

ಮೈಸೂರು; ಆಷಾಢ ಮಾಸದ ಎರಡನೇ ಶುಕ್ರವಾರ ದಿನವಾದ ಇಂದು (04) ನಟ ದರ್ಶನ್ ತಮ್ಮ ಪತ್ನಿ ಮತ್ತು ಕುಟುಂಬಸ್ಥರ ಜೊತೆ ಬೆಳಗ್ಗೆಯೇ ಮೈಸೂರಿನ ನಾಡದೇವತೆ ಚಾಮುಂಡೇಶ್ವರಿ ದರ್ಶನ ಪಡೆದರು. ಈ ವೇಳೆ ಸಹೋದರ ದಿನಕರ್ ಸಹ ಸಾಥ್ ನೀಡಿದರು.
ನಟ ದರ್ಶನ್ ಕಾರು ಚಾಮುಂಡಿ ಬೆಟ್ಟಕ್ಕೆ ಬರುತ್ತಿದ್ದಂತೆ ಅಭಿಮಾನಿಗಳು ಕಾರಿನ ಸುತ್ತ ಜಮಾಯಿಸಿದ್ದರು. ಕಾರಿನಿಂದ ದರ್ಶನ್ ಇಳಿಯುತ್ತಿದ್ದಂತೆ, ಡಿಬಾಸ್, ಡಿಬಾಸ್ ಎಂದು ಕೂಗುವ ಮೂಲಕ ಮೊಬೈಲ್ ಹಿಡಿದು ವಿಡಿಯೋ ಮಾಡಲು ಮುಗಿಬಿದ್ದರು. ಅಭಿಮಾನಿಗಳಿಗೆ ಕೈ ಮುಗಿದ ದರ್ಶನ್ ದೇವಸ್ಥಾನದ ಒಳಗೆ ಹೋಗಿ ಪೂಜೆ ಮಾಡಿಸಿದರು.
(ಏಜೆನ್ಸೀಸ್)
2ನೇ ಆಷಾಢದ ಶುಕ್ರವಾರದ ಹಿನ್ನೆಲೆ ದೇವಿಗೆ ಮುಂಜಾನೆ 3:30ಕ್ಕೆ ವಿವಿಧ ಅಭಿಷೇಕಗಳನ್ನು ದೇವಿಗೆ ಮಾಡಲಾಗಿದೆ. ಬೆಳಗ್ಗೆ 6 ಗಂಟೆಯಿಂದ ಸಾರ್ವಜನಿಕ ದರ್ಶನಕ್ಕೆ ಅವಕಾಶ ನೀಡಲಾಗಿದೆ. ಭಕ್ತರು ಸರತಿ ಸಾಲಿನಲ್ಲಿ ನಿಂತು ದೇವಿಯ ದರ್ಶನ ಪಡೆಯುತ್ತಿದ್ದಾರೆ. ಇಂದು ದೇವಸ್ಥಾನದಲ್ಲಿ ತೋತಾಪುರಿ ಮೇಕೆಜೋಳ ಹಾಗೂ ಕಮಲದ ಹೂವಿನ ಅಲಂಕಾರ ಮಾಡಲಾಗಿದೆ. ದೇವಾಲಯಕ್ಕೆ ಅಪಾರ ಸಂಖ್ಯೆಯ ಭಕ್ತರು ಆಗಮಿಸಿದ್ದಾರೆ.