ವಾರಣಾಸಿ ಪ್ರವೇಶಿಸಿದ 'ಭಾರತ್ ಜೋಡೋ ನ್ಯಾಯ್ ಯಾತ್ರೆ'!

Untitled design - 2024-02-17T141256.411
Published on

ವಾರಣಾಸಿ: ಕಾಂಗ್ರೆಸ್‌ ನಾಯಕ ರಾಹುಲ್ ಗಾಂಧಿ ನೇತೃತ್ವದ 'ಭಾರತ್ ಜೋಡೋ ನ್ಯಾಯ್ ಯಾತ್ರೆ' ಉತ್ತರಪ್ರದೇಶದಿಂದ ಇದೀಗ ಪ್ರಧಾನಿ ನರೇಂದ್ರ ಮೋದಿ ಅವರ ಕ್ಷೇತ್ರ ವಾರಣಾಸಿಗೆ ಪ್ರವೇಶಿಸಿದೆ. ರಾಹುಲ್ ಗಾಂಧಿ, ಪಕ್ಷದ ರಾಜ್ಯಾಧ್ಯಕ್ಷ ಅಜಯ್ ರೈ ಮತ್ತು ಇತರ ಕಾಂಗ್ರೆಸ್ ನಾಯಕರೊಂದಿಗೆ ತೆರೆದ ಜೀಪಿನ ಮೇಲೆ ನಿಂತು ದೇವಸ್ಥಾನದ ಪಟ್ಟಣದ ಜನನಿಬಿಡ ಗುಡೌಲಿ ಪ್ರದೇಶಕ್ಕೆ ಯಾತ್ರೆ ಕೈಗೊಂಡಿದ್ದು, ನಗರದ ಕಾಶಿ ವಿಶ್ವನಾಥ ದೇವಸ್ಥಾನಕ್ಕೂ ಭೇಟಿ ನೀಡಿದ್ದಾರೆ.

ಅಪ್ನಾ ದಳ (ಕಾಮೆರವಾಡಿ) ನಾಯಕಿ ಪಲ್ಲವಿ ಪಟೇಲ್ ಮತ್ತು ಸಮಾಜವಾದಿ ಪಕ್ಷದ (ಎಸ್‌ಪಿ) ಸಿರತ್ತು ಶಾಸಕರೂ ವಾರಣಾಸಿಯಲ್ಲಿ ನಡೆಯುತ್ತಿರುವ ಯಾತ್ರೆಯಲ್ಲಿ ಪಾಲ್ಗೊಂಡರು. ಶುಕ್ರವಾರ ಯಾತ್ರೆಯು ಬಿಹಾರದಿಂದ ಚಂದುವಾಲಿಯಲ್ಲಿ ರಾಜ್ಯವನ್ನು ಪ್ರವೇಶಿಸಿ, ರಾತ್ರಿ ಸ್ಥಗಿತಗೊಂಡಿತ್ತು. ಸಮಾಜವಾದಿ ಪಕ್ಷದ ಅಧ್ಯಕ್ಷ ಅಖಿಲೇಶ್ ಯಾದವ್ ರಾಯ್ ಬರೇಲಿಯಲ್ಲಿ ಯಾತ್ರೆಯಲ್ಲಿ ಪಾಲ್ಗೊಳ್ಳುವುದಾಗಿ ತಿಳಿಸಿದ್ದಾರೆ.

ಯಾತ್ರೆಯು ರಾಜಸ್ಥಾನಕ್ಕೆ ಪ್ರವೇಶಿಸುವ ಮೊದಲು ಉತ್ತರಪ್ರದೇಶದ ಮೂಲಕ ಸಂಚರಿಸಲಿದೆ. ಪೂರ್ವದಿಂದ ಪಶ್ಚಿಮಕ್ಕೆ ಮಣಿಪುರ-ಮುಂಬೈ ಯಾತ್ರೆಯು 15 ರಾಜ್ಯಗಳ ಮೂಲಕ 6,700 ಕಿಮೀ ಕ್ರಮಿಸುತ್ತದೆ ಮತ್ತು ಯಾತ್ರೆ ಸಾಗುವ ಮಧ್ಯೆ ಸಾಮಾನ್ಯ ಜನರನ್ನು ಭೇಟಿಯಾಗುವಾಗ ನ್ಯಾಯ ಸಂದೇಶವನ್ನು ಹೈಲೈಟ್ ಮಾಡುವ ಗುರಿಯನ್ನು ಹೊಂದಿದೆ ಎಂದು ವರದಿಯಾಗಿದೆ,(ಏಜೆನ್ಸೀಸ್).

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net