ಭವನ ಸಮಾಜದ ಅಭಿವೃದ್ಧಿಗೆ ಪೂರಕ

23 tth 01
ತೀರ್ಥಹಳ್ಳಿಯ ಕುರುವಳ್ಳಿ ಬಡಾವಣೆಯಲ್ಲಿ ನಿರ್ಮಿಸಿರುವ ಆರ್‌ಎಸ್‌ಬಿ ಸಭಾಭವನವನ್ನು ಶಾಸಕ ಆರಗ ಜ್ಞಾನೇಂದ್ರ ಉದ್ಘಾಟಿಸಿದರು. ಸುಮಾ ರಾಮಚಂದ್ರ , ಡಾ. ಶಾಂತಾರಾಮ ಪ್ರಭು ನಿಟ್ಟೂರು ಇತರರಿದ್ದರು.
Published on

ತೀರ್ಥಹಳ್ಳಿ: ಸಾಮಾಜಿಕ, ಶೈಕ್ಷಣಿಕ ಹಾಗೂ ಧಾರ್ಮಿಕ ಕಾರ್ಯಗಳಿಗೆ ಪೂರಕವಾಗಿ ಸಮುದಾಯ ಭವನಗಳು ಕಾರ್ಯ ನಿರ್ವಹಿಸಬೇಕು ಎಂದು ಶಾಸಕ ಆರಗ ಜ್ಞಾನೇಂದ್ರ ಹೇಳಿದರು.

ಪಟ್ಟಣದ ಕುರುವಳ್ಳಿ ಬಡಾವಣೆಯಲ್ಲಿ ನಿರ್ಮಾಣಗೊಂಡಿರುವ ರಾಜಾಪುರ ಸಾರಸ್ವತ ಬ್ರಾಹ್ಮಣ (ಆರ್‌ಎಸ್‌ಬಿ) ಸಭಾಭವನವನ್ನು ಉದ್ಘಾಟಿಸಿ ಮಾತನಾಡಿ, ಸಮಾಜದ ದಾನಿಗಳ ನೆರವಿನಿಂದ ಸುಸಜ್ಜಿತವಾಗಿ ನಿರ್ಮಾಣಗೊಂಡಿರುವ ಸಭಾಭವನ ಸಮಾಜದ ಬೆಳವಣಿಗೆಯಲ್ಲಿ ಮಹತ್ವದ ಪಾತ್ರ ನಿರ್ವಹಿಸಬೇಕು ಎಂದು ತಿಳಿಸಿದರು.

ಜನಸಂಖ್ಯೆಯಲ್ಲಿ ಕಡಿಮೆಯಿದ್ದರೂ ರಾಜಾಪುರ ಸಾರಸ್ವತ ಬ್ರಾಹ್ಮಣ ಸಮಾಜದವರು ಸಂಘಟಿತರಾಗಿದ್ದು, ಸನಾತನ ಧರ್ಮ ಮತ್ತು ರಾಷ್ಟ್ರೀಯತೆ ಭಾವನೆ ಹೊಂದಿದ್ದಾರೆ ಎಂದರು. ಭವನಕ್ಕೆ ಹೆಚ್ಚು ದೇಣಿಗೆ ನೀಡಿದ ಉದ್ಯಮಿ ನಟರಾಜ ಕಾಮತ್ ದಂಪತಿಯನ್ನು ಗೌರವಿಸಲಾಯಿತು.

ವಿಶ್ರಾಂತ ಪ್ರಾಚಾರ್ಯ ಡಾ. ಶಾಂತಾರಾಮ ಪ್ರಭು ನಿಟ್ಟೂರು, ಸಂಘದ ಅಧ್ಯಕ್ಷೆ ಸುಮಾ ರಾಮಚಂದ್ರ ಬೋರ್ಕಾರ್, ಪಪಂ ಅಧ್ಯಕ್ಷ ರಹಮತ್ ಉಲ್ಲಾ ಅಸಾದಿ, ಮೇಲಿನ ಕುರುವಳ್ಳಿ ಗ್ರಾಪಂ ಅಧ್ಯಕ್ಷ ಯು.ಡಿ.ವೆಂಕಟೇಶ್, ದಕ್ಷಿಣ ಕನ್ನಡ ವಾಣಿಜ್ಯ ಇಲಾಖೆ ಜಂಟಿ ನಿರ್ದೇಶಕ ಗೋಕುಲದಾಸ್ ನಾಯಕ್, ಸಂಘದ ಉಪಾಧ್ಯಕ್ಷ ಎನ್.ಎಸ್.ಸುರೇಶ್, ಕಾರ್ಯದರ್ಶಿ ಅಶೋಕ್ ವಿ. ನಾಯಕ್, ಎಚ್.ಎನ್.ರಾಘವೇಂದ್ರ ಭಾಗವ್, ವಿಶ್ವನಾಥ ಪ್ರಭು ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net