಿಟಿಯಲ್ಲಿ ತೆರೆಕಂಡ ಬಹುತೇಕ ಚಿತ್ರಗಳು ಸಿನಿಪ್ರಿಯರನ್ನು ರಂಜಿಸುವಲ್ಲಿ ವಿಫಲವಾಗಿದೆ. ಭಾರತೀಯ ಚಲನಚಿತ್ರೋದ್ಯಮದ ಹಲವು ಜಾನರ್ನ ಸಿನಿಮಾಗಳು ರಿಲೀಸ್ ಆಗಿದ್ದೇ ಆದರೂ ನೋಡುಗರ ಗಮನ ಸೆಳೆಯುವಲ್ಲಿ ಎಡವಿದೆ. ಈ ಪೈಕಿ ಒಟಿಟಿಯಲ್ಲಿ ಬಿಡುಗಡೆಗೊಂಡ ಕೆಲವೇ ಕೆಲವು ತಮಿಳು ಮತ್ತು ಮಲಯಾಳಂನ ಕ್ರೈಂ, ಥ್ರಿಲ್ಲರ್ ಕಥಾಹಂದರಗಳ ಸಿನಿಮಾಗಳು ಸಿನಿಪ್ರಿಯರ ಕುತೂಹಲವನ್ನು ಕೆರಳಿಸುವಲ್ಲಿ ಮೇಲುಗೈ ಸಾಧಿಸಿವೆ.
ಅದರಲ್ಲೂ ಇತ್ತೀಚಿಗೆ ತೆರೆಕಂಡಿರುವ ಮಾಲಿವುಡ್ ಮತ್ತು ಕಾಲಿವುಡ್ ಚಿತ್ರಗಳು ನಿರೀಕ್ಷೆಗಿಂತ ಹೆಚ್ಚಿನ ಮಟ್ಟಿಗೆ ಪ್ರೇಕ್ಷಕರಿಂದ ವಿಮರ್ಶೆ ಮತ್ತು ಮೆಚ್ಚುಗೆಗಳನ್ನು ಗಳಿಸಿವೆ. ಹಲವಾರು ಸಿನಿಮಾಗಳ ಪೈಕಿ ಕೆಲವೇ ಕೆಲವು ಚಿತ್ರಗಳು ಮತ್ತೊಮ್ಮೆ ಒಟಿಟಿಯಲ್ಲಿ ಹೋಗಿ ನೋಡಬೇಕು ಎನ್ನಿಸುವ ಹಂತಕ್ಕೆ ಗಮನ ಸೆಳೆದಿವೆ. ಅಸಲಿಗೆ ಈ ಸಿನಿಮಾಗಳನ್ನು ನೀವು ನೋಡಿದ್ದೀರಾ ಎಂಬುದನ್ನು ಒಮ್ಮೆ ಕಣ್ಣಾಡಿಸಿ. ನೋಡಿಲ್ಲ ಎಂದಾದರೆ, ಇಂದೇ ನೋಡಿ. ಕುತೂಹಲ ಕೆರಳಿಸಿರುವ ಆ ಕ್ರೈಂ, ಸಸ್ಪೆನ್ಸ್ ಚಿತ್ರಗಳ ಪಟ್ಟಿ ಈ ಕೆಳಕಂಡಂತಿದೆ ಗಮನಿಸಿ.
1. ರೇಖಾಚಿತ್ರಂ (ಮಲಯಾಳಂ)
ಒಟಿಟಿ: ಸೋನಿ ಲೈವ್
2. ಆಫೀಸರ್ ಆನ್ ಡ್ಯೂಟಿ (ಮಲಯಾಳಂ)
ಒಟಿಟಿ: ನೆಟ್ಫ್ಲಿಕ್ಸ್
3. ಕಣ್ಣೂರ್ ಸ್ಕ್ವಾಡ್ (ಮಲಯಾಳಂ)
ಒಟಿಟಿ: ಜಿಯೋ ಹಾಟ್ಸ್ಟಾರ್
4. ನೇರು (ಮಲಯಾಳಂ)
ಒಟಿಟಿ: ಜಿಯೋ ಹಾಟ್ಸ್ಟಾರ್
5. ಅಡೋಲಾಸೆನ್ಸ್ (ಇಂಗ್ಲಿಷ್)
ಒಟಿಟಿ: ನೆಟ್ಫ್ಲಿಕ್ಸ್
6. ಕೋರ್ಟ್: ಸ್ಟೇಟ್ ವರ್ಸಸ್ ಎ ನೋಬಡಿ (ತೆಲುಗು)
ಒಟಿಟಿ: ಜಿಯೋ ಹಾಟ್ಸ್ಟಾರ್
7. ಯುದ್ಧಕಾಂಡ-2 (ಕನ್ನಡ)
ಒಟಿಟಿ: ಪ್ರೈಮ್ ವಿಡಿಯೋ